ಬಂಟ್ವಾಳ: ಇಲ್ಲಿನ ಕೊಯಿಲ ಗ್ರಾಮದ ಪಿಲ್ಕಾಜೆಗುತ್ತು ಧರ್ಮಚಾವಡಿಯ ಧರ್ಮದೈವಗಳ ನೇಮೋತ್ಸವವು ಶನಿವಾರ ವಿಜೃಂಭಣೆಯಿಂದ ನಡೆಯಿತು. ಶ್ರೀ ಕಲ್ಲುರ್ಟಿ  ಶ್ರೀ ಪಂಜುರ್ಲಿ ಪಿಲ್ಕಾಜೆಯ ಅಧಿಕಾರದ ದೈವಗಳಾದ ಶ್ರೀ ಪಿಲಿಚಾಮುಂಡಿ, ಶ್ರೀ ಜುಮಾದಿಬಂಟ, ಶ್ರೀ ಮಹಿಸಂದಾಯ, ಶ್ರೀ ಕೊಡಮಣಿತ್ತಾಯ, ಮತ್ತು ಪರಿವಾರ ದೈವಗಳಿಗೆ ನೇಮೋತ್ಸವ ಜರುಗಿತು.

003

 

004 002

ಇದಕ್ಕೂ ಮುಂಚಿತವಾಗಿ ಬೆಳಿಗ್ಗೆ ದೈವಗಳ ಬಿಂಬಗಳಿಗೆ ಕಲಶಾಭಿಷೇಕ, ಸಂಜೆ ಸತ್ಯನಾರಾಯಣ ಪೂಜೆ, ಹಾಗೂ ದುರ್ಗಾ  ನಮಸ್ಕಾರ ಪೂಜೆ ನಡೆಯಿತು.
ಕಾರ್ಯಕ್ರಮದಲ್ಲಿ   ಪಿಲ್ಕಾಜೆಗುತ್ತಿನ ಕೊರಗಪ್ಪ ಪೂಜಾರಿ, ವಸಂತಿ ಕೆ. ಪೂಜಾರಿ, ಪ್ರಕಾಶ್ ಅಂಚನ್, ಶೇಖರ ಅಂಚನ್, ಪುರುಷೋತ್ತಮ ಅಂಚನ್, ಸಂಸದ ನಳಿನ್ ಕುಮಾರ್ ಕಟೀಲು, ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ, ರಾಜೇಶ್ ನಾಕ್ ಉಳಿಪಾಡಿಗುತ್ತು, ಜಿ.ಪಂ.ಸದಸ್ಯ ತುಂಗಪ್ಪ ಬಂಗೇರ, ಉದ್ಯಮಿ ಸೇಸಪ್ಪ ಕೋಟ್ಯಾನ್, ಪ್ರಮುಖರಾದ ಪದ್ಮನಾಭ ಕೊಟ್ಟಾರಿ, ಉಮನಾಥ ಕೋಟ್ಯಾನ್, ರಾಮಚಂದ್ರ ಬೈಕಂಪಾಡಿ, ಚೆನ್ನಪ್ಪ ಕೋಟ್ಯಾನ್, ದಿನೇಶ್ ಅಮ್ಟೂರು, ದಿನೇಶ್ ಭಂಡಾರಿ, ಕರುಣೇಂದ್ರ ಪೂಜಾರಿ, ಗಂಗಾಧರ ಪೂಜಾರಿ, ಕೇಶವ ಶೆಟ್ಟಿ, ಸುಲೋಚನಾ ಭಟ್, ತಾ.ಪಂ.ಸದಸ್ಯ ಗಣೇಶ್ ಸುವರ್ಣ, ರಾಯಿ.ಗ್ರಾ.ಪಂ.ಅಧ್ಯಕ್ಷ ದಯಾನಂದ ಸಪಲ್ಯ, ಪದ್ಮನಾಭ ಪೂಜಾರಿ, ಪ್ರಕಾಶ್ ಕುಮಾರ್ ಜೈನ್ ಮತ್ತಿತತರು ಭಾಗವಹಿಸಿದ್ದರು.

By Suddi9

Leave a Reply

Your email address will not be published. Required fields are marked *