ಮೂಡುಬಿದಿರೆ: ತೀವ್ರ ಕುತೂಹಲ ಕೆರಳಿಸಿದ, ಪ್ರತಿಷ್ಠೆಯ ಕಣವಾಗಿದ್ದ ಪುತ್ತಿಗೆಯಲ್ಲಿ ಬಿಜೆಪಿ ಹ್ಯಾಟ್ರಿಕ್ ಗೆಲುವಿನೊಂದಿಗೆ ಮತ್ತೊಮ್ಮೆ ಅರಳಿದೆ. ಬಿಜೆಪಿ ಅಭ್ಯರ್ಥಿ ಸುಚರಿತ ಶೆಟ್ಟಿ ಎರಡನೇ ಬಾರಿಗೆ ಜಿ.ಪಂ ಸದಸ್ಯನಾಗುವಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಜಿ.ಪಂ ಅಧ್ಯಕ್ಷನಾಗಿದ್ದ ಸುಚರಿತ ಶೆಟ್ಟಿ ಅವರಿಗೆ ಮಣೆ ಹಾಕಿದ್ದಾನೆ. 94 ಮತಗಳಿಂದ ಸುಚರಿತ ಶೆಟ್ಟಿ ಮತ್ತೆ ಜಿ.ಪಂ.ನತ್ತ ನಡೆದಿದ್ದಾರೆ. ಗೆಲುವಿನ ಉತ್ಸಾಹದಲ್ಲಿದ್ದ ಕಾಂಗ್ರೆಸ್‍ನ ಯುವ ಅಭ್ಯರ್ಥಿ ಚಂದ್ರಹಾಸ ಸನಿಲ್ ಸೋಲನ್ನು ಅನುಭವಿಸುವಂತಾಗಿದೆ.
Sucharitha-Shettyಜೆಡಿಎಸ್‍ಗೆ ಮತದಾರ ಮತ್ತೊಮ್ಮೆ `ನೋ’ಎಂದಿದ್ದಾನೆ. ಜೆಡಿಎಸ್‍ನ ಸಮರ್ಥ ಅಭ್ಯರ್ಥಿ ದಿವಾಕರ ಶೆಟ್ಟಿ, ಓಟಿನ ಬೇಟೆಯಲ್ಲಿ ಗೆಲುವಿನತ್ತ ನೋಟ ಬೀರಲು ವಿಫಲರಾಗಿದ್ದಾರೆ. ಹೋರಾಟದಲ್ಲಿ ಹೆಸರು ಮಾಡಿದ ಸಿಪಿಐಎಂ ಅಭ್ಯರ್ಥಿ ಯಾದವ ಶೆಟ್ಟಿ, ಬಿರುಸಿನಲ್ಲಿ ಮತ ಪಡೆಯುವಲ್ಲಿ ಸೋತಿದ್ದಾರೆ.

By suddi9

Leave a Reply

Your email address will not be published. Required fields are marked *