ಬಂಟ್ವಾಳ: ತಾಲೂಕು ಕೇಂದ್ರ ಬಿ.ಸಿ.ರೋಡ್ ನಗರವನ್ನು ಪುರಸಭಾಡಳಿತ ಸಮಗ್ರ ಅಭಿವೃದ್ಧಿ ಗೊಳಿಸಬೇಕು, ಪುರಸಭಾಡಳಿತವನ್ನು ಜನಸ್ನೇಹಿಗೊಳಿಸಬೇಕೆಂದು ಆಗ್ರಹಿಸಿ ಸಾಮಾಜಿಕ ನ್ಯಾಯಪರ ಸಮಿತಿ ಪ್ರತಿನಿಧಿ, ಹೋರಾಟಗಾರ ಕೈಗೊಂಡಿರುವ ಧರಣಿ ಸತ್ಯಾಗ್ರಹಕ್ಕೆ ಪುರಸಭಾಡಳಿತ ಸ್ಪಂದನೆ ನೀಡಿದೆ. ನಗರ ಅಭಿವೃದ್ಧಿ ಯೋಜನೆಗೆ ಸಂಬಂಧಿಸಿ ಮುಂದಿನ 15 ದಿನಗಳೊಳಗೆ ಕ್ರಮ ಜರಗಿಸಲಾಗುವುದಾಗಿ ಮುಖ್ಯಾಧಿಕಾರಿ ಸುಧಾರಕ್ ಅವರು ತಿಳಿಸಿದ್ದಾರೆ. ಕೆರೆ ಅಭಿವೃದ್ಧಿ ಶುಲ್ಕವನ್ನು ವಿನಾಯಿತಿಗೊಳಿಸಲು ಸಲ್ಲಿಸಲಾದ ಮನವಿಯನ್ನು ಪರಿಶೀಲಿಸಿ, ಸಚಿವರ ಮೂಲಕ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಪುರಸಭಾ ವ್ಯಾಪ್ತಿಯ ಕೆರೆಗಳ ಮಾಹಿತಿಗಳನ್ನು ತಹಸೀಲ್ದಾರರಲ್ಲಿ ಕೇಳಲಾಗಿದೆ. ಅವುಗಳ ಪುನಚ್ಛೇತನಕ್ಕೆ ತಕ್ಷಣ ಕ್ರಮ ಜರಗಿಸಲಾಗುವುದು ಎಂದು ಬುಡಾ ಅಧ್ಯಕ್ಷ ಪಿಯೂಸ್ ಎಲ್ ರೋಡ್ರಿಗಸ್ ಅವರು ತಿಳಿಸಿದ್ದಾರೆ.20160128_114241
ಪುರಸಭೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಕೆಲವೊಂದು ನಿಯಮಾವಳಿಗಳನ್ನು ಸಡಿಲುಗೊಳಿಸಬೇಕು. ಪುರಸಭೆಗೆ ಸಾರ್ವಜನಿಕರು ಸಲ್ಲಿಸುವ ಯಾವುದೇ ಮನವಿ, ದೂರು, ಅರ್ಜಿ ಗಳನ್ನು ಅಧಿಕಾರಿಗಳು ಸಕಾಲಿಕವಾಗಿ ಇತ್ಯರ್ಥ ಮಾಡಬೇಕು. ಕಚೇರಿಯ ಕೆಲವೊಂದು ಸಿಬ್ಬಂದಿಗಳು ಸಾರ್ವಜನಿಕರ ಅಲೆದಾಟ ತಪ್ಪಿಸಬೇಕೇಂದು ಒತ್ತಾಯಿಸಿ ಪ್ರಭಾಕರ ದೈವಗುಡ್ಡೆ ಅವರು, ಬುಧವಾರ ಅನಿಧರ್ಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಕೈಗೊಂಡಿದ್ದರು. ಬೇಡಿಕೆಗೆ ಪೂರಕ ಸ್ಪಂದನೆ ದೊರಕದ ಹಿನ್ನೆಲೆಯಲ್ಲಿ ಗುರುವಾರವೂ ಧರಣಿ ಮುಂದುವರಿಸಲಾಗಿತ್ತು.
ಬಿ.ಸಿ.ರೋಡ್ ಸರ್ವೆಸ್ ರೋಡ್ ನಿರ್ವಹಿಸಬೇಕು, ಸಮಗ್ರ ಚರಂಡಿ ವ್ಯವಸ್ಥೆ ಕಲ್ಪಿಸಬೇಕು, ಮೇಲ್ಸೇತುವೆಯ ಕೆಳಗಿನ ಸ್ಥಳದಲ್ಲಿರುವ ವಾಹನ ನಿಲುಗಡೆ ತೆರವುಗೊಳಿಸಬೇಕು, ವಾಹನ ನಿಲುಗಡೆಗೆ ವಿಶೇಷ ಸ್ಥಳ ಗುರುತಿಸಬೇಕು, ಕಳೆದ 10 ವರ್ಷಕ್ಕೂ ಅಧಿಕ ಒಂದೇ ಸ್ಥಾನದಲ್ಲಿ ಕರ್ತವ್ಯದಲ್ಲಿರುವ ಸಿಬ್ಬಂದಿಗಳನ್ನು ವರ್ಗಾಯಿಸಬೇಕು, ಸಾರ್ವಜನಿಕ ಸೇವೆಯಲ್ಲಿ ಅಸಡ್ಡೆ, ನಿರ್ಲಕ್ಷ್ಯ, ತಡ, ವಿಳಂಬ, ಅನುಚಿತ ವರ್ತನೆ ಮಾಡುವ ಪಂಪ್ ಹೌಸ್ ಸಿಬ್ಬಂದಿಗಳ ವಿರುದ್ಧ ಕಾನೂನು ಕ್ರಮ ಜರಗಿಸಬೇಕೆಂದು ಪ್ರಭಾಕರ ದೈವಗುಡ್ಡೆ ಆಗ್ರಹಿಸಿದರು.

