ಕೈಕಂಬ: ರಾಷ್ಟ್ರೀಯ ಹೆದ್ದಾರಿಯಲ್ಲಿ ಹರಿದು ಹೋಗುತ್ತಿರುವ ಕೊಳಚೆ ನೀರಿನ ಹರಿವಿಗೆ ತಾತ್ಕಾಲಿಕ ಮುಕ್ತಿ ಸಿಕ್ಕಿದೆ. ಈ ಹಿಂದೆ ಚರಂಡಿಯಿಂದ ರಾಷ್ಟ್ರೀಯ ಹೆದ್ದಾರಿಯಡೆಗೆ ಉಕ್ಕಿ ಹರಿಯುತ್ತಿದ್ದ ಕೊಳಚೆ ನೀರನ್ನು ನಿಯಂತ್ರಿಸುವ ಸಲುವಾಗಿ ಚರಂಡಿಯ ಚಪ್ಪಡಿಯನ್ನು ಗ್ರಾಮ ಪಂಚಾಯತ್ ನೇತೃತ್ವದಲ್ಲಿ ತೆಗೆದು ಹಾಕಾಲಾಗಿತ್ತು ಕೆಲವು ತಿಂಗಳ ಹಿಂದೆ ಈ ನಡುವೆ ಕೊಳಚೆಯ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಿತ್ತು ಸಾರ್ವಜನಿಕರಿಗೆ ಅಸ್ಯಯವಾಗಿ ಕಿರಿಕಿರಿ ಉಂಟುಮಾಡುತ್ತಿತ್ತು .

ಪ್ರಸ್ತುತ ಗಂಜಿಮಠ ಗ್ರಾಮ ಪಂಚಾಯತ್ ಸಭೆಯಲ್ಲಿ ಚರಂಡಿ ದುರಸ್ಥೆಯ ಪ್ರಸ್ತಾಪಕ್ಕೆ ಮನ್ನಣೆ ದೊರೆಯದಿದ್ದ ಹಿನ್ನೆಲೆಯಲ್ಲಿ ಗಂಜಿಮಠ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಝಾಕೀರ್ ಅವರು ಖಾಸಾಗಿಯಾಗಿ ಚರಂಡಿಯ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಸಲುವಾಗಿ ಮುಚ್ಚಳ ಹಾಕಿಸಲು ಮುಂದಾಗಿದ್ದಾರೆ.
ಗ್ರಾಮ ಪಂಚಾಯತ್ ಸಭೆಯಲ್ಲಿ ಈ ಬಗ್ಗೆ ಉಪಾಧ್ಯಕ್ಷರ ಪ್ರಸ್ತಾವನೆಗೆ ಪ್ರತಿಯಾಗಿ ಚರಂಡಿ ಪಕ್ಕದ ಖಾಸಾಗಿ ಕಟ್ಟಡ ಮಾಲಿಕರು ಚರಂಡಿ ದುರಸ್ಥಿಗೆ ಖರ್ಚಾಗುವ ಎರಡು ಲಕ್ಷ ರೂಗಳ ಖರ್ಚನ್ನು ವರಿಸಬೇಕೆಂದು ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಗ್ರಾಂ.ಪಂ. ಉಪಾಧ್ಯಕ್ಷ ಝಾಕಿರ್ ಅವರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಅವರುಗಳ ಗಮನಕ್ಕೆ ತಂದರು ಪ್ರಯೋಜನವಾಗಿಲ್ಲದ ಕಾರಣ ಪಂಚಾಯತಿನ ಸಹಕಾರವಿಲ್ಲದೆ ಉಪಾಧ್ಯಕ್ಷ ಝಾಕೀರ್ ಅವರು ತಾತ್ಕಾಲಿಕ ತೆರೆದ ಚರಂಡಿಯ ಕೊಳಚೆ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಒದಗಿಸಿದ್ದಾರೆ.
ಈ ಕಾರ್ಯಕ್ಕೆ ಖಾಸಾಗಿಯವರ ಸಹಕಾರವು ದೊರೆತಿದೆ ಒಟ್ಟಿನಲ್ಲಿ ಸಾರ್ವಜನಿಕ ಸಮಸ್ಯೆಯೊಂದಕ್ಕೆ ಯಾವುದೇ ರೀತಿಯಲ್ಲಿ ಸ್ಪಂದಿಸದೇ ಪಂಚಾಯತ್ ಆಡಳಿತ ದಿವ್ಯ ನಿರ್ಲಕ್ಷ ತೋರಿರುವುದನ್ನು ಸಾರ್ವಜನಿಕರು ಗಂಭೀರವಾಗಿ ಪರಿಗಣಿಸಿದ್ದಾರೆ.

