ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಕೊಯಿಲ ಗ್ರಾಮ ಪಂಜಿಕಲ್ಲು ಸಮೀಪದ ಬೊಬ್ಬರ್ಯ ಬೈಲು ಎಂಬಲ್ಲಿ ಕಳೆದ ಎರಡು ವರ್ಷಗಳ ಹಿಂದೆಯಷ್ಟೇ ಸಂಪೂರ್ಣ ಪುನರ್ ನಿರ್ಮಾಣಗೊಂಡ ಪುರಾತನ ಹಿನ್ನೆಲೆ ಹೊಂದಿರುವ ಬೊಬ್ಬರ್ಯ ದೈವದ ವಾರ್ಷಿಕ ನೇಮೋತ್ಸವವು ಇದೇ 30ರಂದು ನಡೆಯಲಿದೆ.
27btl-Bobbaryaಅಂದು ಬೆಳಿಗ್ಗೆ ದೈವಸ್ಥಾನದಲ್ಲಿ ನವಕ ಪ್ರಧಾನ ಕಲಶ ಮತ್ತು ಆಶ್ಲೇಷ ಬಲಿ, ರಾತ್ರಿ ಗಂಟೆ 8ರಿಂದ ಬೊಬ್ಬರ್ಯ ದೈವದ ನೇಮೋತ್ಸವ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಅಂದು ರಾತ್ರಿ 1 ಗಂಟೆಗೆ ಬೊಬ್ಬರ್ಯ ದೈವವು ಪಕ್ಕದಲ್ಲೇ ಇರುವ ಕೆರೆಗೆ ‘ಗಂಗಾ ಭೇಟಿ’ಗೆ ತೆರಳುವ ಪದ್ಧತಿ ಹಿನ್ನೆಲೆಯಲ್ಲಿ ರೂ 1ಲಕ್ಷಕ್ಕೂ ಮಿಕ್ಕಿ ವೆಚ್ಚದಲ್ಲಿ ಇಲ್ಲಿನ ಪಾಳು ಬಿದ್ದ ಕೆರೆ ಅಭಿವೃದ್ಧಿಪಡಿಸಿ, ಆಕರ್ಷಕ ಮೆಟ್ಟಿಲು ನಿರ್ಮಿಸಲಾಗಿದೆ. ಅಂದು ರಾತ್ರಿ 3ಗಂಟೆಗೆ ಪರಿವಾರ ದೈವಗಳ ನೇಮೋತ್ಸವ ನಡೆಯಲಿದ್ದು, ಪ್ರತೀ ವಾರ ಸ್ಥಳೀಯ ಭಕ್ತರು ಬಂದು ಶ್ರಮದಾನ ಮೂಲಕ ನೇಮೋತ್ಸವ ಯಶಸ್ವಿಗೆ ಶ್ರಮಿಸುತ್ತಿದ್ದಾರೆ ಎಂದು ಎಂದು ಸಮಿತಿ ಸಂಚಾಲಕ, ಸ್ಥಳೀಯ ತಾಲ್ಲೂಕು ಪಂಚಾಯಿತಿ ಸದಸ್ಯ ವಸಂತ ಕುಮಾರ್ ಅಣ್ಣಳಿಕೆ ಇವರು ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *