ಬಂಟ್ವಾಳ: ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢಶಾಲೆ ಸ್ಥಾಪನೆಯಾಗಿ 50 ವರ್ಷಗಳು ಪೂರ್ತಿಯಾದ ಸವಿನೆನಪಿಗಾಗಿ ಡಿ. 5ರಂದು ಸ್ವರ್ಣ ಮಹೋತ್ಸವ ಆಚರಣೆಗೆ ಸಜ್ಜಾಗಿದೆ. ಹಳೇ ವಿದ್ಯಾರ್ಥಿಗಳು ಮತ್ತು ಹಾಲಿ ವಿದ್ಯಾರ್ಥಿಗಳ ಕೂಡುವಿಕೆಯಲ್ಲಿ, ನಿವೃತ್ತ ಅಧ್ಯಾಪಕರು, ಹಾಲಿ ಶಿಕ್ಷಕರ ಕೂಡುವಿಕೆಯಲ್ಲಿ 50ನೇ ವರ್ಷಾ ಚರಣೆ ಸಂಭ್ರಮ ನಡೆಯಲಿದೆ.

ಶಾಲೆಯು 1964-65 ಶೈಕ್ಷಣಿಕ ವರ್ಷದಲ್ಲಿ ಡಾ| ಟಿ.ಎಂ.ಎ. ಪೈ ದಿವ್ಯ ಹಸ್ತಗಳಿಂದ ಶಾಲೆಯು ಉದ್ಘಾಟಿಸಲ್ಪಟ್ಟಿತ್ತು, ಸ್ಥಾಪನಾ ವರ್ಷದಿಂದ ಸಂಚಾಲಕರಾಗಿ ದಿ| ಯನ್. ಕೇಶವ ಕುಡ್ವ ನೇತ್ವದಲ್ಲಿ ಅಭಿವೃದ್ದಿ ಸಾಸುತ್ತಾ ಮುಂದಿನ ದಿನಗಳಲ್ಲಿ ದಿ| ಪಿ.ಎನ್. ಭಂಡಾರ್ಕಾರ್, ದಿ| ಪಿ. ದೇವದಾಸ ಶೆಣೈ ಡಪ ಸಂಚಾಲಕತ್ವದಲ್ಲಿ ಶಾಲೆಯು ಸರ್ವಾಂಗೀಣ ಅಭಿವೃದ್ದಿ ಸಾದಿಸಿತ್ತು.
ಸ್ವರ್ಣ ಮಹೋತ್ಸವ ಅಂಗವಾಗಿ ಶಾಲಾ ಸಂಚಾಲಕ ಜನಾರ್ದನ ಭಟ್ ನೇತೃತ್ವದಲ್ಲಿ ಶನಿವಾರ ಬೆಳಿಗ್ಗೆ ಗಂಟೆ 9ರಿಂದ ಪೂರ್ವಭಾವಿಯಾಗಿ ಪಾಣೆಮಂಗಳೂರು ಶ್ರೀ ವೀರವಿಠಲ ದೇವಳದ ಬಳಿಯಿಂದ ವಿದ್ಯಾದೇಗುಲಕ್ಕೆ “ಋಣಮೋಚನಾ ನಡಿಗೆ ” ಎಂಬ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ. ನಂತರದ ಶಾಲಾ ಸಭಾಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಂಚಾಲಕರಿಂದ ಶಾಲಾಭಿವೃದ್ಧಿ ಬಗ್ಗೆ ಪ್ರಸ್ತಾವನೆ, ಹಿರಿಯ ವಿದ್ಯಾರ್ಥಿ ಗಳ ಸಲಹೆ ಸ್ವೀಕಾರ, ನಿವೃತ್ತ ಹಾಗೂ ಹಾಲಿ ಅಧ್ಯಾಪಕರಿಗೆ ಗೌರವ ನಡೆಯುವುದು.
