ನವದೆಹಲಿ: ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ. ಆದುದರಿಂದ ಆ ಬಾಲಕಿಯನ್ನು ಪೀಡಿತಳು ಎಂದು ಕರೆಯಬೇಡಿ ಎಂದು ಬಂಧಿತ ಅಸಾರಾಂ ಬಾಪು ಹೇಳಿದ್ದಾರೆ.
ನಾನು ನಿರಪರಾಧಿ ಯಾಗಿದ್ದೇನೆ, ನಾನು ಕಾರಾಗೃಹಕ್ಕೆ ಹೋಗಲು ಹೆದರುವುದಿಲ್ಲ. ಕಾರಾಗೃಹ ದಲ್ಲಿರಬೇಕಾದರೆ, ನಾನು ನನ್ನದೇ ಆಹಾರ ಮತ್ತು ನೀರನ್ನು ತೆಗೆದುಕೊಂಡು ಹೋಗುವೆನು. ಅನುಮತಿ ಸಿಗದಿದ್ದರೆ, ಆಹಾರ- ನೀರು ತ್ಯಜಿಸುವೆನು. ಈ ದೇಹವನ್ನು ಎಂದಾದರೊಂದು ದಿನ ತ್ಯಜಿಸಲೇ ಬೇಕಿದೆ. ಹೀಗಿರುವಾಗ ಆಹಾರ-ನೀರು ಏಕೆ ತ್ಯಜಿಸಬಾರದು? ನನ್ನ ವಿರುದ್ಧ ಷಡ್ಯಂತ್ರ ರಚಿಸುವವರು ಈ ಬಾರಿ ಎಲ್ಲ ಶಕ್ತಿ ಉಪಯೋಗಿಸಿ ಪ್ರಯತ್ನಿಸುತ್ತಿದ್ದಾರೆ. ನನ್ನೊಂದಿಗೆ ಈಶ್ವರನ ಕೃಪೆ ಹಾಗೂ ಭಕ್ತರ ಪ್ರೀತಿ ಇದೆ. ಸಮಾಜದಲ್ಲಿ ಒಳ್ಳೆಯ ಕಾರ್ಯವನ್ನು ಮಾಡುವ ರಾಜಕಾರಣಿಗಳು, ಕಲಾವಿದರು ಹಾಗೂ ಆಧ್ಯಾತ್ಮಿಕ ಸಂತರು ಮುಂತಾದವರ ವಿರುದ್ಧ ಒಂದು ಷಡ್ಯಂತ್ರ ರಚಿಸಿ ಅವರನ್ನು ಹಿಂದಕ್ಕೆಳೆಯುವ ಕಾರ್ಯವು ನಡೆಯುತ್ತಿದೆ ಎಂದಿದ್ದಾರೆ.

