ಬಂಟ್ವಾಳ : ಬ್ರಹ್ಮಶ್ರೀ ನಾರಾಯಣ ಗುರುಸೇವಾ ಸಮಿತಿ (ರಿ) ಸಜೀಪಮೂಡ ಇದರ ವತಿಯಿಂದ ಸಮಾಜದ ಬಡಹೆಣ್ಮಕ್ಕಳ ವಿವಾಹಕ್ಕೆ ಸಹಾಯಧನ

Bhramashree

ಕೊಡುವ ಕಾರ್ಯಕ್ರಮದಂತೆ ಮೆ.5ರಂದು ಸಜೀಪನಡು ಮುಳಿಂಜ ಮೋನಪ್ಪ ಪೂಜಾರಿಯವರ ಮಗಳ ವಿವಾಹಕ್ಕೆ ರೂ.5000/-ವನ್ನು ಸಂಘದ ಸದಸ್ಯರಾದ ರುಕ್ಮಯ ಪೂಜಾರಿ ಸುಭಾಷ್ ನಗರ ಇವರು ಮನೆಗೆ ಭೇಟಿ ನೀಡಿ ವಿತರಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಕೆ.ಸಂಜೀವ ಪೂಜಾರಿ ಕುಚ್ಚಿಗುಡ್ಡೆ, ಸದಸ್ಯರಾದ ವಾಸುದೇವ ಪೂಜಾರಿ ಪೆರ್ವ, ಮುತ್ತಪ್ಪ ಪೂಜಾರಿ ಕೊಲ್ಯ, ಯಶವಂತ ದೇರಾಜೆ, ರಮೇಶ್ ಅನ್ನಪ್ಪಾಡಿ, ಲೋಕೇಶ್ ಪೂಜಾರಿ ಸುಭಾಷ್ ನಗರ, ಪುಷ್ಪಾವತಿ ಕೊಲ್ಯ, ಪ್ರವೀಣ್ ಸುಭಾಷ್ನಗರ, ಅಶೋಕ್ ಸುಭಾಷ್ನಗರ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *