ಮುಂಬಯಿ, ಡಿ.08: ಅಖಿಲ ಕರ್ನಾಟಕ ಜೈನ ಸಂಘ ಮುಂಬಯಿ ಇದರ ಯುವ ವಿಭಾಗ ಹಾಗೂ ಮಹಿಳಾ ವಿಭಾಗವು ಜಂಟಿಯಾಗಿ ಕಳೆದ ಭಾನುವಾರ ಏಕದಿನದ ವಾಷರ್ಿಕ ಕ್ರೀಡಾಕೂಟವನ್ನು ಥಾಣೆ ಅಲ್ಲಿನ ಅರ್ಬನ್ ಸ್ಪೋಟರ್್ಸ ಕ್ಲಬ್ನಲ್ಲಿ ನೆರವೇರಿಸಿತ್ತು.

Akhila Jaina Sangha Mumbai-2

Akhila Jaina Sangha Mumbai-3

ಸಂಘದ ಅಧ್ಯಕ್ಷ ಬಿ. ಮುನಿರಾಜ್ ಅಜಿಲ ಅವರು ಸಂಘದ ಪದಾಧಿಕಾರಿಗಳನ್ನೊಳಗೊಂಡು ದೀಪ ಪ್ರಜ್ವಲನೆಗೈದು ಬಳಿಕ ಕ್ರೀಡಾಜ್ಯೋತಿ ಬೆಳಗಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಶ್ರವಕ ಶ್ರವಕಿಯರ ಣಮೋಕರ ಮಂತ್ರ ಹಾಗೂ ಪ್ರಾರ್ಥನೆಯೊಂದಿಗೆ ಕ್ರೀಡೋತ್ಸವ ಆರಂಭಗೊಂಡಿದ್ದು, ಬಹು ಸಂಖ್ಯೆಯಲ್ಲಿ ಸಮಾಜ ಬಾಂಧವರು ಕ್ರೀಡಾಸ್ಪಧರ್ೆಯಲ್ಲಿ ಪಾಲ್ಗೊಂಡು ಕ್ರೀಡಾಕೂಟಕ್ಕೆ ಕಳೆಯನ್ನೀಡಿದರು.

Akhila Jaina Sangha Mumbai-B2

 

Akhila Jaina Sangha Mumbai-6

ಸಂಘದ ಉಪಾಧ್ಯಕ್ಷ ಪ್ರಭಾಕರ್ ಹೆಗ್ಡೆ, ಗೌರವ ಕಾರ್ಯದಶರ್ಿ ಪವನಂಜಯ ಬಲ್ಲಾಳ್, ಜತೆ ಕಾರ್ಯದಶರ್ಿಗಳಾದ ರಘುವೀರ್ ಹೆಗ್ಡೆ ಹಾಗೂ ಮನೀಶ್ ಹೆಗ್ಡೆ, ಖಜಾಂಚಿ ಅನಂತ್ರಾಜ್ ಜೈನ್ , ಜತೆ ಖಜಾಂಚಿ ಸಂಪತ್ ಜೈನ್ ಮತ್ತ್ತರ ಪದಾಧಿಕಾರಿಗಳು ಮಹಿಳಾ ವಿಭಾಗದ ಅಧ್ಯಕ್ಷೆ ಕವಿತ ಜೈನ್, ಉಪಾಧ್ಯಕ್ಷೆ ಶಾಂತಲಾ ಹೆಗ್ಡೆ , ಕಾರ್ಯದಶರ್ಿ ಜ್ಯೋತಿ ಜೈನ್, ಜತೆ ಕಾರ್ಯದಶರ್ಿ ಸುಪ್ರಿಯಾ ಹೆಗ್ಡೆ ಅವರಿಗೆ ಕ್ರೀಡಾ ಜ್ಯೋತಿಯನ್ನು ಹಸ್ತಾಂತರಿಸಿದರು. ರಜಕ ಸಂಘದ ಅಧ್ಯಕ್ಷ ಶ್ರೀ ಸತೀಶ್ ಸಾಲ್ಯಾನ್ ಅವರು ಪ್ರಧಾನ ಅಭ್ಯಾಗತರಾಗಿ ಉಪಸ್ಥಿತರಿದ್ದು, ಶುಭಾರೈಸಿದರು.

