ಬಂಟ್ವಾಳ: ಬಂಟ್ವಾಳ ತಾಲೂಕಿನ ಕೊಯಿಲ ಗ್ರಾಮದ ಮಡಂದೂರು ನಿವಾಸಿ, ಸಿದ್ಧಕಟ್ಟೆ ವಿಜಯಾ ಬ್ಯಾಂಕಿನ ನಿವೃತ್ತ ಅಧಿಕಾರಿ ದಿವಂಗತ ಸುಂದರ ಚೌಟ ಮಡಂದೂರು ಇವರ ಪತ್ನಿ, ಕೃಷಿಕೆ ಚಂದ್ರಭಾಗಿ ಶೆಟ್ಟಿ ಮಡಂದೂರು (65) ಇವರು ಅಸೌಖ್ಯದಿಂದ ಭಾನುವಾರ ಮಧ್ಯಾಹ್ನ ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರಿಗೆ ಪುತ್ರ ಮತ್ತು ಇಬ್ಬರು ಪುತ್ರಿಯರು ಇದ್ದಾರೆ. ಮೃತರ ಅಂತ್ಯಕ್ರಿಯೆ ಕೊಯಿಲ ಸಮೀಪದ ಹೋರಂಗಳ ಎಂಬಲ್ಲಿ ಭಾನುವಾರ ಸಂಜೆ ನೆರವೇರಿತು.
