ಮುಂಬಯಿ: ತುಳು-ಕನ್ನಡ ವೆಲ್ಫೇರ್ ಅಸೋಸಿಯೇಶನ್ ಮೀರಾ-ಭಯಂದರ್ ಸಂಸ್ಥೆಯು ಸಿರಿವರ ಕಲ್ಚರಲ್ ಅಕಾಡೆಮಿ ಬೆಂಗಳೂರು ಸಹಯೋಗದಲ್ಲಿ ಬರುವ ಫೆ.06ನೇ ಶನಿವಾರಸಂಜೆ 4.00 ಗಂಟೆಯಿಂದ ಮೀರಾರೋಡ್ ಪೂರ್ವದ ಮೀರಾಗ್ರೌಂಡ್ ಸಭಾಗೃಹ, ಪೂನಂ ಸಾಗರ್ ಕಾಂಪ್ಲೆಕ್ಸ್ ಇಲ್ಲಿ ಕಲರವ-2016 ಆಯೋಜಿಸಿದೆ. ಸಂಜೆ 4.00 ಗಂಟೆಯಿಂದ ಶ್ರೀ ಸತ್ಯನಾರಾಯಣ ಮಹಾಪೂಜೆಯೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ನಂತರ ಟಿಕೆಡಬ್ಲ್ಯೂಎ ಅಧ್ಯಕ್ಷ ಎ.ಕೆ ಹರೀಶ್ ನೇತೃತ್ವದಲ್ಲಿ ನಡೆಯಲ್ಪಡುವ `ಕಲರವ-2016′ ಕಾರ್ಯಕ್ರಮವನ್ನು ಅಮೇರಿಕಾ (ಯುಎಸ್‍ಎ)ದ ನ್ಯೂಯಾರ್ಕ್‍ನ ಗೃಹ ಇಲಾಖೆಯ ಉನ್ನತಾಧಿಕಾರಿ ರವಿಪಿಲಾರ್ ಮತ್ತು ಸಂಧ್ಯಾ ಪಿಲಾರ್ ಉದ್ಘಾಟಿಸಲಿದ್ದಾರೆ.
Untitled-1 copyಸಭಾ ಕಾರ್ಯಕ್ರಮದಲ್ಲಿಸ್ವರ ಪ್ರಿಂಟ್ ಎಂಡ್ ಪಬ್ಲಿಕೇಶನ್ಸ್ ಪ್ರಕಟಿತ ಶಕುಂತಳಾ ಆರ್.ಪ್ರಭು ಅವರ `ಮಿಂಚಿನ ಹೊಂಚು’ ಕಥಾ ಸಂಕಲನ, ಡಾ| ಪಿ.ಎಂ ಭುಜಂಗ ಅವರ `ವಸು’ ಕವನ ಸಂಕಲನ ಮತ್ತು ಲೀಲಾ ಗಣೇಶ್ ಕಾರ್ಕಳ ಅವರ `ಮನೋಲಹರಿ’ ಕವನ ಸಂಕಲನವನ್ನು ಕನ್ನಡಿಗಪತ್ರಕರ್ತರ ಸಂಘಮಹಾರಾಷ್ಟ್ರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಲೋಕಾರ್ಪಣೆ ಗೊಳಿಸಲಿದ್ದಾರೆ. ರವಿ ರಾ. ಅಂಚನ್ ಮತ್ತು ಪ್ರೊ| ಅರುಣ್ ಮ್ಹಾತ್ರೆ ನಿರ್ದೇಶನದಲ್ಲಿ ನಡೆಯಲ್ಪಡುವ `ಕಲರವ’ ಕಾರ್ಯಕ್ರದಲ್ಲಿ ಕುರಲ್-ತೋರಣ ಮಂಟಪಗಳ ಉದ್ಘಾಟನೆನಡೆಯಲಿದ್ದು, ಗಿರೀಶ್ ಬಿ.ಸಾಲ್ಯಾನ್, ಸನಕುಮಾರ್ ದುಬಾಯಿ, ಡಾ| ಶಿವ ಎಂ.ಮೂಡಿಗೆರೆ, ಪ್ರವೀಣ್ ಜೆ.ಭಟ್, ಸುರೇಶ್ ಎಸ್.ಕಾಂಚನ್, ಸಂತೋಷ್ ಜಿ.ಪುತ್ರನ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಆಯೋಜಿಸಲಾದ ತ್ರಿಭಾಷಾ ಕಾವ್ಯೋತ್ಸವವನ್ನು ಪತ್ರಕರ್ತ ರೋನ್ಸ್ ಬಂಟ್ವಾಳ್ ಉದ್ಘಾಟಿಸಲಿದ್ದು, ಪಿ.ವಿ ಭಾಸ್ಕರ್, ಪಯಾರು ರಮೇಶ್ ಶೆಟ್ಟಿ, ಎನ್.ಕೆ ಬಿಲ್ಲವ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ದೇವದಾಸ ಪಿ.ಸಾಲ್ಯಾನ್, ಪ್ರಮೋದಿನಿ ಮಾಡ, ರಮೇಶ್ ಶಿವಪುರ (ತುಳು), ಸುಬ್ರಾಯ ಭಟ್, ಗೋಪಾಲ ತ್ರಾಸಿ, ರವೀಂದ್ರನಾಥ್ ಸಿರಿವರ (ಕನ್ನಡ), ಪ್ರೊ| ಅರುಣ್ ಮ್ಹಾತ್ರೆ, ಅಶೋಕ್ ನಾಯ್ಗಾಂವ್ಕರ್, ಅನುಪಮಾ ಉಜ್ಗರೆ (ಮರಾಠಿ) ಕವಿತೆಗಳನ್ನು ಪ್ರಸ್ತುತ ಪಡಿಸಲಿದ್ದಾರೆ. ಪ್ರತಿ ಅವತರಣಿಕೆಯ ಆರಂಭ ಮತ್ತು ಅಂತ್ಯದಲ್ಲಿ ಚಿಣ್ಣರ ನೃತ್ಯ, ಶಾಲಾ ಪುಟಾಣಿಗಳಿಂದ ಮಕ್ಕಳ ನೃತ್ಯ, ಗಾನ ಲಹರಿ, ಕಲರವ ಮಂಟಪ ಕಿರುನಾಟಕ ಇತ್ಯಾದಿ ಪ್ರದರ್ಶಿಸಲ್ಪಡುವುದು. ಶ್ರೀ ಸತ್ಯನಾರಾಯಣ ಮಹಾಪೂಜೆ ಬಳಿಕ ಪ್ರಸಾದ ವಿತರಣೆ ಜರುಗಲಿದೆ. ಆ ಪ್ರಯುಕ್ತ ಮಹಾನಗರದಲ್ಲಿನ ಕಲಾ ಮತ್ತು ಸಾಹಿತ್ಯಾಭಿಮಾನಿ ತುಳುಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗಾಗಿ ಸಹಕರಿಸುವಂತೆ ಎಂದು ಗೌ.ಪ್ರ. ಕಾರ್ಯದರ್ಶಿ ಲೀಲಾ ಗಣೇಶ್ ಕಾರ್ಕಳ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *