ಮಂಗಳೂರು: ಇಲ್ಲಿನ ಮೂಲ್ಕಿ ಬಳಿಯ ಹಳೆಯಂಗಡಿಯಲ್ಲಿನ ರಾಷ್ಟ್ರೀಯ ಹೆದ್ದಾರಿ 66ರ ಹಳೆಯಂಗಡಿ ಬಳಿ ಸುರತ್ಕಲ್ನತ್ತ ಸಂಚರಿಸುತ್ತಿದ್ದ ಮದುವೆ ದಿಬ್ಬಣದ ಖಾಸಗಿ ಟೂರಿಸ್ಟ್ ಮಿನಿಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ವಿಭಾಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿ ವಿಭಾಜಕದ ಮೇಲೆಯೇ ಮಗುಚಿ ಬಿದ್ದ ಘಟನೆ ಗುರುವಾರ ನಡೆದಿದೆ.

ಹಳೆಯಂಗಡಿ: ಮಗುಚಿ ಬಿದ್ದ ಮಿನಿಬಸ್8mlk4
ಮೂಲ್ಕಿ ಬಳಿಯ ಬಳ್ಕುಂಜೆಯಿಂದ ಹೊರಟ ಮದುವೆ ದಿಬ್ಬಣದ ಬಸ್ಸು ಮೂಲ್ಕಿಯ ಬಪ್ಪನಾಡು ಶ್ರೀ ದುಗರ್ಾಪರಮೇಶ್ವರೀ ದೇವಸ್ಥಾನದಲ್ಲಿ ಮದುವೆ ಮುಗಿಸಿ ಸುರತ್ಕಲ್ನಲ್ಲಿ ನಡೆಯಲಿರುವ ಔತಣ ಕೂಟಕ್ಕೆ ಹೋಗುತ್ತಿದ್ದಾಗ ಬಸ್ಸಿನ ಚಾಲಕ ಎದುರಿನಿಂದ ಬರುತ್ತಿದ್ದ ಕಾರನ್ನು ತಪ್ಪಿಸುವ ಪ್ರಯತ್ನದಲ್ಲಿ ಕಾರಿಗೆ ಡಿಕ್ಕಿ ಹೊಡೆದು ಮಗುಚಿ ಬಿದ್ದಿದೆ ಎಂದು ತಿಳಿದು ಬಂದಿದೆ.
ಮಿನಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಬಳ್ಕುಂಜೆ ನಿವಾಸಿಗಳಾದ ಪುಷ್ಪ ಶೆಟ್ಟಿ ಹಾಗೂ ಸುಕಾಮತಿ ಶೆಟ್ಟಿ ಗಂಭೀರ ಗಾಯವಾಗಿ ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಅಪಘಾತದಲ್ಲಿ ಸುಮಾರು 25 ಮಂದಿಗೆ ಸಣ್ಣ ಪುಟ್ಟ ಗಾಯವಾಗಿದ್ದು ಅವರು ಪ್ರಾಥಮಿಕ ಚಿಕಿತ್ಸೆ ಪಡೆದಿದ್ದಾರೆ ಎಂದು ಮೂಲ್ಕಿ ಪೊಲೀಸರು ತಿಳಿಸಿದ್ದಾರೆ.
ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

By suddi9

Leave a Reply

Your email address will not be published. Required fields are marked *