ಉದ್ಯೋಗಂ ಪುರುಷ ಲಕ್ಷಣಂ ಎಂದು ಹೇಳುತ್ತಿದ್ದ ಕಾಲವೊಂದಿತ್ತು.ಆದರೆ ಈಗ ಉದ್ಯೋಗಂ ಸರ್ವಂ ಲಕ್ಷಣಂ ಎಂಬ ಮಾತಿನಂತೆಉದ್ಯೋಗವಿಲ್ಲದ ಮನುಷ್ಯ ಮನುಷ್ಯನೇಅಲ್ಲಎಂಬಂತಾಗಿದೆ.ಉದ್ಯೋಗವಿಲ್ಲದ ಮನುಷ್ಯನಿಗೆಕವಡೆ ಕಾಸಿನ ಬೆಲೆಯೂಇಲ್ಲವಾಗಿದೆ.ಇದಕ್ಕೆ ಬಹಳ ಮುಖ್ಯವಾಗಿ ವ್ಯಕ್ತಿಯಆರ್ಥಿಕ ಸ್ಥಿತಿಯೂ ಕಾರಣವಾಗಿರಬಹುದು.ಬೆಳೆಯುತ್ತಿರುವ ಆಧುನಿಕಯುಗದಲ್ಲಿಎಲ್ಲ ವಸ್ತುಗಳ ಬೆಲೆಯೂ ಗಗನಚುಂಬಿಯಾಗುತ್ತಿದೆ. ಇಂತಹ ಸಂದರ್ಭದಲ್ಲಿತನ್ನದೈನಂದಿನ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವ ನಿಟ್ಟಿನಲ್ಲಿ ಮನೆಯ ಗಂಡ ಮತ್ತು ಹೆಂಡತಿ ಇಬ್ಬರೂ ಉದ್ಯೋಗವನ್ನು ಕೈಗೊಳ್ಳಬೇಕಾದ ಅನಿವಾರ್ಯತೆಯೂ ಎದುರಾಗಿರುವುದು ಸುಳ್ಳಲ್ಲ. ಸಂಸಾರದ ಗಂಡ ಮತ್ತು ಹೆಂಡತಿಇಬ್ಬರೂ ಹೊರಗಡೆಉದ್ಯೋಗವನ್ನು ಮಾಡುತ್ತಿರುವ ಈ ದಿನಗಳಲ್ಲಿ ತಮ್ಮತಮ್ಮ ಉದ್ಯೋಗಗಳಲ್ಲಿ ತಾವು ಪೂರ್ತಿಯಾಗಿ ಕಳೆದು ಹೋಗುವವರೇ ಹೆಚ್ಚು. ಇಂತಹ ವ್ಯಕ್ತಿಗಳು ತಮ್ಮತಮ್ಮಔದ್ಯೋಗಿಕ ಬದುಕಲ್ಲಿ ಯಶಸ್ವೀ ವ್ಯಕ್ತಿಗಳಾದರೂ ವೈಯಕ್ತಿಕ (ಸಾಂಸಾರಿಕ) ಜೀವನದಲ್ಲಿ ವಿಫಲರಾಗುವವರೇಅಧಿಕ.ವೃತ್ತಿ ಹಾಗೂ ಸಾಂಸಾರಿಕ ಜೀವನಗಳ ಮಧ್ಯೆ ಸಮನ್ವಯತೆಯಂತೂಅತ್ಯಂತಅಗತ್ಯವಾಗಿ ಬೇಕಾಗಿದೆ.ಇಲ್ಲವಾದರೆ ಸಂಸಾರಿಕಜೀವನವುಎತ್ತುಏರಿಗೆಕೋಣ ನೀರಿಗೆ ಎಂಬ ಮಾತಿನಂತೆ ಲಯವನ್ನು ಕಳೆದುಕೊಳ್ಳುವುದರಲ್ಲಿ ಸಂಶಯವಿಲ್ಲ.ಆದ್ದರಿಂದ ಈ ಕೆಳಕಂಡ ಅಂಶಗಳೆಡೆಗೆ ಗಮನಹರಿಸಿದಲ್ಲಿವೃತ್ತಿ ಹಾಗೂ ವೈಯಕ್ತಿಕಜೀವನವನ್ನು ಹಾಲು ಜೇನಾಗಿಸಬಹುದು.
