ಕೈಕಂಬ: ಸಜಿಪ ಮುನ್ನೂರು ಕ್ಷೇತ್ರದ ಜಿಲ್ಲಾ ಪಂಚಾಯತ್ ಅಭ್ಯರ್ಥಿ ಆಗಿರುವ ಪದ್ಮನಾಭ ಕೊಟ್ಟಾರಿ ಬಿಜೆಪಿ ಪರವಾಗಿ ಸ್ಪರ್ಧಿಸುತ್ತಿದ್ದು, ಈ ಚುನಾವಣೆ ಅವರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿ ಮೂಡಿದೆ. ಸಂಘಪರಿವಾರದ ಗರಡಿ ಮನೆಯಲ್ಲಿ ಪಳಗಿರುವ ಈ ಹಿಂದೆ ಶಾಸಕರಾಗಿ ಹೆಸರು ಗಳಿಸಿರುವ ಕೊಟ್ಟಾರಿ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಒಂದು ವೇಳೆ ಕೊಟ್ಟಾರಿ ಗೆದ್ದು, ಬಿಜೆಪಿ ಅಧಿಕಾರಕ್ಕೆ ಬಂದರೆ ಪದ್ಮನಾಭ ಕೊಟ್ಟಾರಿ ಜಿ.ಪಂ ಅಧ್ಯಕ್ಷರಾಗಲಿದ್ದಾರೆ ಎಂಬ ನಿರೀಕ್ಷೆ ಇದೆ.

Untitled-1

ಒಂದು ಕಾಲದಲ್ಲಿ ಜಿ.ಪಂ ಚುನಾವಣೆಯ ಸಂದರ್ಭ ಕೊಟ್ಟಾರಿಯವರು ಕಾಂಗ್ರೆಸ್ 30 ಸ್ಥಾನಗಳನ್ನು ಗೆದ್ದಿದ್ದರೆ ಬಿಜೆಪಿ ಪರವಾಗಿ ಕೊಟ್ಟಾರಿ ಒಬ್ಬರೇ ಗೆದ್ದುಕೊಂಡಿರುವುದು ಇತಿಹಾಸ. ಈ ಭಾಗದ ಶಾಸಕರಾಗಿ ಗುರುತಿಸಿಕೊಂಡಿರುವ ಕೊಟ್ಟಾರಿ ಹಲವಾರು ಕಾಮಗಾರಿಗಳನ್ನು ನಡೆಸಿಕೊಟ್ಟಿರುವುದು ಅವರಿಗೆ ಪ್ಲಸ್ ಪಾಯಿಂಟ್. ಅಲ್ಲದೆ ಸಂಘಪರಿವಾರದ ಕಾರ್ಯಕರ್ತರು ಕೊಟ್ಟಾರಿ ಪರವಾಗಿ ಬಿರುಸಿನ ಮತಪ್ರಚಾರ ನಡೆಸಿ ಇನ್ನಷ್ಟು ಬಲ ತುಂಬುತ್ತಿದ್ದಾರೆ.
ಕಾಂಗ್ರೆಸ್ ಪರವಾಗಿ ಚಂದ್ರಪ್ರಕಾಶ್ ಸ್ಪರ್ಧಿಸುತ್ತಿದ್ದಾರೆ. ರೈ ಅವರ ಆಪ್ತ ಎಂದು ಗುರುತಿಸಿಕೊಂಡಿರುವುದರಿಂದ ರೈ ಅವರು ತನ್ನದೇ ಸ್ಪರ್ಧೆ ಎಂದು ಭಾವಿಸಿರುವುದು ಚುನಾವಣೆಗೆ ರಂಗು ನೀಡಿದೆ. ಈ ಚುನಾವಣೆ ಇಬ್ಬರಿಗೂ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ಗೆಲವು ಯಾರ ಮುಡಿಗೆ ಏರಲಿದೆ ಎಂಬುವುದೇ ಪ್ರಶ್ನೆಯಾಗಿದೆ. ತನ್ನ ಸಹವರ್ತಿಗಳೊಂದಿಗೆ ಬಿರುಸಿನ ಮತ ಪ್ರಚಾರ ನಡೆಸಿರುವ ಕೊಟ್ಟಾರಿ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ

By Suddi9

Leave a Reply

Your email address will not be published. Required fields are marked *