ಬಂಟ್ವಾಳ :ತಾಲೂಕು ಕೊಯಿಲ ಸ.ಪ್ರೌ.ಶಾಲೆಯಲ್ಲಿ ಶನಿವಾರ ಶಾಲಾ ಪ್ರಾರಂಭೋತ್ಸವ ವಿಜೃಂಭಣೆಯಿಂದ ಜರಗಿತು. ಕೊಯಿಲ ಪೇಟೆಯಿಂದ ಶಾಲೆಯವರೆಗೆ ಪೂರ್ಣ ಕುಂಭ ಸಹಿತ ಬ್ಯಾಂಡ್ ವಾದ್ಯ ವಾದನದೊಂದಿಗೆ ಮೆರವಣಿಗೆಯಲ್ಲಿ ವಿದ್ಯಾಥರ್ಿಗಳನ್ನು ಶಾಲೆಗೆ ಕರೆತಂದು ಸ್ವಾಗತಿಸಲಾಯಿತು.
8ನೇ ತರಗತಿಗೆ ಸೇರ್ಪಡೆಗೊಂಡ 107 ವಿದ್ಯಾಥರ್ಿಗಳನ್ನು ವಿಶೇಷವಾಗಿ ಅಭಿನಂದಿಸಲಾಯಿತು. ವಿದ್ಯಾಥರ್ಿಗಳಿಗೆ ಸಿಹಿ ಹಂಚಲಾಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಉಪಾಧ್ಯಕ್ಷ ದೇವಪ್ಪ ಕಕರ್ೇರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸರಕಾರದಿಂದ ಕೊಡಮಾಡಿದ ಉಚಿತ ಪಠ್ಯಪುಸ್ತಕ ಮತ್ತು ಸಮವಸ್ತ್ರವನ್ನು ವಿದ್ಯಾಥರ್ಿಗಳಿಗೆ ವಿತರಿಸಲಾಯಿತು. ಶಿಕ್ಷಣ ತಜ್ಞ ರಾಮಣ್ಣ ರೈ , ಗ್ರಾ.ಪಂ.ಸದಸ್ಯ ಪ್ರಶಾಂತ್ ಶೆಟ್ಟಿ , ಜನಜಾಗೃತಿ ವೇದಿಕೆ ಅಧ್ಯಕ್ಷ ಜಗದೀಶ ಕೊಯಿಲ, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ರಾಜೇಶ್ ಜೈನ್, ಶಶಿಧರ ಆಚಾರ್ಯ, ಯಶೋಧರ ರೈ , ಗಂಗಾಧರ ಪಿಲ್ಕಾಜೆ, ರಾಮಚಂದ್ರ ಶೆಟ್ಟಿಗಾರ್, ಸೇಸಮ್ಮ , ಶಾಲಾ ಶಿಕ್ಷಕ ವೃಂದ ಮತ್ತು ಪೋಷಕರು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ಶಮಂತ್ ಎಂ.ವಿ. ಅವರು ಅವರು ಸ್ವಾಗತಿಸಿದರು. ಶಿಕ್ಷಕಿ ನಿವೇದಿತ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಜನಾರ್ಧನ ಅವರು ಶಾಲಾ ನಿಬಂಧನೆಗಳ ಮಾಹಿತಿ ನೀಡಿದರು. ರಮೇಶ ಮಯ್ಯ ಕಾರ್ಯಕ್ರಮ ನಿರೂಪಿಸಿದರು.
