ದೇವಸ್ಥಾನಗಳಿಂದ ಧರ್ಮ ಜಾಗೃತಿ ಸಾಧ್ಯ: ಕೆ.ಎಸ್.ಈಶ್ವರಪ್ಪ
ಬಂಟ್ವಾಳ: ಧರ್ಮದ ರಕ್ಷಣೆಗಾಗಿ ದೇವಾಲಯಗಳು ಸ್ಪೂರ್ತಿ ಮತ್ತು ಪ್ರೇರಣೆ ನೀಡುವ ಮೂಲಕ ಸಂಘಟನೆ ಜೊತೆಗೆ ಧರ್ಮಜಾಗೃತಿ ಮೂಡಿಸಲು ಸಾಧ್ಯವಾಗಿದೆ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ತಾಲ್ಲೂಕಿನ ನರಿಕೊಂಬು ಗ್ರಾಮದ ನಾಟಿಬೀದಿ ಶ್ರೀ ಕೋದಂಡರಾಮಚಂದ್ರ ಹನುಮಂತ ಗರುಡ ಮತ್ತು ಆರ್ಯಕಾತ್ಯಾಯಿನಿ ದೇವಸ್ಥಾನದಲ್ಲಿ ದೇವರ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ಪ್ರಯುಕ್ತ ಭಾನುವಾರ ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದು. ಈ ಹಿಂದೆ ಬಡರಾಷ್ಟ್ರ, ಸಾಲಗಾರ ರಾಷ್ಟ್ರ ಎಂಬ ಹಿನ್ನೆಲೆಯಲ್ಲಿ ಕಡೆಗಣಿಸುತ್ತಿದ್ದ ಅಮೇರಿಕಾದಂತಹ ವಿವಿಧ ಮುಂದುವರಿದ ಬಲಾಢ್ಯ ರಾಷ್ಟ್ರಗಳು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಹಾಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅವಧಿಯಲ್ಲಿ ಇಲ್ಲಿನ ಸಾಧನೆ ಬಗ್ಗೆ ದಿಟ್ಟಿಸಿ ನೋಡುತ್ತಿದೆ.
18btl-Natiಸ್ವಾಮಿ ವಿವೇಕಾನಂದರ ಬಳಿಕ ರವಿಶಂಕರ ಗುರೂಜಿ, ಮಾತಾ ಅಮೃತಾನಂದಮಯಿ ಮತ್ತಿತರ ಧಾರ್ಮಿಕ ನೇತಾರರಿಂದ ಇಲ್ಲಿನ ಆಧ್ಯಾತ್ಮಿಕತೆ ಬಗ್ಗೆ ತಿಳಿಯಲು ವಿದೇಶೀಯರು ಇವರನ್ನು ಆಹ್ವಾನಿಸುತ್ತಿರುವುದು ಇದಕ್ಕೆ ನೈಜ ಸಾಕ್ಷಿಯಾಗಿದೆ ಎಂದು ಅವರು ವಿವರಿಸಿದರು.
ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ಡಾ.ಕೆ.ಪ್ರಭಾಕರ ಭಟ್ ಮಾತನಾಡಿ ತ್ಯಾಗ ಮತ್ತು ಸೇವೆಯ ಪ್ರತಿರೂಪವಾಗಿರುವ ಶ್ರೀರಾಮಚಂದ್ರ ಮತ್ತು ಸೀತಾದೇವಿ ನಮಗೆ ಆದರ್ಶರಾಗಿದ್ದಾರೆ ಎಂದರು.
ಮಾಣಿಲ ಕ್ಷೇತ್ರದ ಮೋಹನದಾಸ ಸ್ವಾಮೀಜಿ, ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕ ಲಕ್ಷ್ಮೀ ನಾರಾಯಣ ಅಸ್ರಣ್ಣ ಆಶೀರ್ವಚನ ನೀಡಿದರು.
ಪ್ರಮುಖರಾದ ಕೃಷ್ಣ ಪ್ರಸಾದ್ ಮಡ್ತಿಲ ಸುಬ್ರಹ್ಮಣ್ಯ, ಉದ್ಯಮಿ ರವಿ ಕಕ್ಯಪದವು, ಸುರೇಶ್ ಶೆಟ್ಟಿ ಮುಂಬೈ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸೇವಾ ಪ್ರತಿನಿಧಿ ಲಕ್ಷ್ಮೀ ಪ್ರಕಾಶ್, ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಸುಲೋಚನಾ ಜಿ.ಕೆ.ಭಟ್, ಕ್ಷೇತ್ರಾಧ್ಯಕ್ಷ ಜಿ.ಆನಂದ, ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಎನ್.ಪ್ರಕಾಶ್ ಕಾರಂತ, ಶಿಕ್ಷಕ ವೆಂಕಪ್ಪ ಬಂಜನ್ ಮತ್ತಿತರರು ಶುಭ ಹಾರೈಸಿದರು.
ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಯಶೋಧರ ಕರ್ಬೆಟ್ಟು, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್.ಪುರುಷೋತ್ತಮ ಬಂಗೇರ ನಾಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೇಶವ ಶಾಂತಿ, ಗೌರವಾದ್ಯಕ್ಷ ಡಾ.ಪ್ರದೀಪ್ ಕುಮಾರ್ ಶೆಟ್ಟಿ ನಾಟಿಗುತ್ತು, ಬ್ರಹ್ಮಕಲಶೋತ್ಸವ ಸಮಿತಿ ಗೌರವಾದ್ಯಕ್ಷ ಪದ್ಮನಾಭ ಮಯ್ಯ, ಉಪಾಧ್ಯಕ್ಷ ಪುರುಷೋತ್ತಮ ಸಾಲ್ಯಾನ್ ಮತ್ತಿತರರು ಇದ್ದರು.
ಸಮಿತಿ ಉಪಾಧ್ಯಕ್ಷ ಆನಂದ ಸಾಲಿಯಾನ್ ಸ್ವಾಗತಿಸಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪ್ರಕಾಶ್ ಅಂಚನ್ ಪಾಸ್ತಾವಿಕ ಮಾತನಾಡಿದರು. ಸಾಂಸ್ಕ್ರತಿಕ ಸಮಿತಿ ಸಂಚಾಲಕ ಪ್ರಕಾಶ್ ಅಂಚನ್ ವಂದಿಸಿದರು, ಪತ್ರಕರ್ತ ಗೋಪಾಲ ಅಂಚನ್ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *