ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ರಾಯಿ ಸಮೀಪದ ಪ್ರಸಿದ್ಧ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಭಾನುವಾರ ಸಂಜೆ ನಡೆದ ಏಳನೇ ವರ್ಷದ ಭಜನಾ ಮಂಗಲೋತ್ಸವ ಕಾರ್ಯಕ್ರಮವನ್ನು ಉದ್ಯಮಿ ಶೇಖರ ಅಂಚನ್ ಮತ್ತು ಅರ್ಚಕ ಕೆ.ಸುಂದರ ಹೊಳ್ಳ ಉದ್ಘಾಟಿಸಿದರು. ಶ್ರೀಧರ ಪೂಜಾರಿ, ರವೀಂದ್ರ ಪೂಜಾರಿ, ಗಂಗಾಧರ ಪಿಲ್ಕಾಜೆ ಮತ್ತಿತರರು ಇದ್ದರು.

