ಬಂಟ್ವಾಳ: ದೇವರಲ್ಲಿ ಅಚಲ ಮತ್ತು ದೃಢವಾದ ಭಕ್ತಿ ಮತ್ತು ನಂಬಿಕೆಯೊಂದಿಗೆ ಆರಾಧಿಸಿದಾಗ ದೇವರ ಅನುಗ್ರಹ ಸಾಧ್ಯವಾಗುತ್ತದೆ. ಇದರೊಂದಿಗೆ ಆರಾಧನಾ ಕೇಂದ್ರಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಾಗ ಪುಣ್ಯ ಪ್ರಾಪ್ತಿಯೂ ಲಭಿಸುತ್ತದೆ ಸಂಚಯವಾಗುತ್ತದೆ ಎಂದು ಕನ್ಯಾಡಿ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಸಿದ್ಧಕಟ್ಟೆ ಸಮೀಪದ ಪೂಂಜ ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಮಂಗಳವಾರ ರಾತ್ರಿ ಏರ್ಪಡಿಸಿದ್ದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ಮುನಿಯಾಲು ಆಯುರ್ವೇದಿಕ್ ಕಾಲೇಜು ಉಪನ್ಯಾಸಕ ಹರಿಪ್ರಸಾದ್ ಭಟ್ ಹೆರ್ಗ ಅವರು ಧಾರ್ಮಿಕ ಉಪನ್ಯಾಸ ನೀಡಿದರು.
ಡಿಸಿಸಿ ಬ್ಯಾಂಕ್ನ ನಿರ್ದೇಶಕ ಭಾಸ್ಕರ ಎಸ್.ಕೋಟ್ಯಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬೆಂಗಳೂರು ವಕೀಲ ಹರೀಶ್ ಪೂಂಜ, ಬಿಲ್ಲವ ಮಹಾಮಂಡಲ ವಕ್ತಾರ ಕೆ.ಹರಿಕೃಷ್ಣ ಬಂಟ್ವಾಳ, ಬಿ.ಸಿ.ರೋಡ್ ವಕೀಲೆ ಆಶಾಪ್ರಸಾದ್ ರೈ ಶುಭ ಹಾರೈಸಿದರು. ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಕುಮಾರ್ ಅಗರ್ತ, ಲಕುಮಿ ಕಲಾ ತಂಡದ ಸಂಚಾಲಕ ಡಿ.ಕಿಶೋರ್ ಶೆಟ್ಟಿ, ಬೆಳ್ತಂಗಡಿ ಬಿಜೆಪಿ ಅಧ್ಯಕ್ಷ ಬಾಲಕೃಷ್ಣ ವಿ.ಶೆಟ್ಟಿ, ಪೊಲೀಸ್ ಇನ್ಸ್ಪೆಕ್ಟರ್ ಲಿಂಗಪ್ಪ ಬಿ.ಆರ್., ಕ್ಷೇತ್ರದ ತಂತ್ರಿ ಪಿ.ಕೃಷ್ಣಪ್ರಸಾದ ಆಚಾರ್ಯ, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಪಿ.ಅನಂತ ಆಚಾರ್ಯ, ಅಧ್ಯಕ್ಷ ವಸಂತ ಶೆಟ್ಟಿ ಕೇದಗೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಮಕೃಷ್ಣ ಚೌಟ, ಪ್ರಧಾನ ಕಾರ್ಯದರ್ಶಿ ರತ್ನಾಕರ ಎಸ್.ಶೆಟ್ಟಿ ಮತ್ತಿತರರು ಇದ್ದರು.
ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ರಮೇಶ್ ಮಂಜಿಲ ಅವರು ಸ್ವಾಗತಿಸಿ, ಅಶೋಕ್ ಹಲಾಯಿ ವಂದಿಸಿದರು. ಉಪನ್ಯಾಸಕ ಗುಣಪ್ರಸಾದ್ ಕಾರಂದೂರು ಕಾರ್ಯಕ್ರಮ ನಿರೂಪಿಸಿದರು.