ಬುಡಾ ಅಧ್ಯಕ್ಷ ಪಿಯೂಸ್ ರೋಡ್ರಿಗಸ್, ಪುರಸಭಾಧ್ಯಕ್ಷತೆ ವಸಂತಿ ಚಂದಪ್ಪ, ಬಂಟ್ವಾಳ ಬ್ಲಾಕ್ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಸದಸ್ಯರಾದ ರಾಮಕೃಷ್ಣ ಆಳ್ವ, ಪ್ರವೀಣ್, ಸದಾಶಿವ ಬಂಗೇರ, ಮಹಮ್ಮದ್ ನಂದರಬೆಟ್ಟು, ಗಂಗಾಧರ್, ಜಗದೀಶ್ ಕುಂದರ್, ಮಹಮ್ಮದ್ ಶೆರೀಫ್, ನಾಮ ನಿರ್ದೇಶಕ ಸದಸ್ಯ ಸಿದ್ಧೀಕ್, ಮುಖ್ಯಾಧಿಕಾರಿ ಸುಧಾಕರ್ ಪ್ರಭಾಕರ ದೈವಗುಡ್ಡೆಯನ್ನು ಮನವೊಲಿಸಿದರು. ಸಾಮಾಜಿಕ ನ್ಯಾಯಪರ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಅಲ್ಲಿಪಾದೆ, ಸದಸ್ಯರಾದ ರಾಮಚಂದ್ರ ಕಾಯರ್ಮಾರ್, ಮಹಮ್ಮದ್ ಶೆರೀಫ್, ಹರೀಶ್ ಪೆರಾಜೆ, ರಜಾಕ್ ಬಾಂಬಿಲ ಅವರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜತೆಗೆ ಚರ್ಚಿಸಿ ಮುಂದಿನ 15 ದಿನಗಳೊಳಗೆ ಪರಿಹಾರ ಕ್ರಮ ಕಂಡುಕೊಳ್ಳುವುದಾಗಿ ನಿರ್ಧರಿಸಲಾಯಿತು. ಈ ಹಿನ್ನೆಲೆಯಲ್ಲಿ ಸತ್ಯಾಗ್ರಹವನ್ನು ಪ್ರಭಾಕರ್ ವಾಪಾಸ್ ಪಡೆದರು.

By suddi9

Leave a Reply

Your email address will not be published. Required fields are marked *