ಮೂಡುಬಿದರೆ:ಮೀನು ಹಿಡಿಯಲು ನೀರಿಗಿಳಿದ ಕೂಲಿ ಕಾರ್ಮಿಕ ನೀರಲ್ಲಿ ಮುಳುಗಿ ಮೃತಪಟ್ಟಿದ್ದು ಶುಕ್ರವಾರ ಸಾಯಂಕಾಲ ಆತನ ಶವ ಪತ್ತೆಯಾಗಿದೆ. ಮೃತ ಯುವಕ ಕಡಂದಲೆ ಬಲ್ಲಾಡಿ ದಿವಂಗತ ಅನಂದ ನಾಯಕ್ ಎಂಬವರ ಪುತ್ರ ನಾಗರಾಜ್(27)ಎಂದು ತಿಳಿದುಬಂದಿದೆ. ವೃತ್ತಿಯಲ್ಲಿ ಕೂಲಿ ಕಾರ್ಮಿಕ. ಈತ ಗುರುವಾರ ಕಡಂದಲೆ ಪಟ್ಲಗುಂಡಿಗೆ ಒಬ್ಬನೆ ಮೀನು ಹಿಡಿಯಲು ಹೋದವ ನಾಪತ್ತೆಯಾಗಿದ್ದ. ಸ್ಥಳದಲ್ಲಿ ಈತನ ಬಟ್ಟೆ ಬರೆಗಳು, ಮೊಬೈಲ್ ಮತ್ತು ಚಪ್ಪಲಿಗಳು ಪತ್ತೆಯಾಗಿದ್ದವು. ಮೀನು ಹಿಡಿಯಲು ಹೋದವ ನೀರಿಗೆ ಬಿದ್ದು ಮೃತಪಟ್ಟಿರಬೇಕೆಂದು ಅನುಮಾನಿಸಿ ಪೊಲೀಸರಿಗೆ ದೂರು ನೀಡಲಾಗಿತ್ತು. ಪೊಲೀಸರು, ಅಗ್ನಿಶಾಮಕ ಸಿಬಂದಿಗಳು ಹಾಗೂ ಸ್ಥಳೀಯರೊಂದಿಗೆ ಶುಕ್ರವಾರ ನಿರಿನಲ್ಲಿ ಹುಡುಕಾಡಿಗಾದ ನೀರಿನ ಆಳದಲ್ಲಿ ಶವ ಪತ್ತೆಯಾಗಿದೆ. ಶಶಿಧರ್ ನಾಯಕ್ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