ಬಹಳ ಮುಖ್ಯವಾಗಿವೃತ್ತಿಯಲ್ಲಿಇರಲೇಬೇಕಾದಜೀವನದ ಮೌಲ್ಯಗಳು:
* ಉದ್ಯೋಗಿಯುತನ್ನ ವೈಯಕ್ತಿಕಜೀವನದಲ್ಲಿ ಸದಾ ಸಮಸ್ಯೆಯನ್ನೇಅನುಭವಿಸುತ್ತಿದ್ದರೆಆತ ಮೌಲ್ಯಯುತಉದ್ಯೊಗಿಯಾಗಲಾರ.
* ವ್ಯಕ್ತಿಯುತನ್ನಉದ್ಯೋಗಕ್ಕೆ ಎಷ್ಟು ಪ್ರಾಧಾನ್ಯತೆಯನ್ನು ನೀಡುತ್ತಾನೋ ಅಷ್ಟೇ ಪ್ರಾಧಾನ್ಯತೆಯನ್ನುತನ್ನ ವೈಯಕ್ತಿಕಜೀವನಕ್ಕೂ ನೀಡುವ ಮೂಲಕ ಸಮನ್ವಯತೆಯನ್ನು ಸಾಧಿಸಬೇಕು.
* ಮನೆಯಲ್ಲಿನ ಸಮಸ್ಯೆಗಳನ್ನು ತನ್ನಔದ್ಯೊಗಿಕ ವಾತಾವರಣಕ್ಕೂತಂದಲ್ಲಿಆತಉದ್ಯೋಗದಲ್ಲಿಯಶಸ್ಸನ್ನುಕಾಣಲಾರ, ಮನೆಯ ಸಮಸ್ಯೆಯನ್ನುಮನೆಯಲ್ಲಿ,ಕಛೇರಿಯ ಸಮಸ್ಯೆಯನ್ನುಕಛೇರಿಯಲ್ಲಿಬಿಡುವುದು ಒಳಿತು.
* ಆದರಿಂದ, ವೃತ್ತಿಯನ್ನು ಕೇವಲ ಹೊಟ್ಟೆ ಪಾಡಿಗಾಗಿ ಮಾತ್ರ ಮಾಡದೇಅದರಜತೆಯಲ್ಲಿತಮ್ಮಜೀವನವನ್ನು ರೂಪಿಸಿಕೊಳ್ಳುವಂತೆ ಹಾಗೂ ಮೌಲ್ಯಗಳನ್ನು ಅಳವಡಿಸಿಕೊಳ್ಳುವಂತಾಗಬೇಕು.
ವೃತ್ತಿ ಮತ್ತುಔದ್ಯೋಗಿಕ ಬದುಕಿನಹೊಂದಾಣಿಕೆಗೆಸರಳ ಸೂತ್ರಗಳು:
1. ಪ್ರಥಮ ಆದ್ಯತೆಗಳನ್ನು ಗುರುತಿಸಿ:ಜೀವನದಲ್ಲಿ ಸಾಧಿಸಲುಅಂತಿಮಗುರಿಇದ್ದಂತೆಜೀವನದ ಭಾಗವಾದ ವೈಯುಕ್ತಿಕಜೀವನ ಮತ್ತುಉದ್ಯೋಗಕ್ಕೆಗುರಿಯೊಂದಿರಲಿ. ಆ ಗುರಿ ನಿಮಗೆ ಸಂತೋಷ ನೀಡುವಂತಿರಲಿ. ನಿಮ್ಮಗುರಿಗೆಅಡ್ಡ ಬರುವಂತಹ ಉಳಿದ ವಿಚಾರಗಳನ್ನು ಬಿಟ್ಟು ಪ್ರತಿ ಹೆಜ್ಜೆಯಲ್ಲೂಗುರಿಯ ಮೂಲಕ ನಿಮ್ಮಪ್ರಥಮಆದ್ಯತೆಯನ್ನು ಗುರುತಿಸಿಕೊಳ್ಳುವ ಪ್ರಯತ್ನವನ್ನು ಮಾಡಿರಿ.
