ಬಂಟ್ವಾಳ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಂಟ್ವಾಳ ಘಟಕ ವತಿಯಿಂದ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯ ಸಹಯೋಗದಿಂದಿಗೆ “ಭಗತ್ ಸಿಂಗ್, ಸುಖ್ದೇವ್, ರಾಜ್ಗುರು ಹುತಾತ್ಮ ದಿನ ಅಂಗವಾಗಿ ರಕ್ತದಾನ ಶಿಬಿರ” ಬಿ. ಸಿ. ರೋಡಿನ ನವನೀತ ಶಿಶುಮಂದಿರ ಆವರಣದಲ್ಲಿ ನಡೆಯಿತು.
ದೇಶದ ಸ್ವತಂತ್ರ್ಯ ಸಂಗ್ರಾಮದಲ್ಲಿ ಬಲಿದಾನ ಗೈದ ಭಾರತಮಾತೆಯ ಸುಪುತ್ರರಾದ ಭಗತ್ಸಿಂಗ್, ರಾಜ್ಗುರು, ಸುಖ್ದೇವರ ಬಲಿದಾನದ ಸ್ಮರಣೆಯನ್ನು ಅಖಿಲಭಾರತೀಯ ವಿದ್ಯಾರ್ಥಿಯ ಪರಿಷತ್ ವತಿಯಿಂದ ಬಿ. ಸಿ. ರೋಡಿನ ನವನೀತ ಶಿಶುಮಂದಿರ ಆವರಣದಲ್ಲಿ ರಕ್ತದಾನ ಶಿಬಿರವನ್ನು ಅಯೋಜಿಸಿದ್ದರು. ಕಾರ್ಯಕ್ರಮವನ್ನು ವಕೀಲರಾದ ಪ್ರಸಾದ್ ಕುಮಾರ್ ಉದ್ಘಾಟಿಸಿದರು . ರಕ್ತದಾನ ಶಿಬಿರದಲ್ಲಿ ಬಂಟ್ವಾಳ ವಿವಿಧ ಕಾಲೇಜ್ನ ನೂರಾರು ವಿದ್ಯಾರ್ಥಿಗಳು ರಕ್ತದಾನ ಮಾಡುವ ಮೂಲಕ ಹುತಾತ್ಮರನ್ನು ಸ್ಮರಿಸಿದರು.
ಈ ಶಿಬಿರದಲ್ಲಿ ಪಾದರ್ ಮುಲ್ಲರ್ ಆಸ್ಪತ್ರೆಯ ಜಿಲ್ಲಾ ಸಂಚಾಲಕರಾದ ಪ್ರಣಾಮ್ರಾಜ್, ರಾಜ್ಯ ಕಾರಿಣಿ ಸದಸ್ಯರಾದ ಸುನಿಲ್ ಭಟ್ ಮತ್ತು ಪ್ರಜ್ವಲ್ ಕುಮಾರ್ ಸರಪಾಡಿ, ತಾಲೂಕು ಸಂಚಾಲಕರಾದ ಅಶ್ವಥ್ ರಾವ್, ಕಾಮಾಜೆ ಕಾಲೇಜಿನ ಅ. ಭಾ. ವಿ. ಪ ಘಟಕ ಅಧ್ಯಕ್ಷರಾದ ಪ್ರದೀಪ್, ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಸ್ನಾತಕೋತ್ತರ ವಿಭಾಗದ ಪ್ರಧಾನ ಕಾರ್ಯದರ್ಶಿ ಪ್ರಮೋದ್ ನೂಜಿಪಾಡಿ, ನಗರ ಸಹಕಾರ್ಯದರ್ಶಿ ನಿಧಿ ಬಿ. ಎನ್, ಕೀರ್ತನ, ತಾರನಾಥ್, ಸುದರ್ಶನ್, ರಾಘವೇಂದ್ರ ಉಪಸ್ಥಿತರಿದ್ದರು.
