ಪೊಳಲಿ:ಇತಿಹಾಶ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ಅಮ್ಮನವರ ಕಾಲಾವದಿ ಜಾತ್ರಾ ಮಹೋತ್ಸವವು ಮಾ.16 ಮಂಗಳವಾರದಂದ ಪ್ರಾರಂಭಗೊಂಡು 28 ದಿನದ ಜಾತ್ರಾ ಮಹೋತ್ಸವ ಜರಗಲಿದೆ. ಪ್ರಾತಃ ಕಾಲದಲ್ಲಿ ದೀಪದ ಬಲಿ ಜರಗುತ್ತದೆ. ಈ ಹೊತ್ತಿಗೆ ಹರಕೆ ಹೇಳಿದ ಮಕ್ಕಳ “ಕಂಚಿಲು ಸೇವೆ” ನಡೆಯುತ್ತದೆ. ಆಬಳಿಕ ನಿಯಮದಂತೆ ನಿರ್ಧಿಷ್ಟ ವ್ಯಕ್ತಿಗಳಿಗೆ ಪ್ರಸಾದ ವಿತರಣೆಯಾಗಿ ಚಿಕ್ಕ ರಥೋತ್ಸವದೊಂದಿಗೆ ಬಲಿ ಒಳಗೆ ಬರುವುದು ಪೀಠಪೂಜೆಯಾದೊಡನೆ ನಟ್ಟೋಜರು ಹಿಂದಿನ ದಿನ ನೀಡಿದ ಹಿಂಗಾರವನ್ನು ಭಟ್ಟರು ನಟ್ಟೋಜರ ಕೈಗೆ ಕೊಡುವರು.
2

 

4

5

6

7

9

10

11

12

13

14

15

16

17

18

19

20

21

22
ಈ ಸಂದರ್ಭದಲ್ಲಿ ಸ್ಥಾನದವರು, ಗುತ್ತಿನವರು, ಅವರವರ ಸ್ಥಾನದಲ್ಲಿ ಕುಳಿತ ಬಳಿಕ ಉಗ್ರಾಣಿ ಮುಖಾಂತರ ಸೋಮಕಾಶುರ,ರಂಜಕಾಸುರ ವೇಷದಾರಿಗಳಾದ ಪಂಬದರನ್ನು ಗೋಪುರಕ್ಕೆ ಬರುವಂತೆ ಹೇಳಿ ಕಳುಹಿಸುವರು. ಅವರು ಬಂದು ಸಾವಿರ ಸೀಮೆಯವರಿಂದ ಅಪ್ಪಣೆ ಪಡೆದು “ನಂದ್ಯದಬೆಳ್ಚಡ” ಮನೆಯಿಂದ ತಂದಿರಿಸಿದ ಮೂರ್ತಿಯನ್ನು ಸಂಪ್ರದಾಯದಂತೆ ಮೂರು ಸುತ್ತು ತಿರುಗಿಸುವರು ಆಮೇಲೆ ಮೂರ್ತಿಯನ್ನು ಕೆಳಗಿಳಿಸಿ ಪ್ರಮಾಣ ಬಾವಿಗೆ ಒಂದು ಸುತ್ತು ಬಂದು ಗೋಪುರದಲ್ಲಿ ನರ್ತಿಸುವರು. ಆಗ ನಟ್ಟೋಜರು ಹಿಂಗಾರಾದೊಂದಿಗೆ ದುರ್ಗದೇವಿ ಗುಡಿಯ ಹಿಂಬದಿಯಲ್ಲಿ ನಿಂತ ಶೇರಿಗಾರನ ಬಳಿ ಬಂದು ಕೈಗೆ ಹಿಂಗಾರದ ಹಾಳೆಯನ್ನು ನಟ್ಟೋಜರು ಕೊಟ್ಟು ಅವಭೃಥದ ದಿನವನ್ನು ಗುಟ್ಟಾಗಿ ಸೇರಿಗಾರನಲ್ಲಿ ತಿಳಿಸುತ್ತಾರೆ. ಹಿಂಗಾರದೊಂದಿಗೆ ಶೇರಿಗಾರನು ಗೋಪುರದ ಎದುರಿಗೆ ಬಂದು ನರ್ತನ ಮಾಡುತ್ತಿರುವ ಪಂಬದರ ಕೈಗೆ ಹಿಂಗಾರವನ್ನು ಕೊಟ್ಟು ಕಿವಿಯಲ್ಲಿ ರಹಸ್ಯವಾಗಿ ಅವಭ್ರಥದ ದಿನವನ್ನು ಹೇಳುತ್ತಾನೆ. ಆಬಳಿಕ ಪಂಬದನು ಗಂಟೆ ಬಾರಿಸಿ ಜೋರಾಗಿ ನೆರೆದ ಸಾವಿರ ಸೀಮೆಯವರಿಗೆ ಮನದಟ್ಟಾಗುವಂತೆ ದಿನವನ್ನು ಮೂರು ಬಾರಿ “ಇರುವತ್ತೆನ್ಮ ಪೋಪಿನಾನಿ ಆರಢ” ಎಂದು ತುಳುವಿನಲ್ಲಿ ಹೇಳುತ್ತಾನೆ. ಈ ಬಾರಿ 28 ದಿವಸದ ಜಾತ್ರೆ ನಡೆಯಲಿದೆ.

ಪ್ರಥಮ ಚೆಂಡು ಎಪ್ರಿಲ್ 5
2ನೇ ಚೆಂಡು ಎಪ್ರಿಲ್ 6
3ನೇ ಚೆಂಡು ಎಪ್ರಿಲ್ 7
4ನೆ ಚೆಂಡು ಎಪ್ರಿಲ್ 8
ಕಡೇ ಚೆಂಡು ಎಪ್ರಿಲ್ 9
ರಥೋತ್ಸವ ಎಪ್ರಿಲ್ 10
ಆರಡ ಎಪ್ರಿಲ್ 11

By suddi9

One thought on “ಪೊಳಲಿ ಶ್ರೀರಾಜರಾಜೇಶ್ವರೀ ದೇವಳದ ಜಾತ್ರಾ ಮಹೋತ್ಸವ “28 ಪೋಪಿನಾನಿ ಆರಾಢ””

Leave a Reply

Your email address will not be published. Required fields are marked *