ಬಂಟ್ವಾಳ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಯು.ಟಿ.ಖಾದರ್ ಅವರು ತಮ್ಮ ಕ್ಷೇತ್ರ ವ್ಯಾಪ್ತಿಯ ನೇತ್ರಾವತಿ ನದಿ ಪ್ರದೇಶದ ಜನರ ಅವಶ್ಯಕತೆಯನ್ನು ಪರಿಗಣಿಸಿ ಸಜೀಪನಡು ಹಾಗೂ ತುಂಬೆ ಗ್ರಾಮದ ಸಂಪರ್ಕದಲ್ಲಿರುವ ಜನರ ಪ್ರಮುಖ ಬೇಡಿಕೆಗೆ ಸ್ಪಂದಿಸಿ ಮಂಜೂರುಗೊಳಿಸಿರುವ ಅವರು ನಿರ್ಮಾಣದ ಗುದ್ದಲಿ ಪೂಜೆಯನ್ನು ಬುಧವಾರ ನೆರವೇರಿಸಿದರು. ಜಿ.ಪಂ.ಸದಸ್ಯರಾದ ಮಮತಾಗಟ್ಟಿ ಹಾಗೂ ಚಂದ್ರಪ್ರಕಾಶ್ ಶೆಟ್ಟಿಯವರ ಶಿಫಾರಸ್ಸಿನ ಮೇರೆಗೆ32 ಲಕ್ಷ ರುಪಾಯಿ ವೆಚ್ಚದ ದೋಣಿ ಏರುವ ಮತ್ತು ಇಳಿಯುವ ಸುರಕ್ಷಿತ ಮಾದರಿ ಜಟ್ಟಿ ಗೆ ಹಣ ಬಿಡುಗಡೆ ಗೊಳಿಸಿದ ಅವರು
ದೋಣಿ ಜೆಟ್ಟಿ ಆದಷ್ಟು ಬೇಗ ನಿರ್ಮಾಣ ಗೊಂಡು ಸಾರ್ವಜನಿಕರಿಗೆ ಸೇವೆ ನೀಡಲು ಮುಕ್ತಗೊಳ್ಳಲಿ ಎಂದು ಶುಭಹಾರೈಸಿದರು. ಈ ಸಂದರ್ಭ ಸಜೀಪನಡು ಜುಮಾ ಮಸೀದಿಯ ಮುದರ್ರಿಸ್ ಇಸ್ಮಾಯಿಲ್ ಫೈಝಿ, ಜಮಾಅತ್ ಅಧ್ಯಕ್ಷ ಎಸ್. ಅಬ್ಬಾಸ್, ಉಪಾಧ್ಯಕ್ಷ ಎಸ್. ಅಬ್ದುಲ್ ರಝಾಕ್, ಪಂಚಾಯತ್ ಅಧ್ಯಕ್ಷೆ ಮೈಮುನಾ, ಮಾಜಿ ಅಧ್ಯಕ್ಷರಾದಂತಹ ಎಸ್.ಕೆ. ಮುಹಮ್ಮದ್, ಸೋಮನಾಥ ಭಂಡಾರಿ, ಎಸ್. ಇಬ್ರಾಹಿಂ, ಪಂ.ಸದಸ್ಯರಾದ ಎನ್.ಎನ್. ಅಬ್ದುಲ್ ರಹಿಮಾನ್, ಸತ್ತರ್ ಹಾಜಿ, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಹಾಸ್ ಕರ್ಕೇರಾ, ಕಾರ್ಯದರ್ಶಿ ಜಲೀಲ್ ಮೋಂಟುಗೋಳಿ, ನಾಸೀರ್ ಎಡಪದವು, ಸಜೀಪನಡು ವಲಯ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಬಶೀರ್ ಬೊಳಾಮೆ, ಉಪಾಧ್ಯಕ್ಷ ಎಸ್.ಎಂ. ಇಬ್ರಾಹಿಂ, ಉಪಸ್ಥಿತರಿದ್ದರು.
ಬಿಟಿಡಬ್ಲ್ಯು_ ಮೇ9_1