2. ನಿಮ್ಮನ್ನು ನೀವು ವೈಯಕ್ತಿಕವಾಗಿ ಮತ್ತುಔದ್ಯೋಗಿಕವಾಗಿ ತಿದ್ದಿಕೊಳ್ಳಿ:ಸಮಸ್ಯೆಗಳು, ಸನ್ನಿವೇಶಗಳು ವಿಭಿನ್ನವಾದಂತೆಅದರ ಆಳದ ಕುರಿತು ಚಿಂತಿಸಿ ಮುಂದಿನ ಹೆಜ್ಜೆಯನ್ನುಇಡಬೇಕಾಗುತ್ತದೆ. ಈಗ ನೀವು ಉದ್ಯೋಗ ಹಾಗೂ ವೈಯಕ್ತಿಕಜೀವನಎರಡನ್ನು ನಿಭಾಯಿಸಬೇಕು.ಆದ್ದರಿಂದ ವೈಯುಕ್ತಿಕ ಮತ್ತುಔದ್ಯೋಗಿಕವಾಗಿ ಬೆಳಸಿಕೊಳ್ಳಬೇಕಾದ ಮತ್ತು ತಿದ್ದಿಕೊಳ್ಳಲೇಬೇಕಾದ ಅಂಶಗಳನ್ನು ಪಟ್ಟಿ ಮಾಡಿಕೊಳ್ಳಿರಿ ಹಾಗೂ ಅಂತಹವುಗಳನ್ನು ತಿದ್ದಿಕೊಳ್ಳುವ ಮನಸ್ಥಿತಿ ಸದಾನಿಮ್ಮದಾಗಿರಲಿ.
3. ಸಂಸ್ಥೆಯ ನಿಯಮಾವಳಿಗಳನ್ನು ಕಲಿಯಿರಿ:ಪ್ರತಿಯೊಂದು ಸಂಸ್ಥೆಯನ್ನುತನ್ನದೇಆದ ನಿಯಮಗಳನ್ನು ಪಾಲಿಸುತ್ತದೆ. ಆದ್ದರಿಂದ ಆ ನಿಯಮಗಳನ್ನು ಕಲಿತುಅದರಂತೆ ನಡೆಯುವುದು ಸೂಕ್ತ.ಇದು ನಿಮ್ಮನ್ನುಒಬ್ಬಉತ್ತಮಉದ್ಯೋಗಿಯನ್ನಾಗಿರೂಪುಗೊಳಿಸುವಲ್ಲಿ ಸಹಕಾರಿಯಾಗುತ್ತದೆ.ಅದೇರೀತಿಕೌಟುಂಬಿಕ ಮೌಲ್ಯಗಳು ಹಾಗೂ ಕುಟುಂಬವನ್ನು ಸಂತೋಷವಾಗಿಡುವಲ್ಲಿ ಗಮನಿಸಬೇಕಾದ ಅಂಶಗಳನ್ನು ಅರಿತು ಅಳವಡಿಸಿಕೊಳ್ಳಿರಿ.
4. ಸಹಕಾರ ವ್ಯವಸ್ಥೆ ರೂಢಿಸಿಕೊಳ್ಳಿ:ಕೆಲಸದಕ್ಷೇತ್ರದಲ್ಲಿಕಾರ್ಯನಿರ್ವಹಣೆಯಅವಧಿಯಲ್ಲಿ ಸಮಸ್ಯೆಗಳು ಬರುತ್ತದೆ. ಅಂತಹ ಸನ್ನಿವೇಶಗಳಲ್ಲಿ ಪರಸ್ಪರ ಸಹಕಾರ ಮನೋಭಾವನೆಯನ್ನು ರೂಢಿಸಿಕೊಳ್ಳಿ.ನಿಮಗೆ ಸಹಕರಿಸುವವರು ನಿಮ್ಮ ಸಹೋದ್ಯೋಗಿ, ಸ್ನೇಹಿತರು, ಕುಟುಂಬ ಸದಸ್ಯರು, ನೆರೆಯವರುಎಂಬುದನ್ನುಯಾವತ್ತೂ ಮರೆಯದಿರಿ. ಮನೆಗೆ ಬಂದಕೂಡಲೇಕಛೆರಿಯ ಸಮಸ್ಯೆಗಲನ್ನೆಚಿಂತಿಸುತ್ತಾಇರಬೇಡಿ, ಬದಲಾಗಿತಂದೆತಾಯಿ ಹೆಂಡತಿ ಮಕ್ಕಳೊಂದಿಗೆ ಮುಕ್ತವಗಿ ಮಾತನಾಡಿಅವರ ಕೆಲಸಗಳಲ್ಲಿ ಸಹಕರಿಸಿರಿ.ಇದರಿಂದ ಮನೆಯ ವಾತಾವರಣವೇ ಬದಲಾಗಿಬಿಡುತ್ತದೆ.
