ಮೂಡುಬಿದಿರೆ: ಮೂರುವರೆ ವರ್ಷದ ಹಿಂದೆ ಮರದಿಂದ ಬಿದ್ದು ಸ್ವಾದೀನ ಕಳೆದುಕೊಂಡಿರುವ ಯುವಕ ಹಾಗೂ ಆತನ ಕುಟುಂಬವು ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದು, ನೆರವಿಗಾಗಿ ಇದಿರು ನೋಡುತ್ತಿದೆ. ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಲಾಡಿ ಹಜಂಕಾಲಬೆಟ್ಟು 5 ಸೆಂಟ್ಸ್ ಕಾಲನಿ
ಸುಂದರ ಪರವ-ಗುಲಾಬಿ ದಂಪತಿ ಕುಟುಂಬ ಸಂಕಷ್ಟವನ್ನು ಅನುಭವಿಸುತ್ತಿದೆ. ದಂಪತಿಯ ಪುತ್ರ ಸುಕುಮಾರ್ ಮೂರು ವರ್ಷದ ಹಿಂದೆ, ಅಳಿಯೂರಿನಲ್ಲಿ ಮರದ ಗೆಲ್ಲು ಕಡಿಯುತ್ತಿದ್ದ ಸಂದರ್ಭ ಬಿದ್ದು, ಬೆನ್ನು ಹಾಗೂ ಕಾಲಿನ ಸ್ವಾಧೀನ ಕಳೆದುಕೊಂಡಿದ್ದರು.


ಗುಣಮುಖವಾಗಲು ಸುಕುಮಾರಿಗೆ 5 ಲಕ್ಷ ವೆಚ್ಚದ ಚಿಕಿತ್ಸೆ ಅನಿವಾರ್ಯತೆಯಿದೆ. ಮಗನ ಪರಿಸ್ಥತಿ ನೋಡಿದ ಸುಂದರ-ಗುಲಾಬಿ ದಂಪತಿ ಕೂಡ ಅನಾರೋಗ್ಯಪೀಡಿತರಾಗಿದ್ದಾರೆ. ಸುಕುಮಾರನ ಕಿರಿಯ ಸಹೋದರ ಸುಧಾಕರ 10ನೇ ತರಗತಿವರೆಗೆ ಕಲಿತಿದ್ದು, ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ.ಶೈಕ್ಷಣಿಕವಾಗಿ ಬಲಗೊಂಡು ಕುಟುಂಬ ನಿರ್ವಹಣೆಯ ಕನಸಲ್ಲಿದ 18ರ ಹರೆಯದ ಸುಧಾಕರ ದುಡಿಮೆಯಿಂದಲೇ ಸುಕುಮಾರನ ಆದಾಯವೇ ಈ ಕುಟುಂಬಕ್ಕೆ ಆಸರೆಯಾಗಿದೆ.ಸುಕುಮಾರನ ಅವರ ಚಿಕಿತ್ಸೆ, ಕುಟುಂಬವನ್ನು ಸಂಕಷ್ಟದಿಂದ ಪಾರು ಮಾಡಲು ದಾನಿಗಳ ನೆರವಿನ ಅಗತ್ಯವಿದೆ.- ಬ್ಯಾಂಕ್ ಖಾತೆ-
Name : SUDHAKAR
Bank Name :
Syndicate Bank
Branch : Moodbidri
A.C. No. : 01282200192712
IFSC Code : SYNB0000128
Mob : 9743726465, 8722959339
ವಿಳಾಸ : ಹಜಂಕಾಲಬೆಟ್ಟು, 5 ಸೆಂಟ್ಸ್ ಮನೆ, ಲಾಡಿ, ಮೂಡುಬಿದರೆ – 574227
