ಬಂಟ್ವಾಳ:ಮಾತೃಶ್ರೀ ಗೆಳೆಯರ ಬಳಗ ವೀರಕಂಭ ಇದರ 15 ನೇ ವಾರ್ಷಿಕೋತ್ಸವಾದ ಪ್ರಯುಕ್ತ ಪ್ರಥಮ ವರ್ಷದ ಹೊನಲು ಬೆಳಕಿನ 65 ಕೆ.ಜಿ. ವಿಭಾಗದ ಮಾತೃಶ್ರೀ ಟ್ರೋಫಿ-2016 ಕಬಡಿ ಪಂದ್ಯಟವು ವೀರಕಂಭದ ಮೈರ ಕ್ರಿಡಾಂಗಣದಲ್ಲಿ ಜರಗಿತು.
ಕಾರ್ಯಕ್ರಮವನ್ನು ಪ್ರಗತಿಪರ ಕೃಷಿಕ ರಾಜೇಶ್ ನಾಯಕ್ ಉಳಿಪಾಡಿಗುತ್ತು ದೀಪ ಬೆಳಿಗಿಸುವ ಮೂಲಕ ಉದ್ಘಾಟಿಸಿ, ಮಾತನಾಡುತ್ತ ಕ್ರೀಕೇಟ್ ವ್ಯಾಮೋಹದಿಂದಾಗಿ ಗ್ರಾಮೀಣಾ ಕ್ರೀಡೆ ಕಬಡ್ಡಿ ನಸಿಸುವ ಸಂದರ್ಭದಲ್ಲಿ ಇಂತಹ ಸಘ ಸಂಸ್ಥೆಗಳ ಪ್ರೋತ್ಸಹದಿಂದಾಗಿ ಇಂದು ಕಬಡ್ಡಿ ಪಂದ್ಯವು ಪ್ರಾಮುಖ್ಯತೆ ಪÀಡೆದುದರ ಜೋತೆಗೆ ಕೆಲವೆ ಸಮಯದಲ್ಲಿ ಕಬಡ್ಡಿ ಪಂದ್ಯವು ಒಲಪಿಂಕ್ ಕ್ರೀಡಾ ಕೂಟದಲ್ಲಿ ಸ್ಥಾನ ಪಡೆಯುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.
ಮುಖ್ಯ ಆತಿಥಿಗಳಾಗಿ ಆಗಮಿಸದ ಮಾಣಿ ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಮಂಜುಳಾ ಮಾಧವ ಮಾವೆ, ಮಾತಾನಾಡುತ್ತಾ ತನಗೆ ತಿಳಿದ ಮಟ್ಟಿಗೆ ವೀರಕಂಭದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಾತೃಶ್ರೀ ಗೆಳೆಯರ ಬಳಗವು ಮುಂಚೂನಿಯಲ್ಲಿ ನಿಂತು ಕೆಲಸ ಮಾಡುತ್ತದೆ. ಆದೆ ರೀತಿ ಈ ಗ್ರಾಮದ ಅಭಿವೃದ್ಧಿಯಲ್ಲಿ ತನ್ನ ಅನುದಾನದ ಜೊತೆಗೆ ಸಂಘವು ಇಂತಹ ಕ್ರೀಡಾ ಕೂಟದ ಜೊತೆಗೆ ಬೇರೆ ಬೇರೆ ಸರ್ವಮುಖಿ ಕಾರ್ಯಗಳನ್ನು ಮಾಡುತ್ತಾ ಈ ಗ್ರಾಮದ ಅಭಿವೃದ್ಧಿಯಲ್ಲಿ ಸಹಕರಿಸ ಬೇಕೆಂದು ಮನವಿ ಮಾಡಿ ಈ ಕ್ರೀಡಾ ಕೂಟವು ಯಾವುದೇ ವಿಘ್ನವಿಲ್ಲದೆ ನೆರವೇರಲಿ ಎಂದು ಶುಭ ಹಾರೈಸಿದರು.