5. ಮುಕ್ತ ಸಂವಹನ: ಔದ್ಯೋಗಿಕಕ್ಷೇತ್ರದಲ್ಲಿ ಕೇವಲ ಮೂಢಿಯಂತೆಮೌನವಾಗಿಕೆಲಸ ಮಾಡುತ್ತಿರುವ ಬದಲುನಿಮ್ಮ ಸಹೋದ್ಯೋಗಿಗಳು ಮತ್ತು ಮೇಲಾಧಿಕಾರಿಯವರೊಡನೆಉತ್ತಮ ಸಂವಹನ ಚಾತುರ್ಯವನ್ನು ಬೆಳೆಸಿಕೊಳ್ಳಿ.ಇದರಿಂದ ಹೊಸ ಹೊಸ ಕೆಲಸಗಳನ್ನು ಕಲಿಯಲು ಹಾಗೂ ಕಛೇರಿಯಲ್ಲಿ ಮೇಲಧಿಕಾರಿಗಳು ನಿಮ್ಮ ಮೇಲೆ ಉತ್ತಮಅಭಿಪ್ರಾಯವನ್ನು ಹೊಂದಲು ಸಹಕಾರಿಯಾಗಬಹುದು.
6. ಸಮಸ್ಯೆಗಳ ಪರಿಹಾರ: ವೃತ್ತಿಕ್ಷೇತ್ರಅಥವಾ ವೈಯಕ್ತಿಕಜೀವನದಲ್ಲಿ ಬರುವ ಹತ್ತು ಹಲವು ಸಮಸ್ಯೆಗಳನ್ನು ಮುಕ್ತ ಮಾತುಕತೆಯಮೂಲಕ ಧನಾತ್ಮಕವಾಗಿ ಪರಿಹರಿಸಿಕೊಳ್ಳುವ ಜಾಣ್ಮೆಯನ್ನು ಬೆಳೆಸಿಕೊಳ್ಳಿರಿ. ಸಣ್ನ ಸಣ್ಣ ವಿಚಾರಕ್ಕೂ ಜಗಳವನ್ನು ಕಾಯಬೇಡಿ.ಕಛೆರಿಯ ಸಮಸ್ಯೆಗಳನ್ನು ತಮ್ಮ ಮೇಲಧಿಕಾರಿಗಳ ಜತೆ, ಸಾಂಸಾರಿಕ ಸಮಸ್ಯೆಗಳನ್ನು ಸಂಬಂಧಪಟ್ಟವರಜತೆ ನೇರವಾಗಿ ಚರ್ಚಿಸಿ ಪರಿಹರಿಸಿಕೊಳ್ಳುವ ಕೌಶಲ್ಯವನ್ನು ಸಿದ್ಧಿಸಿಕೊಳ್ಳಿರಿ.
