ಬಂಟ್ವಾಳ: ಬಂಟ್ವಾಳ ತಾಲೂಕು ಕನ್ಯಾನದ ಸರಸ್ವತಿ ವಿದ್ಯಾಲಯದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಸ್ಕೌಟ್ ವಿಭಾಗವನ್ನು ಜಿಲ್ಲಾ ಸಂಘಟನಾ ಆಯುಕ್ತೆ ಚಂದ್ರಕಲಾ ಉದ್ಘಾಟಿಸಿದರು.
ಸಂಸ್ಥೆಯ ಸಂಚಾಲಕ ಈಶ್ವರ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು, ಮಧುರಾ ಈಶ್ವರ ಪ್ರಸಾದ್, ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಬಿ ವಿಶ್ವನಾಥ ಗೌಡ ಕುಳಾಲು, ಜಿಲ್ಲಾ ಪ್ರತಿನಿಧಿ ಜೆಸಿಂತಾ ಮಸ್ಕರೇನಸ್, ಮುಖ್ಯೋಪಾಧ್ಯಾಯಿನಿ ಲವಿನಾ ಮಂತೆರೊ ಉಪಸ್ಥಿತರಿದ್ದರು. ಸ್ಕೌಟ್ ಮಾಸ್ಟರ್ ರಮೇಶ್ ನಿರೂಪಿಸಿ ಶಿಕ್ಷಕಿ ಉಮಾ ಪಾರ್ವತಿ ವಂದಿಸಿದರು.