ಶಾಲಾ ಶಿಕ್ಷಕೇತರ ಸಿಬ್ಬಂದಿಗಳಿಗೆ ಗೌರವ, ಸ್ಥಾಪನಾ ವರ್ಷದಿಂದ ಈವರೆಗಿನ ಪ್ರತೀ ಶೈಕ್ಷಣಿಕ ವರುಷದ ಎಸ್.ಎಲ್.ಸಿ.ಪರೀಕ್ಷೆಯಲ್ಲಿ ಸರ್ವ ಪ್ರಥಮ ಬಂದ ವಿದ್ಯಾರ್ಥಿಗಳಿಗೆ ಗೌರವ, ಹಿರಿಯ (ಹಳೆಯ)ವಿದ್ಯಾರ್ಥಿಗಳಿಗೆ ನಡೆಸಿದ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಕಾರ್ಯಕ್ರಮಗಳು ನಡೆಯಲಿದೆ. ಇದೆ ಈ ಸಂದರ್ಭ ಗೌರವ ಪಡೆದವರಿಂದ ಅನಿಸಿಕೆಗಳ ಪ್ರಸ್ತಾಪ ನಡೆಯುವುದು.
ಸಂಜೆ 5 ಗಂಟೆಯಿಂದ ನಡೆಯುವ ಸ್ವರ್ಣ ಮಹೋತ್ಸವದ ಸಭಾ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸುವರು.
ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್ ಮಣಿಪಾಲದ ಕುಲಸಚಿವ ಡಾ| ರಾಮದಾಸ ಪೈ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಉದ್ಯಮಿ,ಸಾಮಾಜಿಕ ಸೇವಾಕರ್ತ ಡಾ| ಪಿ. ದಯಾನಂದ ಪೈ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು.
ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಕ್ಯಾ| ಗಣೇಶ್ ಕಾರ್ಣಿಕ್, ತಾ.ಪಂ. ಅಧ್ಯಕ್ಷ ಯಶವಂತ ದೇರಾಜೆ, ಪುರಸಭಾ ಅಧ್ಯಕ್ಷೆ ವಸಂತಿ ಚಂದಪ್ಪ, ಸಾ.ಶಿ.ಇಲಾಖೆ ಜಿಲ್ಲಾ ಉಪ ನಿರ್ದೇಶಕ ವಾಲ್ಟರ್ ಎಚ್. ಡಿಮೆಲ್ಲೊ, ಕ್ಷೇತ್ರ ಶಿಕ್ಷಣಾಕಾರಿ ಶೇಷಶಯನ ಕಾರಿಂಜ, ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್ ಮಣಿಪಾಲದ ಅಧ್ಯಕ್ಷರು/ಕಾರ್ಯದರ್ಶಿ ಡಾ| ಎಚ್.ಎಸ್. ಬಳ್ಳಾಲ್, ಆಡಳಿತಾಕಾರಿ ಡಾ| ಎಚ್. ಶಾಂತಾರಾಮ, ನರಿಕೊಂಬು ದಿ| ವೆಂಕಟರಾವ್ ಮನೆತನದ ಎನ್. ರಮೇಶ ಸೂರ್ಯನಾರಾಯಣ ರಾವ್, ಪಾಣೆಮಂಗಳೂರು ಎಸ್ವಿಎಸ್ ಹಿ.ಪ್ರಾ. ಶಾಲಾ ಸಂಚಾಲಕ ಪಿ.ವೆಂಕಟ್ರಾಯ ಶೆಣೈ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಇದರಲ್ಲಿ ಶಾಲಾ ಮಕ್ಕಳು, ಹಳೇ ವಿದ್ಯಾರ್ಥಿಗಳು, ಶಿಕ್ಷಕಶಿಕ್ಷಕಿಯರು, ನಾಡಿನ ಗಣ್ಯರು, ಪ್ರಮುಖರ ಪಾಲ್ಗೊಳ್ಳುವಿಕೆಯಲ್ಲಿ ನಡೆಯಲಿದೆ.
ಪ್ರಕೃತ ಶಾಲಾ ಸ್ಥಾಪನಾ ವರ್ಷದ ವಿದ್ಯಾರ್ಥಿಯೇ ಶಾಲಾ ಸಂಚಾಲಕರಾಗಿ ಶಾಲೆಯನ್ನು ಅಭಿವೃದ್ದಿಗೊಳಿಸುವ ನಿಟ್ಟಿನಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ದೊಡ್ಡ ಸಂಖ್ಯೆಯಲ್ಲಿ ಹಿರಿಯ ವಿದ್ಯಾರ್ಥಿಗಳು, ಪೋಷಕರು, ವಿದ್ಯಾಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಂಚಾಲಕರು ವಿನಂತಿಸಿದ್ದಾರೆ.