7. ತಂತ್ರಜ್ಞಾನವನ್ನು ಬಳಸಿ:ನಿಮ್ಮ ಅನುಕೂಲಕ್ಕೆ ತಕ್ಕಂತೆಆಯಾ ಕೆಲಸಕ್ಕೆ ತಕ್ಕಂತೆಅಲ್ಲಿಲಭ್ಯವಿರುವತಂತ್ರಜ್ಞಾನವನ್ನುಗರಿಷ್ಟ ಪ್ರಮಾಣದಲ್ಲಿಬಳಕೆಮಾಡಿರಿ. ಇದು ನಿಮ್ಮಔದ್ಯೋಗಿಕ ಬದುಕನ್ನು ಸಮತೋಲನ ಮಾಡಲುಸಹಾಯಕವಾಗಲಿದೆ.ಹಾಗೂ ನಿಮ್ಮ ಕೆಲಸಕ್ಕೆ ತಗಲುವ ಸಮಯವನ್ನು ಕಡಿತಗೊಳಿಸಲು ಸಹಕಾರಿಯಾಗಲಿದೆ.
8. ಸಂಪರ್ಕದಲ್ಲಿರಿ:ಕೆಲಸದಕ್ಷೇತ್ರದಲ್ಲಿಕರ್ತವ್ಯ ನಿರ್ವಹಣೆಗೆ ಸಂಬಂಧಪಟ್ಟಂತೆ ನಿಮ್ಮ ಮೇಲಾಧಿಕಾರಿಗಳೊಂದಿಗೆ ನಿರಂತರವಾಗಿಸಂಪರ್ಕದಲ್ಲಿರಿ. ಇದು ನಿಮ್ಮಕಾರ್ಯವೈಖರಿಯ ದಿಕ್ಕನ್ನು ಬದಲಾಯಿಸುತ್ತದೆ.
9. ಸಲಹೆಗಳನ್ನು ಸ್ವೀಕರಿಸಿ:ನಿಮ್ಮವೈಯಕ್ತಿಕಜೀವನದಅಥವಾ ವೃತ್ತಿಜೀವನದಕುರಿತು ಸಲಹೆಯನ್ನು ನೀಡುವವರಿದ್ದಾರೆ. ಅವರಲ್ಲಿ ಸಹೋದ್ಯೋಗಿಗಳು ಅಥವಾಕುಟುಂಬಸ್ಥರುಅಥವಾ ನೆಂಟರಿಷ್ಟರುಯಾರೇಇರಲಿ ಅವುಗಳಲ್ಲಿ ಉತ್ತಮ ಸಲಹೆಗಳನ್ನು ಆಯ್ದು ಸ್ವೀಕರಿಸುವ ಅಭಿರುಚಿಯನ್ನು ಬೆಳೆಸಿಕೊಂಡು ಅಳವಡಿಕೆಗೆ ಅರ್ಹವಾದ್ದನ್ನು ಗುರುತಿಸಿಕೊಳ್ಳಿ.
10. ಸಮಯ ನಿರ್ವಹಣೆ:ಸಮಯಕ್ಕೆಹೆಚ್ಚಿನಮಹತ್ವವನ್ನುನೀಡಿರಿ.ನಿಮ್ಮ ವೈಯಕ್ತಿಕಜೀವನಕ್ಕೂ ವೃತ್ತಿಜೀವನಕ್ಕೂ ಮನ್ನಣೆಕೊಟ್ಟುಕಾರ್ಯನಿರ್ವಹಿಸಿ.ವೃತ್ತಿ ಹಾಗೂ ವೈಯಕ್ತಿಕಕ್ಷೇತ್ರದಲ್ಲಿಆರೋಗ್ಯಕರ ವಾತವರಣದಿಂದಕೂಡಿರುವಂತಾಗಲುಅತ್ಯಂತಅಗತ್ಯವಾಗಿರುವುದುಸಮಯ ಎಂಬ ಅಂಶವನ್ನು ಮರೆಯದಿರಿ.ಕಛೇರಿಯ ಕೆಲಸಗಳನ್ನು ನಿರ್ದಿಷ್ಟ ಅವಧಿಯೊಳಗೆ ಪೂರ್ಣಗೊಳಿಸಿರಿ, ಸಂಸಾರಕ್ಕೆತೊಡಗಿಸಬೇಕಾದ ಸಮಯವನ್ನುಕಡ್ಡಾಯವಾಗಿ ಸಂಸಾರಕ್ಕೇ ತೊಡಗಿಸಿರಿ.
