ಮೂಡುಬಿದಿರೆ: ಪೇಟೆಯ ಮುಖ್ಯರಸ್ತೆಯಲ್ಲಿರುವ ಅಂಚೆಕಚೇರಿ ಎದುರಿನಲ್ಲಿ ಗುರುವಾರ ಮಧ್ಯಾಹ್ನದ ವೇಳೆ ನಡೆದ ರಸ್ತೆ ಅಪಘಾತದಲ್ಲಿ ನಿವೃತ್ತ ಶಿಕ್ಷಕ ಮೃತಪಟ್ಟಿದ್ದಾರೆ.
17mood accident
ಮಂಗಳೂರು ಕಡೆಯಿಂದ ಕಾರ್ಕಳಕ್ಕೆ ಸಿಮೆಂಟ್ ತುಂಬಿದ ಗೋಣಿಗಳನ್ನು ಸಾಗಣೆ ಮಾಡುತ್ತಿದ್ದ ಲಾರಿ- ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ನಿವೃತ್ತ ಚಂದ್ರಶೇಖರ ಶೆಟ್ಟಿ(80) ರಸ್ತೆಗೆ ಬಿದ್ದಾಗ ಲಾರಿಯ ಚಕ್ರ ಅವರ ಎಡಕಾಲಿನ ಮೇಲೆ ಹರಿದು ಗಂಭೀರ ಗಾಯಗೊಂಡಿದ್ದರು. ತಕ್ಷಣ ಮೂಡುಬಿದಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರೆನ್ನಲಾಗಿದೆ. ಮೂಡುಬಿದರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಮೂಲತ: ಬೈಲೂರು ಸಮೀಪದ ನಿಂಜೂರು ಪಡುಮನೆಯವರಾಗಿದ್ದು ಅಲ್ಲಿನ ಕೊಡಮಣಿತ್ತಾಯ ದೈವಸ್ಥಾನದ ಆಡಳಿತ ಮೋಕ್ತೇಸರಾಗಿ ಹತ್ತು ವರ್ಷಗಳಿಂದ ಸೇವೆ ಸಲ್ಲಿಸಿದ್ದರು. ನಿಂಜೂರಿನ ಕಂಬಳ ಸಮಿತಿಯ ಪ್ರಮುಖರಾಗಿಯೂ ಗುರುತಿಸಿಕೊಂಡಿದ್ದರು. ಮೂಡುಬಿದಿರೆಯ ಮಾಪರ್ಾಡಿ ಗ್ರಾಮದ ಸಮಗಾರ ಗುಂಡಿ ಬಳಿಯಲ್ಲಿ ವಾಸವಾಗಿದ್ದ ಅವರು ಜೈನ ಪ್ರೌಢಶಾಲೆಯಲ್ಲಿ ಸಮಾಜಶಾಸ್ತ್ರ ಮತ್ತು ಇಂಗ್ಲೀಷ್ ವಿಷಯದ ಪದವೀಧರ ಸಹ ಶಿಕ್ಷಕಕರಾಗಿ ಸುಮಾರು 26 ಸೇವೆ ಸಲ್ಲಿಸುವ ಸಂದರ್ಭ ಎನ್.ಸಿ.ಸಿ ನೇವಿಯಲ್ಲಿ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ನಿವೃತ್ತಿ ಬಳಿಕ ಎಲ್ಲೈಸಿ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದರು.

By suddi9

Leave a Reply

Your email address will not be published. Required fields are marked *