ಬಜ್ಪೆ: ಶ್ರೀನಿರಂಜನ ಸ್ವಾಮಿ ಪ್ರಥಮ ದರ್ಜೆ ಕಾಲೇಜು ರಾಷ್ಟ್ರೀಯ ಸೇವಾ ಯೋಜನಾ ಘಟಕ ಸುಂಕದಕಟ್ಟೆ-ಬಜ್ಪೆ, ಅಖಿಲ ಭಾರತ ಬಿಲ್ಲವರ ಏಕೀಕರಣ ಸಮಿತಿ ಮಂಗಳೂರು ಹಾಗೂ ಶ್ರೀ ಗುರು ಚಾರಿಟೆಬಲ್ ಟ್ರಸ್ಟ್(ರಿ) ಸುರತ್ಕಲ್ ಇವರ ಸಹಭಾಗಿತ್ವದಲ್ಲಿ ಯೆನಪೋಯ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕಾಲೇಜು ದೇರಳಕಟ್ಟೆ ಇವರ ಸಹಕಾರದೊಂದಿಗೆ ಕಾಲೇಜಿನ ಶಿಕ್ಷಕ ರಕ್ಷಕ ಸಂಘ, ಹಳೆ ವಿದ್ಯಾರ್ಥಿ ಸಂಘ, ಕಾಲೇಜು ಅಭಿವೃದ್ಧಿ ಸಮಿತಿ ಮತ್ತು ಯೂತ್ ರೆಡ್ ಕ್ರಾಸ್ ಘಟಕ ಇದರ ಸಹಯೋಗದೊಂದಿಗೆ ಉಚಿತ ವೈದ್ಯಕೀಯ ಮತ್ತು ದಂತ ತಪಾಸಣಾ ಬೃಹತ್ ಉಚಿತ ಚಿಕಿತ್ಸಾ ಶಿಬಿರವು ಶ್ರೀನಿರಂಜನ ಸ್ವಾಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜ. 17ರಂದು ಕಾಲೇಜು ಆವರಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅಖಿಲ ಭಾರತ ಬಿಲ್ಲವರ ಏಕೀಕರಣ ಸಮಿತಿಯ ಅಧ್ಯಕ್ಷರಾದ ರವಿ ಪೂಜಾರಿ ಇವರು ಆರೋಗ್ಯ ಮತ್ತು ಸಮಾಜ ಸೇವೆಯ ಮಹತ್ವದ ಬಗ್ಗೆ ತಿಳಿ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಎನ್.ಎಸ್.ಶಿಕ್ಷಣ ಸಂಸ್ಥೆಗಳ ಟ್ರಸ್ಟಿಯಾದ ನಾರಾಯಣ ಪೂಜಾರಿ ವಹಿಸಿದ್ದರು. ಏಕೀಕರಣ ಸಮಿತಿಯ ಪ್ರಧಾನ ಕಾರ್ಯದರ್ಶಿ ದೀಪಕ್ ಕೋಟ್ಯಾನ್, ಶ್ರೀ ಗುರು ಚಾರಿಟೆಬಲ್ ಟ್ರಸ್ಟ್ನ ಕಾರ್ಯದರ್ಶಿ ಜಯಾನಂದ ಎಂ., ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶರತ್ ಸುವರ್ಣ, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರೂ, ಕಂದಾವರ ಗ್ರಾಮ ಪಂಚಾಯತ್ ಅಧ್ಯಕ್ಷರೂ ಆದ ವಿಜಯ ಗೋಪಾಲ ಸುವರ್ಣ, ಪ್ರಾಂಶುಪಾಲರಾದ ಲತಾ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀಧರ ಆಚಾರ್ಯ, ಸಂಯೋಜಕರಾದ ರಾಮಣ್ಣ ಪೂಜಾರಿ, ಯೂತ್ ರೆಡ್ ಕ್ರಾಸ್ ಘಟಕದ ನಿರ್ದೇಶಕರಾದ ಕಮಲಾಕ್ಷಿ, ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಶಾಲಿನಿ, ಯೆನಪೋಯ ವೈದ್ಯಕೀಯ ವಿದ್ಯಾ ಸಂಸ್ಥೆಯ ಡಾ| ವೇದಾವತಿ, ಡಾ| ಇಮ್ರಾನ್ ಮತ್ತು ಡಾ| ಭರತ್ ಉಪಸ್ಥಿತರಿದ್ದರು.
ಯೋಜನಾಧಿಕಾರಿ ಶಾಲಿನಿ ಸ್ವಾಗತಿಸಿದರು. ಉಪನ್ಯಾಸಕಿ ಕು. ಮಂಜುಳ ವಂದಿಸಿದರು. ಘಟಕದ ಕಾರ್ಯದರ್ಶಿ ಕೀರ್ತಿ ಕಾರ್ಯಕ್ರಮ ನಿರೂಪಿಸಿದರು. ಪರಿಸರದ ಸುಮಾರು 400ಕ್ಕೂ ಮಿಕ್ಕಿ ಜನರು ಶಿಬಿರದ ಪ್ರಯೋಜನವನ್ನು ಪಡೆದರು.
