ಮುಂಬಯಿ: ಖಾಸಗಿ ಕಾರ್ಯಕ್ರಮವೊಂದಕ್ಕೆ ಕಳೆದ ಶನಿವಾರ ಸಂಜೆ ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ.ಭಂಡಾರಿ ಸಭಾಗೃಹಕ್ಕೆ ಆಗಮಿಸಿದ್ದ ಭಾರತ ರಾಷ್ಟ್ರದ ಮಾಜಿ ಪ್ರಧಾನ ಮಂತ್ರಿ, ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ, ಜಾತ್ಯಾತೀತ ಜನತಾ ದಳದ ರಾಷ್ಟ್ರಧಕ್ಷಹೆಚ್.ಡಿ ದೇವೇಗೌಡಅವರನ್ನು ಬಂಟರ ಸಂಘದ ವತಿಯಿಂದ ಸಂಘದ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಅವರು ತಮ್ಮ ಪದಾಧಿಕಾರಿಗಳನ್ನೊಳಗೊಂಡು ಪುಷ್ಪಹಾರವನ್ನಿತ್ತು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಸಂಘದ ಗೌ| ಪ್ರ| ಕಾರ್ಯದರ್ಶಿ ಉಳ್ತೂರು ಮೋಹನ್‍ದಾಸ್ ಶೆಟ್ಟಿ, ಮುಲುಂಡ್ ಫ್ರೆಂಡ್ಸ್ ಅಧ್ಯಕ್ಷ ಸುರೇಶ್ ಶೆಟ್ಟಿ ಯೆಯ್ಯಾಡಿ, ಒಕ್ಕಲಿಗ ಸಂಘ ಮಹಾರಾಷ್ಟ್ರ ಮುಂಬಯಿ ಇದರ ಸ್ಥಾಪಕಾಧ್ಯಕ್ಷ ಡಾ| ನಾರಾಯಣ ಆರ್.ಗೌಡ, ಅಧ್ಯಕ್ಷ ರಂಗಪ್ಪ ಸಿ.ಗೌಡ, ಗೌ| ಪ್ರ| ಕಾರ್ಯದರ್ಶಿ ಕೆ.ರಾಜೇ ಗೌಡ, ಡಾ|ಶಿವ ಎಂ.ಮೂಡಿಗೆರೆ, ಮತ್ತಿತರರು ಉಪಸ್ಥಿತರಿದ್ದರು
