ಮುಂಬಯಿ: ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ಖಚಿತ ಎಂಬ ಚುನಾವಣೋತ್ತರ ಸಮೀಕ್ಷೆಗಳ ಭವಿಷ್ಯದ ಹಿನ್ನೆಲೆಯಲ್ಲಿ ಸತತ ಮೂರನೇ ದಿನವಾದ ಮಂಗಳವಾರವೂ ಷೇರು ಮಾರುಕಟ್ಟೆಯಲ್ಲಿ ಭಾರೀ ಉತ್ಸಾಹ ಕಂಡುಬಂದಿದೆ.
ಮಂಗಳವಾರ ವಹಿವಾಟು ಆರಂಭವಾಗುತ್ತಿದ್ದಂತೆ ಬಿಎಸ್ಇ ಸಂವೇದಿ ಸೂಚ್ಯಂಕ 300ಅಂಶಗಳಷ್ಟು ಏರಿಕೆ ಕಂಡು 24,000ದ ಗಡಿ ದಾಟಿದರೆ, ನಿಫ್ಟಿ ಸೂಚ್ಯಂಕ ಆರಂಭಿಕ ವಹಿವಾಟಿನಲ್ಲೇ 7,165.75ಕ್ಕೆ ತಲುಪಿ ದಾಖಲೆ ಏರಿಕೆ ಕಂಡಿತು.
