ಸುದ್ದಿ9 ಕೈಕಂಬ ;ಗುರುಪುರ ಕೈಕಂಬದಲ್ಲಿ ನಿಂತಿದ್ದ ಬಸ್ಸಿಗೆ ಆಕ್ಟೀವ ಸ್ಕೂಟರ್ ಡಿಕ್ಕಿ ಹೊಡೆದ ಪರಣಾಮ ಸ್ಕೂಟರ್ ಸವಾರನ ತಲೆಗೆ ಮತ್ತು ಕಾಲಿಗೆ ಗಂಭೀರ ಗಾಯಗೊಂಡ ಘಟನೆ ಭಾನುವಾರ ನಡೆದಿದೆ.
ಕೈಕಂಬದ ಹಾಲ್ ನಲ್ಲಿ ಮದುವೆಯ ನಿಮಿತ್ತ ಬಂದಿದ್ದ ಕೋಹಿನೂರು ಬಸ್ಸು ಚಾಲಕ ಮಾರ್ಗದ ಬದಿಯಲ್ಲಿ ನಿಲುಗಡೆ ಮಾಡಿದ ಕೈಕಂಬದಿಂದ ಗುರುಪುರ ಕಡೆಗೆ ಆಕ್ಟೀವ ಸ್ಕೂಟರ್ನಲ್ಲಿ ಗ್ಯಾಸ್ ಸಿಲಿಂಡರ್ನ್ನು ಮನೆಗೆ ಕೊಂಡುಹೋಗುವ ಅವಸರದಲ್ಲಿ ಡಿವೈಡರ್ಗೆ ಡಿಕ್ಕಿ ಹೊಡೆದು ಬಸ್ಸ್ಗೆ ಡಿಕ್ಕಿ ಹೊಡೆಯಿತು. ಗಂಭೀರ ಗಾಯಗೊಂಡ ಅವನನ್ನು ಸ್ಥಳೀಯರು ಸೇರಿ ಆಸ್ಪತ್ರಗೆ ದಾಖಲಿಸಿದ್ದಾರೆ.
