ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಗೋಳ್ತಮಜಲು ಗ್ರಾ.ಪಂ.ಸಮಿತಿಯ ಆಶ್ರಯದಲ್ಲಿ ಗೋಳ್ತಮಜಲು ಜಿ.ಪಂ.ಸದಸ್ಯೆ ಕಮಲಾಕ್ಷಿ ಕೆ.ಪೂಜಾರಿ, ಗೋಳ್ತಮಜಲು ತಾ.ಪಂ.ಸದಸ್ಯ ಮಹಾಬಲ ಆಳ್ವ, ಬಾಳ್ತಿಲ ತಾ.ಪಂ. ಸದಸ್ಯೆ ಲಕ್ಷ್ಮೀ ಗೋಪಾಲ ಆಚಾರ್ಯ, ಕೊಳ್ನಾಡು ತಾ.ಪಂ.ಸದಸ್ಯ ನಾರಾಯಣ ಕುಲ್ಸಾರ್ ಹಾಗೂ ಕಾರ್ಯಕರ್ತರಿಗೆ ಮತದಾರ ಬಂಧುಗಳಿಗೆ ಅಭಿನಂದನಾ ಕಾರ್ಯಕ್ರಮ ಕಲ್ಲಡ್ಕದ ಪಂಚವಟಿ ಕಲ್ಯಾಣ ಮಂಟಪದಲ್ಲಿ ಜರಗಿತು.

ಮುಖ್ಯ ಅತಿಥಿಯಾಗಿ ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ ಅವರು ಮಾತನಾಡಿ ಕಾರ್ಯಕರ್ತರು ಮತ್ತು ಜನಪ್ರತಿನಿಧಿಗಳು ಪಕ್ಷದ ತತ್ವ ಸಿದ್ದಾಂತಗಳನ್ನು ಅರಿತುಕೊಂಡು ಹಣದ ಅಮಿಷಕ್ಕೆ ಬಲಿಯಾಗದೆ ನಿಶ್ವಾರ್ಥವಾಗಿ ದುಡಿದಾಗ ಭರ್ಜರಿ ಗೆಲುವು ಸಾಧ್ಯ ಎನ್ನುವುದಕ್ಕೆ ಇದೇ ಸಾಕ್ಷಿ ಎಂದರು. ಕಾರ್ಯ ಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಸಮಿತಿಯ ಅಧ್ಯಕ್ಷ ವಜ್ರನಾಥ ವಹಿಸಿದ್ದರು. ವೇದಿಕೆಯಲ್ಲಿ ಮಾಜಿ ಶಾಸಕ ಎ. ರುಕ್ಮಯ ಪೂಜಾರಿ, ರಾಜ್ಯ ಬಿ.ಜೆ.ಪಿ.ಉಪಾಧ್ಯಕ್ಷರಾದ ಸುಲೋಚನಾ ಜಿ.ಕೆ.ಭಟ್, ಕ್ಷೇತ್ರದ ಬಿ.ಜೆ.ಪಿ.ಅಧ್ಯಕ್ಷ ಜಿ.ಆನಂದ, ಮಾಜಿ.ಜಿ.ಪಂ.ಸದಸ್ಯರಾದ ಚೆನ್ನಪ್ಪ ಕೊಟ್ಯಾನ್, ಗ್ರಾ.ಪಂ ಅಧ್ಯಕ್ಷರಾದ ಜಯಲಕ್ಮೀ ಭಟ್, ಗ್ರಾ.ಪಂ.ಉಪಾಧ್ಯಕ್ಷರಾದ ಮುಸ್ತಾಫ ಕೆ.ಎಸ್, ಮಾಜಿ ತಾ.ಪಂ.ಸದಸ್ಯರಾದ ದಿನೇಶ್ ಅಮ್ಟೂರು, ಬಿ.ಜೆ.ಪಿ.ಪ್ರಧಾನ ಕಾರ್ಯದಶರ್ಿ ರಾಮ್ದಾಸ ಬಂಟ್ವಾಳ, ಹಿಂದುಳಿದ ಮೋರ್ಛಾದ ಕ್ಷೇತ್ರಾಧ್ಯಕ್ಷರಾದ ಕೆ.ಅಣ್ಣಿ ಪೂಜಾರಿ, ಹಿಂದುಳಿದ ವರ್ಗಗಳ ಜಿಲ್ಲಾ ಕಾರ್ಯದರ್ಶಿ ಶೇಖರ ಕೊಟ್ಟಾರಿ, ಗ್ರಾ.ಸಮಿತಿಯ ಕಾರ್ಯದರ್ಶಿ ಜಯಂತ ಗೌಡ ಉಪಸ್ಥಿತರಿದ್ದರು. ಬಿ.ಜೆ.ಪಿ ಕ್ಷೇತ್ರ ಉಪಾಧ್ಯಕ್ಷರಾದ ಚಂದ್ರಶೇಖರ್ ಟೈಲರ್ ಸ್ವಾಗತಿಸಿ, ಮಾಜಿ ಗ್ರಾ.ಪಂ.ಅಧ್ಯಕ್ಷರಾದ ಮೋನಪ್ಪ ದೇವಸ್ಯ ವಂದಿಸಿದರು. ಗ್ರಾ.ಪಂ.ಸದಸ್ಯ ರಾಜೇಶ್ ಕೊಟ್ಟಾರಿ ಕಾರ್ಯಕ್ರಮ ನಿರ್ವಹಿಸಿದರು.