11. ಸಂದೇಹಗಳನ್ನು ಪರಿಹರಿಸಿಕೊಳ್ಳಿ:ಕಾರ್ಯನಿರ್ವಹಣೆಯ ಸಂದರ್ಭದಲ್ಲಿಯಾವುದೇ ಸಂದೇಹಗಳು ಬಂದರೂಅದನ್ನು ಪರಿಹರಿಸಿಕೊಂಡೇ ಮುಂದುವರೆಯಿರಿ.ಕೆಲಸದ ಮೇಲಿನ ಗೊಂದಲಗಳೊಂದಿಗೆ ನಿಮ್ಮ ಕೆಲಸಗಳನ್ನು ಮುಂದುವರಿಸಿದಲ್ಲಿ ಎಲ್ಲಾ ಕೆಲಸಗಳೂ ತಪ್ಪಾಗಿ ಶೂನ್ಯ ಫಲಿತಾಂಶವನ್ನು ನೀಡಬಹುದು.
12. ಮನೆಯ ಸದಸ್ಯರಿಗಾಗಿ ಸಮಯ ಮೀಸಲಿಡಿ:ಮನೆಗೆ ಬಂದೊಡನೆ ಸಿಡಿ ಸಿಡಿಎನ್ನಬೇಡಿ, ಮಕ್ಕಳು ಹೆಂಡತಿತಂದೆತಾಯಿ ಸಹೋದರರಿಗೆಂದುಅಲ್ಪ ಕಾಲವನ್ನಾದರೂ ಮೀಸಲಿಡಿ. ಇದರಿಂದಕಛೇರಿಯಒತ್ತಡವನ್ನು ಸ್ವಲ್ಪವಾದರೂಕಡಿಮೆ ಮಾಡಿಕೊಳ್ಳಬಹುದು.
13. ಕಛೇರಿ ಮತ್ತು ಸಂಸಾರವನ್ನುಒಂದೇತಟ್ಟೆಯಲ್ಲಿಟ್ಟುತೂಗಬೇಡಿ:ಕಛೆರಿಯ ಸಮಸ್ಯೆಗಳನ್ನು ಹಗೂ ಸಿಟ್ಟನ್ನು ಮನೆಯವರ ಮೇಲೆ ಹಗೂ ಮನೆಯವರ ಸಿಟ್ಟನ್ನು ಕಛೇರಿಯ ಸಿಬ್ಬಂದಿಗಳ ಮೇಲೆ ತೋರಿಸುವ ಕೆಲಸವನ್ನುಮಾಡಬೇಡಿ. ಅದುಆಕಾಶವನ್ನು ನೋಡಿ ಮೇಲಕ್ಕೆ ಉಗುಳಿದಂತೆ.ತನ್ನ ಮೇಲೆಯೇಅದುತಿರುಗಿ ಬೀಳಬಹುದು.
14. ವೈವಿದ್ಯತೆಯನ್ನು ಕಾಯ್ದುಕೊಳ್ಳಿರಿ:ಕಛೆರಿ ಕೆಲಸದಲ್ಲಿ ಹೇಗೆ ವೈವಿಧ್ಯತೆಯಅವಶ್ಯಕತೆಯಿದೆಯೋಅದೇರೀತಿ ಮನೆಯ ವಾತಾವರಣದಲ್ಲೂ ವೈವಿಧ್ಯತೆಯನ್ನು ಕಾಯ್ದುಕೊಳ್ಳುವುದು ಅತೀ ಮುಖ್ಯ. ವಾರದರಜಾ ದಿನದಂದುಕುಟುಂಬ ಸಮೇತರಾಗಿ ಹೊರಗಡೆ ಸುತ್ತಾಡಿಕೊಂಡು ಬರುವುದು, ತ್ರೈಮಾಸಿಕಕ್ಕೊಂದು ಬಾರಿಅಥವಾ ವರ್ಷಕ್ಕೊಮ್ಮೆಯಾದರೂ ಹೊರಗಡೆ ಪ್ರವಾಸ ಹೋಗುವ ಜಾಯಮಾನವನ್ನು ಬೆಳೆಸಿಕೊಂಡಾಗ ಕುಟುಂಬದಲ್ಲಿ ಹೊಸ ವಾತಾವರಣವನ್ನು ಮೂಡಿಸಬಹುದು.
