ಧರ್ಮಸ್ಥಳ: ಧರ್ಮಸ್ಥಳದಲ್ಲಿ ನಡೆದ ಶ್ರೀ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವ ವೈಭವ ಗುರುವಾರ ರಾತ್ರಿ ಧರ್ಮಸ್ಥಳದಲ್ಲಿ ಪುಣ್ಯ ಡ್ಯಾನ್ಸ್ ಕಂಪೆನಿ ಬೆಂಗಳೂರು ಇವರಿಂದ ಹರ ಮತ್ತು ಜೈರಾಮ್ ಎಂಬ ನೃತ್ಯ ರೂಪಕ ಜರುಗಿತು. ಬಳಿಕ ಶ್ರೀ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವವನ್ನು ನಾಡಿನೆಲ್ಲೆಡೆಯಿಂದ ಬಂದ ಭಕ್ತಾದಿಗಳು ವೀಕ್ಷಿಸಿ ಧನ್ಯತೆಯನ್ನು ಪಡೆದರು.






