ಮೂಡುಶೆಡ್ಡೆಯಲ್ಲಿ ಭಾರೀ ವಿಜಯೋತ್ಸವದ ಸಂಭ್ರಮ
vij2

vijಮಂಗಳೂರು;ಭಾರತೀಯ ಜನತಾ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಮನೆ ಮನೆಗೆ ತೆರಳಿ ದೇಶಕ್ಕೆ ನರೇಂದ್ರ ಮೋದಿ, ಜಿಲ್ಲೆಗೆ ನಳಿನ್ಕುಮಾರ್ ಕಟೀಲುರವರ ಸಾಧನೆ, ಯೋಜನೆಯ ಬಗ್ಗೆ ನಿರಂತರವಾಗಿ ಮಾಹಿತಿ ನೀಡಿ ಬಿಜೆಪಿಯ ಬಗ್ಗೆ ವಿಶ್ವಾಸ ಮೂಡಿಸಿದ ಶ್ರಮದಿಂದ ಇಂದು ಬಿಜೆಪಿ ಸ್ವತಂತ್ರವಾಗಿ ಕೇಂದ್ರ ಸಕರ್ಾರವನ್ನು ರಚಿಸಲು ಸಾಧ್ಯವಾಗಿದ್ದು ಇದಕ್ಕೆ ಮೂಡುಶೆಡ್ಡೆಯ ಗ್ರಾಮಸ್ಥರು, ಕಾರ್ಯಕರ್ತರು ದೇಶಕ್ಕೆ ಮಾದರಿ ಎಂದು ಬಿಜೆಪಿಯ ಜಿಲ್ಲಾ ಉಪಾಧ್ಯಕ್ಷ ಉಮಾನಾಥ ಕೋಟ್ಯಾನ್ ಹೇಳಿದರು.

ಅವರು ನಗರದ ಹೊರವಲಯದ ಮೂಡುಶೆಡ್ಡೆಯಲ್ಲಿ ನಡೆದ ಬಿಜೆಪಿ ವಿಜಯೋತ್ಸವದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಗಾರರಾಗಿ ಮಾತನಾಡಿದರು. ಗ್ರಾಮದ ಪ್ರತಿಯೊಬ್ಬರು ದೇಶ ಸೇವೆ ಮಾಡುವ ಅವಕಾಶವನ್ನು ಬಿಜೆಪಿ ಮಾಡಿಕೊಟ್ಟಿದೆ ಇದನ್ನೇ ವಿಶ್ವಾಸವಾಗಿಟ್ಟುಕೊಂಡು ಅಭಿವೃದ್ಧಿಯ ಮೂಲಕ ಗ್ರಾಮೀಣ ಭಾಗದ ಮೂಲಬೂತ ಸೌಕರ್ಯಕ್ಕೆ ಖಂಡಿತವಾಗಿಯೂ ಆದ್ಯತೆ ನೀಡುವ ನಾಯಕರು ನಮ್ಮಲ್ಲಿದ್ದಾರೆ. ಸಂಸದ ನಳಿನ್ಕುಮಾರ್ ಕಟೀಲು ಹಿಂದೆ ಮಾಡಿದ ಸಾಧನೆಯನ್ನು ಜನರು ಗುರುತಿಸಿದ್ದರಿಂದ ಅವರನ್ನು ಮರು ಚುನಾಯಿಸಿ ಇನ್ನಷ್ಟು ಅಭಿವೃದ್ಧಿ ಕಾರ್ಯ ಮಾಡಿ ದೇಶದಲ್ಲಿಯೇ ಶ್ರೇಷ್ಠ ಸಾಧನೆ ಮಾಡಲಿದ್ದಾರೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಗಣೇಶ್ ಕಾಣರ್ಿಕ್, ಜಿಲ್ಲಾ ಸಮಿತಿಯ ಕೆ.ಭುವನಾಭಿರಾಮ ಉಡುಪ, ಕ್ಷೇತ್ರದ ಪ್ರಧಾನ ಕಾರ್ಯದಶರ್ಿ ದೇವಪ್ರಸಾದ ಪುನರೂರು, ನಾಯಕರಾದ ಕೆ.ಆರ್.ಪಂಡಿತ್, ಬಾಹುಬಲಿ ಪ್ರಸಾದ್, ಈಶ್ವರ ಕಟೀಲು, ರಿತೇಶ್ ಶೆಟ್ಟಿ, ಸುಲೋಚನ್ ಭಟ್, ಕಸ್ತೂರಿ ಪಂಜ, ಲೀಲಾ ಬಂಜನ್, ಅನಂತ ಕೃಷ್ಣ ರಾವ್ ಪುತ್ತೂರು, ಮಂಗಳೂರು ತಾಲ್ಲೂಕು ಪಂಚಾಯತ್ ಅಧ್ಯಕ್ಷ ಹರೀಶ್ ಮೂಡುಶೆಡ್ಡೆ, ಶರತ್ ಕುಬೆವೂರು, ಮೂಡುಶೆಡ್ಡೆ ಗ್ರಾ.ಪಂ.ಅಧ್ಯಕ್ಷೆ ಶಾಂಭ, ಸ್ಥಳೀಯ ಪ್ರಮುಖರಾದ ರಮಾನಾಥ ಅತ್ತರ್, ಹರಿಪ್ರಸಾದ್ ಶೆಟ್ಟಿ, ಹರೀಶ್ ಗಟ್ಟಿ, ಕವಿತಾ ದಿನೇಶ್, ಉಮೇಶ್ ಜೆ., ನವೀನ್ ಬಜಪೆ ಇನ್ನಿತರರು ಉಪಸ್ಥಿತರಿದ್ದರು.
ಸುಮಾರು ಮೂರು ಸಾವಿರ ಕಾರ್ಯಕರ್ತರು ಗ್ರಾಮಸ್ಥರು ಸೇರಿಕೊಂಡು ಮೂಡುಶೆಡ್ಡೆಯ ಸುತ್ತಮುತ್ತ ಭಾರೀ ಪಾದಾಯಾತ್ರೆಯ ಮೂಲಕ ಮೆರವಣಿಗೆ ನಡೆಸಿ ಸಿಡುಮದ್ದುಗಳನ್ನು ಸಿಡಿಸಿ ಸಿಹಿ ಹಂಚುವ ಮೂಲಕ ಬಿಜೆಪಿ ಗೆಲುವಿನ ಸಂಭ್ರಮದಲ್ಲಿ ಪಾಲ್ಗೊಂಡರು. ಕಾವೂರು ಪೊಲೀಸರು ಬಿಗಿ ಬಂದೋಬಸ್ತನ್ನು ನೀಡಿದ್ದರು

By Suddi9

Leave a Reply

Your email address will not be published. Required fields are marked *