DSC_7222
ಬಳಿಕ ಪ್ರಗತಿಪರ ಕೃಷಿಕ ರಾಮದಾಸ ರೈ. ನಡ್ಚಾಲು ಕ್ರೀಡಾ ಅಂಗಣಕ್ಕೆ ತೆಂಗಿನ ಕಾಯಿ ಹೊಡಿಯುವುದರ ಮೂಲಕ ಕಬಡ್ಡಿ ಪಂದ್ಯಟಕ್ಕೆ ಚಾಲಣೆ ನೀಡಿದರು. ಜಿಲ್ಲೆಯ ವಿವಿಧ ಭಾಗಗಳಿಂದ ಸುಮಾರು 40 ತಂಡಗಳು ಭಾಗವಹಿಸಿದ ಈ ಕ್ರೀಡಾ ಕೂಟದಲ್ಲಿ ಪ್ರಥಮ ಸ್ಥಾನ ಹಾಗೂ ಮಾತೃಶ್ರೀ ಟ್ರೋಫಿ-2016 ನ್ನು ಅದರ್ಶ ಪ್ರೆಂಡ್ಸ್ ನೆಕ್ಕರಾಜೆ ತಂಡವು ಪಡೆಯಿತು. ದ್ವಿತೀಯಾ ಸ್ಥಾನ ಹಾಗೂ ತೃತಿಯ ಸ್ಥಾನವನ್ನು ಕ್ರಮಾವಾಗಿ ಕೆಸರಿ ಪ್ರೆಂಡ್ಸ್ ಕೆಲಿಂಜ ಹಾಗೂ ಶಿವಾಜಿ ಪ್ರೆಂಡ್ಸ್ ವೇಣೂರು ಪಡೆಯಿತು. ವೇದಿಕೆಯಲ್ಲಿ ವೀರಕಂಭ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪ್ರೇಮಲತಾ, ಮಾಜಿ ತಾಲೂಕು ಪಂಚಾಯತ್‍ನ ಸದಸ್ಯ ಮಾಧವ ಮಾವೆ, ಶ್ರೀ ದೇವಿ ಕನ್‍ಸ್ಟ್ರಕ್ಷನ್ ಮಾಲಿಕ ಸಂದೀಪ್ ಶೆಟ್ಟಿ ಅರೆಬೆಟ್ಟು, ಕೆ.ಎಂ.ಎಂಪ್. ಮಂಗಳೂರು ಇದರ ವಿಸ್ತರಣಾಧಿಕಾರಿ ಜಗದೀಶ್ ಎ., ಸಿವಿಲ್ ಕಂಟ್ರಾಕ್ಟರ್ ಶ್ರೀ ಪುಷ್ಪರಾಜ ಶೆಟ್ಟಿಗಾರ್, ವೀರಕಂಭ ತಾಲೂಕು ಪಂಚಾಯತ್ ಸದಸ್ಯೆ ಶ್ರೀಮತಿ ಗೀತಾ ಚಂದ್ರಶೇಖರ್, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀ ನಿಶಾಂತ್ ರೈ., ಗ್ರಾಮ ಪಂಚಾಯತ್ ಸದಸ್ಯರುಗಳಾದ ಜನಾರ್ಧಣ ಪೂಜಾರಿ, ಶ್ರೀಮತಿ ಜಯಂತಿ, ಶ್ರೀಮತಿ ಪದ್ಮವತಿ, ರಾಮಚಂದ್ರ ಪ್ರಭು, ಪ್ರಗತಿಪರ ಕೃಷಿಕರಾದ ಪದ್ಮನಾಭ ಗೌಡ ಮೈರ, ಜಗನ್ನಾಥ ಆಳ್ವ ಮೈರ, ಕೇಶವ ನಾಯ್ಕ ಕೆಮ್ಮಟೆ, ವಿಶ್ವ ಹಿಂದೂಪರಿಸತ್ತ್ ವಿಟ್ಲ ವಾಲಯ ಸಂಚಲಕ ಜಯಂತ್ ಸಿ. ಎಚ್., ಮಾತೃಶ್ರೀ ಗೆಳೆಯೆರ ಬಳಗದ ಅಧ್ಯಕ್ಷ ದಿನೇಶ್ ಎಸ್. ವೇದಿಕೆಯಲ್ಲಿ ಉಪಸ್ಥಿತರಿದ್ದರು ಮಜಿ ಶಾಲಾ ಮಕ್ಕಳಿಂದ ಪ್ರಾರ್ಥನೆ ನೇರವೆರಿತು, ಬಳಗದ ಸದಸ್ಯ ರಮೇಶ್ ಗೌಡ ಸ್ವಾಗತಿಸಿದರು, ಶ್ರೀಯುತ ವೇಣುಗೋಪಾಲ ಧನ್ಯವಾದ ನೀಡಿ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *