ಶ್ರೀ ಆದಿಶಕ್ತಿ ಚಾಮುಂಡೇಶ್ವರೀ ದೇವಸ್ಥಾನದ ಭಜನಾ ಮಂಗಲೋತ್ಸವ
ಸುದ್ದಿ9ಕೈಕಂಬ:ಬಡಗಬೆಳ್ಳೂರು ಶ್ರೀ ಆದಿಶಕ್ತಿ ಭಜನಾ ಮಂಡಳಿಯ ವತಿಯಿಂದ ಶ್ರೀ ಆದಿಶಕ್ತಿ ಸೇವಾ ಸಮಿತಿ, ಆದಿಶಕ್ತಿ ಮಹಿಳಾ ಮಂಡಳಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಕಾರದೊಂದಿಗೆ ಭಜನಾ ಮಂಗಲೋತ್ಸವ ಜ.19 ಭಾನುವಾರ ಜರಗಿತು.
ಭಜನಾ ಮಂಗಲೋತ್ಸವದ ಅಂಗವಾಗಿ ನಡೆದ ಧಾಮರ್ಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕಾವೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ರಘು ಎಲ್.ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮುಂಬೈ ಭಾರತ್ ಕೋ ಅಪರೇಟಿವ್ ಬ್ಯಾಂಕಿನ ನಿದರ್ೆಶಕ ಗಂಗಾಧರ ಪೂಜಾರಿ ಕೊಪ್ಪಲ, ತಾ.ಪಂ. ಸದಸ್ಯೆ ಗುಣವತಿ ನಾಗೇಶ್, ನಿವೃತ್ತ ಶಿಕ್ಷಕ ಗಂಗಾಧರ ರೈ, ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನದ ಕ್ಷೇತ್ರಾಧಿಕಾರಿ ಸರೋಜಿನಿ ಬಿ.ಕೆ, ಶ್ರೀ ಆದಿಶಕ್ತಿ ಸೇವಾ ಸಮಿತಿಯ ಅಧ್ಯಕ್ಷ ಯೋಗೀಶ್ ಸೂರ್ಲ, ಶ್ರೀ ಆದಿಶಕ್ತಿ ಭಜನಾ ಮಂಡಳಿಯ ಅಧ್ಯಕ್ಷ ತಿರುಮಲೇಶ್ ಕುಲಾಲ್ ಉಪಸ್ಥಿತರಿದ್ದರು.
ಉಪನ್ಯಾಸಕರಾಗಿ ವೇಣೂರಿನ ಸಾಮಾಜಿಕ ಕಾರ್ಯಕರ್ತ ಉಮೇಶ್ ಎನ್. ಭಾಗವಹಿಸಿದ್ದರು.
ಯಶವಂತ ಸ್ವಾಗತಿಸಿ, ನಯನಾ ಮತ್ತು ದಿನೇಶ್ ಕಾರ್ಯಕ್ರಮ ನಿರ್ವಹಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಊರಿನ ಮಹಿಳಾ ಕಲಾವಿದರಿಂದ ದೇವದಾಸ್ ಅಕರ್ುಳ ಅವರ ನಿದರ್ೆಶನದಲ್ಲಿ ಶ್ರೀ ದೇವಿ ಕೌಶಿಕೆ ಎಂಬ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.
