ಬಂಟ್ವಾಳ: ಶ್ರೀ ಸಾಯಿ ಕಿಡ್ಝೋನ್ ಪ್ಲೇ ಸ್ಕೂಲ್ ಬಿ.ಸಿರೋಡ್ ಇದರ ದ್ವಿತೀಯ ವರ್ಷದ ವಾರ್ಷಿಕೋತ್ಸವ ಸಮಾರಂಭವು ಪ್ಲೇ ಸ್ಕೂಲ್ ವಠಾರದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷೆಯನ್ನು ಪುರಸಭಾ ಅಧ್ಯಕ್ಷ ರಾಮಕೃಷ್ಣ ಆಳ್ವ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ತುಕರಾಮ ಪೂಜಾರಿ, ವಕೀಲರಾದ ರಾಮಚಂದ್ರ ಶೆಟ್ಟಿ ದಂಡೆ, ಭುವನೇಂದ್ರ ಇಂದ್ರ ಪಾಣೆಮಂಗಳೂರು, ಟ್ರಸ್ಟ್ನ ಅಧ್ಯಕ್ಷ ರಾಮಚಂದ್ರ ಕರ್ಕೇರ, ಸದಸ್ಯ ಶ್ರೀನಿವಾಸ, ಜಯಶ್ರೀ ಪೂಂಜಾ ಸಂಚಾಲಕರಾದ ಐತಪ್ಪ ಪೂಜಾರಿ, ರಾಜೇಶ್ ಅಮೀನ್ ಮಂಗಳೂರು, ಪ್ರತಿಭಾ ಉಪಸ್ಥಿತರಿದ್ದರು.

