ಮೂಡುಬಿದಿರೆ: ಕರ್ನಾಟಕ ಬಾಲ್‍ಬ್ಯಾಡ್ಮಿಂಟನ್ ಸಂಸ್ಥೆ ಹಾಗೂ ಮಹಾರಾಜ ಬಾಲ್‍ಬ್ಯಾಡ್ಮಿಂಟನ್ ಕ್ಲಬ್ ಇವುಗಳ ಜಂಟಿ ಆಶ್ರಯದಲ್ಲಿ ಮೈಸೂರಿನಲ್ಲಿ ಭಾನುವಾರ ಮುಕ್ತಾಯಗೊಂಡ ರಾಜ್ಯ ಸೀನಿಯರ್ ಬಾಲ್‍ಬ್ಯಾಡ್ಮಿಂಟನ್ ಲೀಗ್ ಚಾಂಪಿಯನ್‍ಶಿಪ್‍ನ ಮಹಿಳೆಯರ ವಿಭಾಗದಲ್ಲಿ ಮೂಡುಬಿದರೆ ಆಳ್ವಾಸ್ ತಂಡ 9ನೇ ಬಾರಿ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದು, ಆಳ್ವಾಸ್ ‘ಬಿ’ ತಂಡ ರನ್ನರ್ಸ್ ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿದೆ.
28mood Alvasಫೈನಲ್‍ನಲ್ಲಿ ಆಳ್ವಾಸ್ ‘ಎ’ ತಂಡ ಆಳ್ವಾಸ್ ‘ಬಿ’ ತಂಡವನ್ನು 35-24, 35-21 ಹಾಗೂ 35-28 ನೇರ ಸೆಟ್‍ಗಳಿಂದ ಸೋಲಿಸಿತ್ತು. ಸೆಮಿಫೈನಲ್‍ನಲ್ಲಿ ಆಳ್ವಾಸ್ ‘ಎ’ ತಂಡ ಜಯ ಸ್ಪೋಟ್ರ್ಸ್ ಕ್ಲಬ್ ಬೆಂಗಳೂರು ತಂಡವನ್ನು ಹಾಗೂ ಆಳ್ವಾಸ್ ‘ಬಿ’ ತಂಡ ತುಮಕೂರಿನ ಎಸ್.ಬಿ.ಬಿ.ಸಿ ತಂಡವನ್ನು ಸೋಲಿಸಿ ಫೈನಲ್ಸ್ ತಲುಪಿತ್ತು. ಪುರುಷರ ವಿಭಾಗದಲ್ಲಿ ಆಳ್ವಾಸ್ ತಂಡ ತೃತೀಯ ಸ್ಥಾನವನ್ನು ಗಳಿಸಿತು.

By suddi9

Leave a Reply

Your email address will not be published. Required fields are marked *