Akhila Jaina Sangha Mumbai-7

Akhila Jaina Sangha Mumbai-A1

Akhila Jaina Sangha Mumbai-A2

ಅಧ್ಯಕ್ಷ ಮುನಿರಾಜ ಅಜಿಲ ಅವರು ಮಾತನಾಡಿ ಸಂಘದ ಸದಸ್ಯರು ಮತ್ತು ಸಮಾಜ ಬಾಂಧವರು ಎಲ್ಲಾ ಕ್ಷೇತ್ರಗಳಲ್ಲಿ ತಮಗೆ ಒದಗುವ ಸರ್ವ ಅವಕಾಶವನ್ನು ಸದುಪಯೋಗ ಪಡೆಯಬೇಕು. ಅಂತೆಯೇ ಕ್ರೀಡಾ ವಿಭಾಗದಲ್ಲೂ ತಮ್ಮ ಪ್ರತಿಭೆಯನ್ನು ಪ್ರದಶರ್ಿಸಿ ಉತ್ತಮ ಕ್ರೀಡಾಪಟುಗಳಾಗಿ ಮೆರೆಯಬೇಕು. ಆ ಮೂಲಕ ಜೈನ ಸಮಾಜಕ್ಕೆ ಕೀತರ್ಿ ತಂದು ತಮ್ಮ ಶ್ರೇಯಸ್ಸನ್ನು ವಿಶ್ವಕ್ಕೆ ಪಸರಿಸಬೇಕು ಎಂದು ಕಿವಿಮಾತು ಗಳನ್ನಾಡಿದರು.

Akhila Jaina Sangha Mumbai-B1

Akhila Jaina Sangha Mumbai-B3

ಯುವ ವಿಭಾಗಧ್ಯಕ್ಷ ಭರತ್ರಾಜ್ ಜೈನ್, ಕಾರ್ಯದಶರ್ಿ ಸೂರಜ್ ಜೈನ್, ಉಪಾಧ್ಯಕ್ಷೆ ಪವಿತ್ರ ಜೈನ್, ಜತೆ ಕಾರ್ಯದಶರ್ಿ ಸೌಮ್ಯ ಜೈನ್ ಅವರು ಮಹಿಳಾ ವಿಭಾಗದಿಂದ ಹಸ್ತಾಂತರಿಸಲ್ಪಟ್ಟ ಕ್ರೀಡಜ್ಯೋತಿಯೊಂದಿಗೆ ಸಮಾಜದ ಪುಟಾಣಿಗಳೊಂದಿಗೆ ಪಥಸಂಚಲನೆ ನಡೆಸಿದರು. ತ್ರೋಬಾಲ್, ಕ್ರಿಕೆಟ್, ಹಗ್ಗ ಜಗ್ಗಾಟ, ಗೋಣಿ ಓಟ, ಫುಟ್ಬಾಲ್, ಪುಟಾಣಿ ಓಟ ಇತ್ಯಾದಿ ಸ್ಪಧರ್ೆಗಳೊಂದಿಗೆ ಕ್ರೀಡಾಕೂಟವು ಹಷರ್ೊಲ್ಲಾಸದಿಂದ ದಿನವಿಡೀ ನಡೆಯಿತು.
ಈ ಸಂಧರ್ಭದಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಚೆನ್ನೈ ನೆರೆ ಸಂತ್ರಸ್ತರ ಪುನ:ರ್ ಚೇತರಿಕೆಗಾಗಿ ವಿಶೇಷ ಪ್ರಾರ್ಥನೆ ನಡೆಸಲಾಯಿತು. ಹಾಗೂ ಬಾಗಲಕೋಟೆಯ ಹಲ್ಲಂಗಾಳಿಯಲ್ಲಿ ಜಿನಮಂದಿರವನ್ನು ಸ್ಥಳೀಯ ಪ್ರಶಾಸನವು ಕೆಡವಿದ್ದನ್ನು ಸಂಘದ ವತಿಯಿಂದ ವಿರೋಧಿಸಿ ಕೂಡಲೇ ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಶೀಘ್ರವೇ ಜಿನಮಂದಿರದ ಮರುಸ್ಥಾಪನೆ ನಡೆಸಿ ಆ ಜಾಗವನ್ನು ಜೈನ ಸಮಾಜಕ್ಕೆ ಹಸ್ತಾಂತರಿಸುವಲ್ಲಿ ಪಾತ್ರವಹಿಸಿದ ಕನರ್ಾಟಕ ಸರಕಾರಕ್ಕೆ ಸಂಘದ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.

ಬಹುಮಾನ ವಿತರಣೆಯೊಂದಿಗೆ ಸಮಾಪ್ತಿಗೊಂಡ ಕ್ರೀಡಾಕೂಟವನ್ನು ರಘುವೀರ್ ಹೆಗ್ಡೆ ನಿರೂಪಿಸಿದರು. ಭರತ್ರಾಜ್ ಜೈನ್ ಧನ್ಯವಾದ ಸಮಪರ್ಿಸಿದರು.

 

By suddi9

Leave a Reply

Your email address will not be published. Required fields are marked *