ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಉತ್ತಮ ಶೈಕ್ಷಣಿಕ ವಾತಾವರಣ ಮುಖ್ಯ
ಬಜಪೆ :ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಉತ್ತಮ ಶೈಕ್ಷಣಿಕ ವಾತಾವರಣ ಬಹಳ ಮುಖ್ಯ. ಹಳ್ಳಿಯ ಮಕ್ಕಳು ಕೂಡಾ ಇಂದು ಉತ್ತಮ ಸಾಧನೆಗಳನ್ನು ಮಾಡುತ್ತಿರುವುದು ಗಮಿಸಬೇಕಾದ ಅಂಶ. ಅರ್ಥಿಕ ಸಂಕಷ್ಟೆಂಬುದು ಮಕ್ಕಳ ಕಲಿಕೆಯ ಅಥವಾ ವ್ಯಕ್ತಿತ್ವ ವಿಕಸನದ ಚಟುವಟಿಕೆಗಳಿಗೆ ತೊಡಕಾಬಾರದು. ಈ ನಿಟ್ಟಿನಲ್ಲಿ ಮಕ್ಕಳ ವಿಭಿನ್ನ ಪ್ರತಿಭೆಗಳನ್ನು ಗುರುತಿಸಿ ಅವಕಾಶಗಳನ್ನು ಕಲ್ಪಿಸುವಲ್ಲಿ ಪೋಷಕರು ಹಾಗೂ ಶಿಕ್ಷಕರು ಸಮಾನ ಪಾತ್ರವಹಿಸಬೇಕು. ಎಂದು ಬಜಪೆ ಪೋಲಿಸ್ ಇನ್ಸ್‍ಪೆಕ್ಟರ್ ಟಿ.ಡಿ.ನಾಗರಾಜ್ ಹೇಳಿದರು.
ಅವರು ಶುಕ್ರವಾರ ಬಜಪೆ ಬಂಟ್ಸ್ ಪಾಪ್ಯುಲರ್ ಆಂಗ್ಲಮಾಧ್ಯಮ ಪ್ರೌಢಶಾಲೆಯ 27ನೇ ವರ್ಷದ ವಾಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಪ್ರತಿಭಾನ್ವಿತ ವಿದ್ಯರ್ಥಿಗಳನ್ನು ಪುರಸ್ಕರಿಸಿ ಮಾತನಾಡಿದರು.
ಬಂಟ್ಸ್ ಪಾಪ್ಯುಲರ್ ಶಾಲಾ ಸಂಚಾಲಕ ಹಾಗೂ ಸ್ಥಾಪಕ ಕಾರ್ಯಾಧ್ಯಕ್ಷ ಜಗದೀಶ್.ಸಿ.ಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಿದರು.
ಇದೇ ಸಂದರ್ಭ ಶಾಲೆಯಲ್ಲಿ ದೈಹಿಕ ಶಿಕ್ವಣ ಶಿಕ್ಕಕರಾಗಿದ್ದು ಪದೋನ್ನತಿ ವರ್ಗಾವಣೆಯಾಗಿರುವ ಹರಿಪ್ರಸಾದ್ ಅಳ್ವ ಹಾಗೂ ಶಿಕ್ಷಕ ರಕ್ಷಕ ಸಂಘದ ಮಾಜಿಅಧ್ಯಕ್ಷೆ ಲೋಲಿತಾ ಗೌತಮ್ ಅವರನ್ನು ಸನ್ಮಾನಿಸಲಾಯಿತು.
ಕಳೆದ ಸಾಲಿನ ಎಸ್ಸೆಸ್ಸೆಲಿ ಪರೀಕ್ಷೆಯಲ್ಲಿ ಅತ್ಯುನ್ನತ ಫಲಿತಾಂಶ ದಾಖಲಿಸಿದ ಶ್ರಾವ್ಯ, ಅನಿತಾ, ದರ್ಶನ್ ಅವರಿಗೆ ಹಾಗೂ ಶೈಕ್ಷಣಿಕ, ಕ್ರೀಡೆ ಹಾಗೂ ಇತರ ಕ್ಷೇತ್ರಗಳ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. ಪಾಪ್ಯುಲರ್ ಜಗದೀಶ್ ಸಿ.ಶೆಟ್ಟಿ ಚಾಂಟೇಬಲ್ ಫೌಂಡೇಶನ್ ವತಿಯಿಂದ ಹಾಗೂ ನಾನಾ ಶೈಕ್ಷಕಣಿಕ ನಗದು ದತ್ತಿ ನಿ ಶೈಕ್ಷಣಿಕ ಪುರಸ್ಕಾರಗಳನ್ನು ಅರ್ಹ ವಿದ್ಯಾರ್ಥಿಗಳಿಗೆ ಪ್ರದಾನ ಮಾಡಲಾಯಿತು.
ಉದ್ಯಮಿ ದಿನೇಶ್ ಕುಮಾರ್, ಬಂಟ್ಸ್ ವೆಲೇರ್ ಟ್ರಸ್ಟ್‍ನ ಪದಾಕಾರಿಗಳಾದ ಗೋಪಿನಾಥ್ ಹೆಗ್ಡೆ, ರತ್ನಾಕರ ಶೆಟ್ಟಿ, ಕರುಣಾಕರ ಶೆಟ್ಟಿ, ರಾಮಚಂದ್ರ ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ, ಸಂದೀಪ್ ರೈ, ಶಾಲಾ ಸಲಹೆಗಾರ ಉಮೇಶ್ ರಾವ್ ಎಕ್ಕಾರು, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ರಾಮಚಂದ ಕಾವ ಶಾಲಾ ನಾಯಕಿ ದೀಕ್ಷಾ ಅಸ್ರಣ್ಣ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತಿದ್ದರು ಮುಖ್ಯ ಶಿಕ್ಷಕಿ ಶಹನಾ ಎಂ.ಫೆಹಲ್ಲವಿ ಸ್ವಾಗತಿಸಿದರು. ಗೋಪಿನಾಥ್ ಹೆಗ್ಡೆ ಪ್ರಸ್ತಾವಿಕ ಮಾತನಾಡಿದರು. ನಿರ್ಮಲಾ ಚಂದ್ರಶೇಖರ್ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭ ಶಾಲಾ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕ್ರತಿಕ ಕಾರ್ಯಕ್ರಮ ಜರಗಿತು.
