ಪಡುಬಿದ್ರಿ: ಯಾಂತ್ರಿಕ ಮೀನುಗಾರಿಕೆ ನಡೆಸುತ್ತಿದ್ದ ಸಂದರ್ಭ ಬಲೆಯ ರೋಪ್ ಕಾಲಿಗೆ ಸಿಲುಕಿದ ಪರಿಣಾಮ ಅಕಸ್ಮಾತ್ ನೀರಿಗೆ ಬಿದ್ದು ಪ್ರತಿಭಾವಂತ ಮೀನುಗಾರ ಯುವಕನೊಬ್ಬ ಮೃತಪಟ್ಟ ಘಟನೆ ಇಲ್ಲಿನ ಠಾಣಾ ವ್ಯಾಪ್ತಿಯ ಹೆಜಮಾಡಿಯಲ್ಲಿ ನಡೆದಿದೆ.
ಹೆಜಮಾಡಿಯ ಕುಂದರ್ ಮೂಲಸ್ಥಾನ ಬಳಿಯ ‘ದುಗರ್ಾ ಛಾಯಾ’ ಮನೆಯ ದಿ. ಆನಂದ ಬಿ. ಸಾಲ್ಯಾನ್ರ ಮಗ ನಿತಿನ್ ಎ. ಪುತ್ರನ್(40) ಮೃತ ಪಟ್ಟ ದುದರ್ೈವಿ.
ಹೆಜಮಾಡಿಯ ವಿಜಯಾ ಬಂಗೇರ ಎಂಬವರ ವೈದ್ಯನಾಥ್ ಟ್ರಾಲ್ ಬೋಟ್ನಲ್ಲಿ ಸತೀಶ್ ಪುತ್ರನ್, ರತ್ನಾಕರ ಕಕರ್ೇರ, ಪುರುಷೋತ್ತಮ ಸುವರ್ಣರ ಜತೆಗೆ ರಾತ್ರಿ 8ಗಂಟೆಗೆ ಹೆಜಮಾಡಿಯಿಂದ ಟ್ರಾಲ್ ಬೋಟ್ ಮೀನುಗಾರಿಕೆ ತೆರಳಿದ್ದರು. ರಾತ್ರಿ 2 ಗಂಟೆ ಸಮಯ ಎರಡು ನಾಟಿಕಲ್ ದೂರದಲ್ಲಿ ಟ್ರಾಲ್ ಬಲೆಯನ್ನು ನೀರಿಗೆ ಹರಡಲು ನಿತಿನ್ ಸಿದ್ಧತೆ ನಡೆಸಿದ್ದರು. ಈ ಸಂದರ್ಭ ಬಲೆಯ ರೋಪ್ ನಿತಿನ್ ಕಾಲಿಗೆ ಸುತ್ತಿದ ಪರಿಣಾಮ ಬಲೆ ಹಾಗೂ ರೋಪ್ನೊಂದಿಗೆ ಅವರು ನೀರಿಗೆ ಎಸೆಯಲ್ಪಟ್ಟಿದ್ದರು. ಅಪಾಯ ಅರಿತ ಸಹ ಮೀನುಗಾರರು ತಕ್ಷಣ ಬಲೆಯನ್ನು ಬೋಟಿಗೆ ಎಳೆದು ಹಾಕಿದ್ದರೂ, ರಭಸದಿಂದ ನೀರಿಗೆ ಎಸೆಯಲ್ಪಟ್ಟಿದ್ದ ನಿತಿನ್ರವರು ಮೃತಪಟ್ಟಿದ್ದರು.
ಇಬ್ಬರು ಸಹೋದರು, ಓರ್ವ ಸಹೋದರಿ ಹಾಗೂ ತಾಯಿಯೊಂದಿಗೆ ಜೀವಿಸುತ್ತಿದ್ದ ನಿತಿನ್ರವರು ಅವಿವಾಹಿತರಾಗಿದ್ದು, ಕುಟುಂಬ ಪೋಷಣೆಯ ಜವಾಬ್ದಾರಿ ಹೊತ್ತಿದ್ದರು. ಪ್ರತಿಭಾವಂತ ಮೀನುಗಾರರಾಗಿದ್ದ ಅವರ ಅಕಾಲಿಕ ನಿಧನದಿಂದ ಕುಟುಂಬದ ಮುಖ್ಯ ಆಧಾರ ಸ್ತಂಭವೇ ಕಳಚಿದಂತಾಗಿದೆ.
ಪಡುಬಿದ್ರಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಡುಬಿದ್ರಿ ಪಿಎಚ್ಸಿಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಶವವನ್ನು ಕುಟುಂಬಿಕರಿಗೆ ಹಸ್ತಾಂತರಿಸಲಾಗಿದೆ. ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್ ಮೃತನ ಮನೆಗೆ ಆಗಮಿಸಿ ಸ್ವಾಂತನ ಹೇಳಿದ್ದಾರೆ.

By suddi9

Leave a Reply

Your email address will not be published. Required fields are marked *