ಬಂಟ್ವಾಳ:ತಾಲೂಕಿನ ನರಿಕೊಂಬು ಗ್ರಾಮದ ಅಂತರ ರಾಮನಗರ ಹಿಂದೂ ಯುವಶಕ್ತಿ ಇದರ ವತಿಯಿಂದ ಇದೇ 27ರಂದು ಬೆಳಿಗ್ಗೆ ದ್ವಿತೀಯ ವರ್ಷದ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿ ಕ ಚಿಂತನಾ ಸಭೆ, ಸಾಧಕರಿಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಲಿದೆ.
ಅಂದು ಬೆಳಿಗ್ಗೆ 11.45ಕ್ಕೆ ನಡೆಯುವ ಧಾರ್ಮಿಕ ಚಿಂತನಾ ಸಭೆಯಲ್ಲಿ ಮೊಗರ್ನಾಡು ಶ್ರೀ ಮಹಾಗಣಪತಿ ದೇವಸ್ಥಾನ ಅರ್ಚಕ ಶ್ರೀನಿವಾಸ ಐತಾಳ್, ಸ್ಥಳೀಯ ವೈದ್ಯ ಡಾ.ಸುಬ್ರಹ್ಮಣ್ಯ ಭಟ್, ಬೆಂಜನಪದವು ಸರ್ಕಾರಿ ಪ್ರೌಢಶಾಲೆ ಶಿಕ್ಷಕಿ ಹೇಮ ಆರ್.ಮಯ್ಯ, ಎಎಂಆರ್ ಕಿರು ವಿದ್ಯುತ್ ಘಟಕ ಪ್ಲಾಂಟ್ ಮೆನೇಜರ್ ಪ್ರೇಮನಾಥ ತೆಡ್ಲಾ, ಬಂಟ್ವಾಳ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮೋಹನ್ ಕೆ.ಶ್ರೀಯಾನ್ ರಾಯಿ, ಪಾಣೆಮಂಗಳೂರು ಸತ್ಯದೇವತಾ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷ ನಿತ್ಯಾನಂದ ಸಪಲ್ಯ ಪುತ್ರೋಟಿಬೈಲು ಮತ್ತಿತರ ಗಣ್ಯರು ಭಾಗವಹಿಸುವರು.
ಇದೇ ವೇಳೆ ಯುವ ಭಾಗವತ ರವಿಚಂದ್ರ ಕನ್ನಡಿಕಟ್ಟೆ, ಸೀಮಾ ಕರ್ಬೆಟ್ಟು, ಭರತ್ ಕರ್ಬೆಟ್ಟು, ಭವ್ಯಶ್ರೀ ಕೇದಿಗೆ ಇವರನ್ನು ಸನ್ಮಾನಿಸಿ ಗೌರವಿಸಲಾಗುವುದು.
ಸಂಜೆ ಗಂಟೆ 6ರಿಂದ ಹೊಸನಗರ ಶ್ರೀರಾಮಚಂದ್ರ ಕೃಪಾಪೋಷಿತ ಯಕ್ಷಗಾನ ಮಂಡಳಿ ಇವರಿಂದ ‘ಬಪ್ಪನಾಡು ಕ್ಷೇತ್ರ ಮಹಾತ್ಮೆ’ ಯಕ್ಷಗಾನ ಪ್ರರ್ದನಗೊಳ್ಳಲಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

By Suddi9

Leave a Reply

Your email address will not be published. Required fields are marked *