ಬಂಟ್ವಾಳ: ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಬೋಳಂತೂರು ಪೊಯಿತಾಜೆ ಎಂಬಲ್ಲಿ ಪುನರ್ ನಿರ್ಮಾಣಗೊಳ್ಳಲಿರುವ ಪುರಾತನ ಹಿನ್ನೆಲೆ ಹೊಂದಿರುವ ಶ್ರೀ ಕಾಡೆದಿ ಮತ್ತು ಪರಿವಾರ ದೈವಗಳ ದೈವಸ್ಥಾನಕ್ಕೆ ಪೊಳಲಿ ವೆಂಕಪ್ಪಯ್ಯ ಭಟ್ ಮತ್ತು ಪೊಳಲಿ ಕೃಷ್ಣರಾಜ ಭಟ್ ಪೌರೋಹಿತ್ಯದಲ್ಲಿ ಇತ್ತೀಚೆಗೆ ಶಿಲಾನ್ಯಾಸ ನೆರವೇರಿಸಲಾಯಿತು.
ಸಮಿತಿ ಮುಖಂಡ ಪಿ.ಯೋಗೀಶ ಸಪಲ್ಯ, ಪ್ರಮುಖರಾದ ನಿರಂಜನ ತೋಳ್ಪಡಿತ್ತಾಯ ಬಂಗುಲೆ, ಗುಲಾಬಿ ನಾರಾಯಣ ಸಪಲ್ಯ, ಬಿ.ರಘು ಸಪಲ್ಯ, ಉಮೇಶ ಬೋಳಂತೂರು, ನಾರಾಯಣ ಸಪಲ್ಯ, ದಿನೇಶ ಬಂಗೇರ, ನಾಟಿ ಪುರುಷೋತ್ತಮ ಬಂಗೇರ, ರಾಜಾ ಬಂಟ್ವಾಳ, ಮೋನಪ್ಪ ಪೂಜಾರಿ, ಸಂಜೀವ ಸಪಲ್ಯ ಕೇದಗೆ, ಗಣೇಶ ಕುಮಾರ್, ನಾರಾಯಣ ಸಪಲ್ಯ ಮತ್ತಿತರರು ಇದ್ದರು.
