ನವದೆಹಲಿ: ಇಂದು(ಮೇ27) ಮಧ್ಯಾಹ್ನ ನವದೆಹಲಿಯ ಹೈದರಾಬಾದ್ ಹೌಸ್ ನಲ್ಲಿ ಆರಂಭಗೊಂಡ ಭಾರತ- ಪಾಕ್ ದ್ವಿಪಕ್ಷೀಯ ಮಾತುಕತೆಯಲ್ಲಿ ಮೊದಲ ಹಂತದಲ್ಲೇ ಭಾರತದ ಪ್ರಧಾನಿ ನರೇಂದ್ರಮೋದಿಯವರು ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಪ್ ಅವರನ್ನು ತನ್ನ ಖಡಕ್ ಪ್ರಶ್ನೆಗಳಿಂದ ಬೆವರಿಳಿಸಿದ್ದಾರೆ. ಸಂದರ್ಶನ ಆರಂಭವಾಗುತ್ತಿದ್ದಂತೆ ನರೇಂದ್ರ ಮೋದಿಯವರಿಂದ ತೂರಿಬಂದ ಮೊದಲ ಪ್ರಶ್ನೆ 26/11ರ ಮುಂಬೈ ದಾಳಿ ಕುರಿತಾಗಿತ್ತು.

mn

ಮುಂಬೈ ದಾಳಿ ಕುರಿತಾಗಿ ಮೋದಿ ಪ್ರಶ್ನೆಗಳು: 1.ಮುಂಬೈ ದಾಳಿಯ ತನಿಖೆ ಏನಾಗಿದೆ? ಈ ತನಖೆ ಕೂಡಲೇ ಚುರುಕಾಗಬೇಕು. ವಿಳಂಬಗತಿ ಸರಿಯಲ್ಲ. 2. ಮುಂಬೈ ದಾಳಿಕೋರರ ಮೇಲೆ ಏನು ಕ್ರಮ ಕೈಗೊಂಡಿದ್ದೀರಿ? 3. ಮುಂಬೈ ದಾಳಿಗೆ ಪೂರಕವಾದ ಧ್ವನಿಮುದ್ರಣ ನಮಗೆ ಒಪ್ಪಿಸಿ. 4.  ಭಯೋತ್ಪಾದನೆ ಯಾವಾಗ ನಿಲ್ಲಿಸುತ್ತೀರಿ? 5.  ಭಯೋತ್ಪಾದನೆಗೆ ತಡೆಗೆ ನಮಗೆ ಸಹಕಾರ ಕೊಡುತ್ತೀರಲ್ಲವೇ? ಈ ಐದು ಮುಖ್ಯವಾದ ಪ್ರಶ್ನೆಗಳನ್ನು ನವಾಜ್ ಷರೀಪ್ ಅವರಲ್ಲಿ ಕೇಳಿದ್ದಾರೆ. ಸುಮಾರು 40 ನಿಮಿಷಗಳ ಕಾಲ ಈ ಮಾತುಕತೆ ನಡೆದಿತ್ತು.

By suddi9

Leave a Reply

Your email address will not be published. Required fields are marked *