15. ವಿಶೇಷ ದಿನಗಳನ್ನು ಮರೆಯಬೇಡಿ:ಕಛೇರಿಯಲ್ಲಿ ವಿಶೇಷ ಸಂದರ್ಭಗಳಾದ ಹೊಸ ವರ್ಷಾಚರಣೆ, ದೀಪಾವಳಿ, ಸ್ವ್ವಾತಂತ್ರ್ಯೋತ್ಸವ, ಯುಗಾದಿ ಮತ್ತಿತರ ಹಬ್ಬಗಳು ಹಾಗೂ ಸಹೋದ್ಯೋಗಿಗಳ ಹುಟ್ಟುಹಬ್ಬಗಲ ಸಂದರ್ಭಗಳನ್ನು ಆಚರಿಸುವುದನ್ನು ಮೈಗೂಡಿಸಿಕೊಳ್ಳಿರಿ. ಇದೇರೀತಿಕುಟುಂಬದ ವಿಶೇಷ ಸಂದರ್ಭಗಳಾದ ವಿವಾಹ ವಾರ್ಷಿಕೋತ್ಸವ, ಕುಟುಂಬಸ್ಥರ ಹುಟ್ಟುಹಬ್ಬ, ಹಬ್ಬಗಳು ಇತ್ಯಾದಿಗಳನ್ನು ನಿಮ್ಮ ನಿಮ್ಮ ವ್ಯಾಪ್ತಿಯೊಳಗೆ ಆಚರಿಸುವ ಮನೋಭಾವವನ್ನು ಬೆಳೆಸಿಕೊಳ್ಳಿ.
ಔದ್ಯೋಗಿಕ ಬದುಕಿನಲ್ಲಿಅತ್ಯನ್ನತವಾದಕಾರ್ಯಕ್ಷಮತೆಯನ್ನು ಹೊಂದಿ ಅತ್ಯುತ್ತಮಉದ್ಯೋಗಿ ಎಂಬ ಹೆಸರನ್ನು ಗಳಿಸಿದ ಅದೆಷ್ಟೋ ಮಂದಿ ತಮ್ಮ ಸಾಂಸಾರಿಕ (ವೈಯಕ್ತಿಕ) ಬದುಕಿನಲ್ಲಿ ವಿಫಲರಾಗಿರುವ ದೃಷ್ಟಾಂತಗಳನ್ನು ನಾವು ನೋಡುತ್ತೇವೆ. ಇಲ್ಲಿಅಂತಹ ಸಾಧಕರು ಕೇವಲ ವೃತ್ತಿಯೇ ನಮ್ಮ ಬದುಕೆಂದು ನಂಬಿರುತ್ತಾರೆ.ಅದರೆವೈಯಕ್ತಿಕಜೀವನದಲ್ಲಿ ವಿಫಲರಾಗಿಔದ್ಯೋಗಿಕಜೀವನದಲ್ಲಿ ಯಶಸ್ವಿಯಾದರೆ ಪ್ರಯೋಜನವಿಲ್ಲ.ಅದೇರೀತಿವೈಯಕ್ತಿಕ ಬದುಕಿನಲ್ಲಿಅತ್ಯಂತ ಯಶಸ್ವಿಯಾಗಿ ಔದ್ಯೋಗಿಕ ಬದುಕನ್ನು ಪೂರ್ತಿ ಮರೆತು ಸೋತಂತಹ ಉದಾಹರಣೆಗಳೂ ನಮ್ಮಕಣ್ಣ ಮುಂದಿದೆ.ಆದ್ದರಿಂದ ವೃತ್ತಿ ಹಾಗೂ ಸಂಸಾರಎರಡನ್ನೂ ಸಮಾನವಾಗಿ ತೂಗಿಸಿಕೊಂಡು ಹೋಗುವುದು ಇಂದಿನ ದಿನಗಳಲ್ಲಿ ಅನಿವಾರ್ಯವಾಗಿದೆ.
. ಸಂತೋಷ್ ರಾವ್. ಪೆರ್ಮುಡ
ಮೊ. 9742884160
