ಮೂಡುಬಿದಿರೆ: ಬಯಲು ಸೀಮೆಯಲ್ಲಿರುವ ಕೆರೆಗಳನ್ನು ಪುನಶ್ಚೇತನಗೊಳಿಸಿದರೆ ಬಯಲು ಸೀಮೆಗೆ ಯಥೇಚ್ಛ ನೀರು ಸಿಗುತ್ತದೆ. ಅದು ಬಿಟ್ಟು ಪಶ್ಚಿಮಘಟವನ್ನು ನಾಶ ಮಾಡಿ, ನದಿಮೂಲಕಕ್ಕೆ ಗಾಯ ಮಾಡುವ ಎತ್ತಿನಹೊಳೆ ಯೋಜನೆ ಮಾಡುವುದು ಯಾವ ಉದ್ದೇಶಕ್ಕಾಗಿ. ನೇತ್ರಾವತಿಯನ್ನು ಬರಿದುಗೊಳಿಸುವ ಈ ಯೋಜನೆಯನ್ನು ಸರ್ಕಾರ ಕೈಬಿಡಬೇಕು ಎಂದು ಪರಿಸರ ಹೋರಾಟಗಾರ ದಿನೇಶ್ ಹೊಳ್ಳ ಆಗ್ರಹಿಸಿದರು.

ಆಳ್ವಾಸ್ ನುಡಿಸಿರಿಯ ಕೊನೆಯ ದಿನ `ನೀರಿನ ಬಳಕೆ ಮತ್ತು ಹಂಚಿಕೆ’ ವಿಚಾರಗೋಷ್ಠಿಯಲ್ಲಿ ನೇತ್ರಾವತಿ ನದಿಯ ಬಗ್ಗೆ ಅವರು ಮಾತನಾಡಿದರು.
.
ಕಾಡಿನ ಆನೆಗಳು ನಾಡಿಗೆ: ಪಶ್ಚಿಮಘಟದ ಆನೆ ಕಾರಿಡಾರ್ನಲ್ಲಿ ಎತ್ತಿನಹೊಳೆ ಯೋಜನೆಯ ಕಾಮಗಾರಿ ನಡೆಯುವ ಸಂದರ್ಭ ಮನುಷ್ಯನ ಸಂಚಾರವನ್ನು ಆನೆಗಳು ಗಮನಿಸಿದರೆ ಕಾಡಿನಲ್ಲಿದ್ದ ಆನೆಗಳು ನಾಡಿಗೆ ಬರುವ ಸಂಭವವಿದೆ ಎಂದರು.
