ವಾಮಂಜೂರು: ಚೈಲ್ಡ್ಫಂಡ್ ಇಂಟರ್ನ್ಯಾಷನಲ್ ಯು.ಎಸ್. ಎ., ಮಂಗಳಜ್ಯೋತಿ ಸಮಗ್ರ ಶಾಲೆ ವಾಮಂಜೂರು, ಇದರ ಆಶ್ರಯದಲ್ಲಿ ವಿಶ್ವ ಅಂಗವಿಕಲರ ದಿನಾಚರಣೆಯನ್ನು ಡಿ.12 ರಂದು ಮಂಗಳವಾರ ಮಂಗಳ ಜ್ಯೋತಿ ಸಮಗ್ರ ಶಾಲೆಯ ಪಾರ್ವತಿ ಬಾಬು ಶೆಟ್ಟಿ ಸಭಾಂಗಣದಲ್ಲಿ ಆಚರಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾದ ನಿವೃತ ಪ್ರಾಂಶುಪಾಲರಾದ ಶ್ರೀಯುತ ನೇಮಿರಾಜ್ ಬಳ್ಳಾಲ್ ಇವರು ಮಾತನಾಡುತ್ತಾ ಅಂಗವಿಕಲ ದಿನಾಚರಣೆಯಂದು ಮಾತ್ರ ಅವರನ್ನು ನೆನೆಯದೆ ಉಳಿದ ದಿನಗಳಲ್ಲೂ ಅವರಿಗೆ ಪ್ರಾಮುಖ್ಯತೆ ನೀಡಬೇಕು ಮತ್ತು ವಿಶೇಷ ಸಾಮಥ್ರ್ಯದ ಮಕ್ಕಳ ಪಾಲನೆ, ಪೋಷಣೆ, ಬೆಳವಣಿಗೆ, ಅಭಿವೃದ್ಧಿಯಲ್ಲಿ ಹೆತ್ತವರು ಮತ್ತು ಶಿಕ್ಷಕರು ಏಕರೂಪದ ಪಾತ್ರವನ್ನು ನಿರ್ವಹಿಸಬೇಕು. ಸರಕಾರದಿಂದ ವಿಶೇಷ ಸಾಮಥ್ರ್ಯದ ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಸಹಾಯವು ದೊರೆಯಬೇಕು. ವಿಶೇಷ ಸಾಮಥ್ರ್ಯದ ಮಕ್ಕಳಿಗೆ ಇತರ ಮಕ್ಕಳಂತೆ ಎಲ್ಲಾ ಚಟುವಟುಕೆಗಳಲ್ಲಿ ಭಾಗವಹಿಸಿ ತಮ್ಮಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಪ್ರಕಟಿಸಲು ಅವಕಾಶ ನೀಡಬೇಕೆಂದು ತಿಳಿಸಿದರು.

6

1 (1)

4

3

5

2 (1)

ವಿಶ್ವ ಅಂಗವಿಕಲರ ದಿನಾಚರಣೆಯ ಪ್ರಯುಕ್ತ ವಿಶೇಷ ಸಾಮಥ್ರ್ಯದ ಮಕ್ಕಳಿಗೆ ಹಮ್ಮಿಕೊಂಡಿದ್ದ ವಿವಿಧ ಸ್ಫಧರ್ೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಜಾನಪದ ನೃತ್ಯ ಸ್ಪಧರ್ೆಯಲ್ಲಿ ಭಾಗವಹಿಸಿದ ಮಕ್ಕಳನ್ನು ಅಭಿನಂದಿಸಲಾಯಿತು.

ಚೈಲ್ಡ್ಫಂಡ್ ಇಂಟರ್ನ್ಯಾಷನಲ್ ಯು.ಎಸ್. ಎ., ಮಂಗಳಜ್ಯೋತಿ ಸಮಗ್ರ ಶಾಲೆ ವಾಮಂಜೂರು ಇದರ ಯೋಜನಾಧಿಕಾರಿಯಾದ ಶ್ರೀ ಪುನೀತ್ ಡಿ. ಶೆಟ್ಟಿ ಇವರು ಮಾತನಾಡುತ್ತಾ, ಸಮಾಜದಲ್ಲಿ ಆನೇಕ ವಿಧದ ಮನುಷ್ಯರಿರುತ್ತಾರೆ. ಸಾಮಾನ್ಯ ವ್ಯಕ್ತಿಗಳಿಗಿಂತಲೂ ವಿಶೇಷ ಸಾಮಥ್ರ್ಯದವರು ಹೆಚ್ಚು ಸಾಮಥ್ರ್ಯವನ್ನು ಹೊಂದಿರುತ್ತಾರೆ.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್. ಡಿ. ಎಂ. ಮಂಗಳ ಜ್ಯೋತಿ ಸಮಗ್ರ ಶಾಲೆಯ ಆಡಳಿತಾಧಿಕಾರಿಗಳಾದ ಶ್ರೀಯುತ ಗಣೇಶ್ ಭಟ್ ಶುಭ ಹಾರೈಸಿದರು

ಈ ಕಾರ್ಯಕ್ರಮದಲ್ಲಿ, ದಾನಿಗಳಾದ ಶ್ರೀ ಪ್ರಕಾಶ್ ಮತ್ತು ಶ್ರೀಮತಿ ಚಂದ್ರಕಲ ಬೆಂಗಳೂರು, ಮಂಗಳ ಜ್ಯೋತಿ ಸಮಗ್ರ ಶಾಲೆಯ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಮಾರ್ಯೇಟ್ ಮಸ್ಕರೇನಸ್ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ವಾಕ್ ಶ್ರವಣ ತಜ್ಞರಾದ ಶ್ರೀ ಗುರುಪ್ರಸಾದ್ ಸ್ವಾಗತಿಸಿದರು. ಕುಮಾರಿ ಜಯಶ್ರೀ ವಂದಿಸಿ, ಶ್ರೀಮತಿ ರಮ್ಯ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಗೀತಾ ಸಹಕರಿಸಿದರು.

By suddi9

Leave a Reply

Your email address will not be published. Required fields are marked *