ಬಂಟ್ವಾಳ : ಮಹಿಳೆಯರು ಸಂಘಟಿತರಾಗಿ ಸಮಾಜದಲ್ಲಿ ಉಂಟಾಗುವ ದೌರ್ಜನ್ಯಗಳನ್ನು ತಡೆಗಟ್ಟುವಲ್ಲಿ ಶ್ರಮಿಸಬೇಕಾಗಿದೆ.ಹೆಣ್ಣು ಭ್ರೂಣ ಹತ್ಯೆಯಂತಹ ಪಿಡುಗನ್ನು ನಿರ್ಮೂಲನೆ ಮಾಡಲು ಮಹಿಳೆಯರೆ ಕಾನೂನಿನ ಅರಿವು ಪಡೆದು ಇದಕ್ಕೆ ಕಾರಣಕರ್ತರಾದವರನ್ನು ಕಾನೂನಿನಡಿ ಶಿಕ್ಷೆಗೆ ಒಳಗಾಗುವ ಹಾಗೆ ಕ್ರಮ ಕೈಗೊಳ್ಳಬೇಕೆಂದು ಗೌ/ಹಿರಿಯ ನ್ಯಾಯಾ ಧೀ ಶರಾದ ಚಂದ್ರಶೇಖರ ಯು. ನುಡಿದರು.KAR_0265 (1) KAR_0261

ಅವರು ತಾಲೂಕು ಕಾನೂನು ಸೇವೆಗಳ ಸಮಿತಿ , ವಕೀಲರ ಸಂಘ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಂಟ್ವಾಳ ಇದರ ಸಂಯುಕ್ತ ಆಶ್ರಯದಲ್ಲಿ ಸ್ತ್ರೀ ಶಕ್ತಿ ಭವನ ಬಿ.ಸಿರೋಡ್ ನಲ್ಲಿ ಬಂಟ್ವಾಳ ತಾಲೂಕು ಮಟ್ಟದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಸಂಪನ್ಮೂಲ ವ್ಯಕ್ತಿ ಎಸ್.ವಿ.ಎಸ್.ಕಾಲೇಜು ಉಪನ್ಯಾಸಕಿ ನಾಗವೇಣಿ ಮಂಚಿ ಹೆಣ್ಣು ಮಕ್ಕಳನ್ನು ಉಳಿಸಿ-ಹೆಣ್ಣು ಮಕ್ಕಳನ್ನು ರಕ್ಷಿಸಿ ಎಂಬ ವಿಷಯದ ಬಗ್ಗೆ ಮಾಹಿತಿ ನೀಡಿದರು.

ತಾಲೂಕು ಪಂ.ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯನ್ ಮಿರಾಂದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ವಕೀಲರ ಸಂಘದ ಅಧ್ಯಕ್ಷ ಚಂದ್ರಶೇಖರ ಪೂಜಾರಿ , ಸಹಾಯಕ ಸರಕಾರಿ ಅಭಿಯೋಜಕ ಎಂ.ಎಸ್.ಆಲಿ , ಸಹಾಯಕ ಸರಕಾರಿ ವಕೀಲರಾದ ಸತೀಶ್ ಕುಮಾರ್ ಶಿವಗಿರಿ, ಸ್ತ್ರೀ ಶಕ್ತಿ ಬ್ಲಾಕ್ ಸೊಸೈಟಿ ಅಧ್ಯಕ್ಷೆ ಸುಜಾತಾ, ಉಪಾಧ್ಯಕ್ಷ ರಿಚಾಡರ್್ ಡಿಕೋಸ್ತ, ಕಾನೂನು ಸಲಹೆಗಾರರಾದ ಆಶಾ ಪ್ರಸಾದ ರೈ , ವಕೀಲರಾದ ವಿಶ್ವನಾಥ ಗೌಡ, ಪಿ.ಸಿ.ಸಾಲಿಯಾನ್, ಸತೀಶ್ ಬಿ., ಶ್ರೀಮತಿ ವಿನೋದ, ಕೇಶವಿ ಗಿರೀಶ್, ಉಪಸ್ಥಿತರಿದ್ದರು. ಪ್ರಭಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಲ್ಲಿಕಾ ಸ್ವಾಗತಿಸಿದರು. ವಿಟ್ಲ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಧಾ ಜೋಷಿ ವಂದಿಸಿ, ಮೇಲ್ವಿಚಾರಕಿ ಭಾರತಿ ಕಾರ್ಯಕ್ರಮ ನಿರ್ವಹಿಸಿದರು.

By Suddi9

Leave a Reply

Your email address will not be published. Required fields are marked *