ಬಂಟ್ವಾಳ : ಶ್ರೀ ಲಕ್ಷ್ಮೀ ವೆಂಕಟರಮಣ ದೇವರ ಬ್ರಹ್ಮ ಕಲಶೋತ್ಸವದ ಪೂರ್ವಭಾವಿ ಜೀರ್ಣೋದ್ಧಾರ ಕಾಮಗಾರಿಗಳಿಗೆ ಬ್ರಹ್ಮಶ್ರೀ ನಿಲೇಶ್ವರ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ ಚಾಲನೆ ನೀಡಲಾಯಿತು. ನವೆಂಬರ್ 25ರ ಗೋಧೂಳಿ ಸಮಯದಲ್ಲಿ ಶ್ರೀ ಕ್ಷೇತ್ರದಲ್ಲಿ ಸುದರ್ಶನ ಹೋಮ , ವಾಸ್ತು ಹೋಮ , ದೋಷ ಪರಿಹಾರಾರ್ಥ ವಿಧಿಗಳು ಶಾಸ್ತ್ರೋಕ್ತವಾಗಿ ಜರಗಿದವು. ಮರುದಿನ ನವಗ್ರಹ ಹೋಮ, ಶ್ರೀ ಮೃತ್ಯುಂಜಯ ಹೋಮ , ಅನುಜ್ಞಾ ಕಲಶಾಧಿ ವಿಧಿ ಗಳು ಜರಗಿ ಶ್ರೀ ಗಣಪತಿ ದೇವರು ಮತ್ತು ನವಗ್ರಹರನ್ನು ಬಾಲಾಲಯದಲ್ಲಿ ಪ್ರತಿಷ್ಟಾಪಿಸಲಾಯಿತು. ಪವಿತ್ರ ಹೋರಿಯ ಮೂಲಕ ಕಟ್ಟಡದ ಮಾಡಿನ ಹಂಚನ್ನು ಬೀಳಿಸಿ ಕಾಮಗಾರಿಯನ್ನು ಶುಭಾರಂಭ ಗೊಳಿಸಲಾಯಿತು. ನಾಮಸ್ಮರಣೆ ಮತ್ತು ಅನ್ನದಾನ ಕಾರ್ಯಕ್ರಮಗಳು ನಡೆದವು. ಪೂಜ್ಯ ತಂತ್ರಿಗಳವರು ಯೋಜಿತ ಕಾಮಗಾರಿಗಳು ನಿರ್ಧಿಷ್ಟ ಅವಧಿಯೊಳಗೆ ಜರಗಿ ಬ್ರಹ್ಮಕಲಶಾದಿ ಕಾರ್ಯಕ್ರಮಗಳು ನಡೆದು ಶ್ರೀ ಕ್ಷೇತ್ರ ಅಭಿವೃದ್ದಿಯಾಗಲಿ ಆ ಮೂಲಕ ಎಲ್ಲರಿಗೂ ಶ್ರೀ ಕ್ಷೇತ್ರದ ದೇವರುಗಳು ಮಂಗಳವನ್ನುಂಟು ಮಾಡಲಿ ಎಂದು ಶುಭ ಹಾರೈಸಿದರು.

ಶ್ರೀ ಕ್ಷೇತ್ರದ ಅನುವಂಶಿಕ ಮನೆತನದ ಕಂಟಿಕ ಅನಂತ ಶೆಣೈ , ಸುಬ್ರಹ್ಮಣ್ಯ ಶೆಣೈ ಅನುವಂಶಿಕ ಮೊಕ್ತೇಸರ ಗೋಪಾಲ ಶೆಣೈ , ಆಡಳಿತ ಮೊಕ್ತೇಸರ ಕಲ್ಲೇಗ ಸಂಜೀವ ನಾಯಕ್, ಮೊಕ್ತೇಸರರುಗಳಾದ ಯಂ.ಯಂ.ಪ್ರಭು, ಬಾಲಕೃಷ್ಣ ನಾಯಕ್, ಸುರೇಂದ್ರ ನಾಯಕ್, ದಯಾನಂದ ಪ್ರಭು, ಪ್ರಭಾಕರ ನಾಯಕ್, ಸುಧಾಕರ ಶೆಣೈ, ರಾಮಗಣೇಶ್ ಪ್ರಭು, ಸತೀಶ್ ಶೆಣೈ, ಚಿದಾನಂದ ಪ್ರಭು, ರ ವೀಂದ್ರ ಪ್ರಭು, ಸುಜಾತಾ ಶೆಣೈ, ಪ್ರಭಾಕರ ಪ್ರಭು, ಹಾಗೂ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ರಾಜಾರಾಮ ಪ್ರಭು, ಉಪಾಧ್ಯಕ್ಷ ಯೋಗೀಶ್ ನಾಯಕ್ ಮತ್ತು ಸದಸ್ಯರುಗಳು ಹಾಜರಿದ್ದು ಕಾರ್ಯಕ್ರಮಗಳ ವ್ಯವಸ್ಥೆಯನ್ನು ನೋಡಿಕೊಂಡರು.ಅಧಿಕ ಸಂಖ್ಯೆಯಲ್ಲಿ ನೆರೆದ ಭಕ್ತಾಧಿಗಳು ಶ್ರೀ ತೀರ್ಥ ಪ್ರಸಾದ ಭೋಜನಾಧಿ ಗಳನ್ನು ಸ್ವೀಕರಿಸಿ ಕೃತಾರ್ಥರಾದರು.
ಶ್ರೀ ಕ್ಷೇತ್ರದ ಪಾರಂಪರಿಕ ವಿಧಿ ಗಳಲ್ಲಿ ವ್ಯತ್ಯಾಸ : ಬ್ರಹ್ಮಕಲಶ ಜರಗುವ ತನಕ ಬೆಳಿಗ್ಗೆ ಮತ್ತು ಮಧ್ಯಾಹ್ನದ ಪೂಜೆಗಳು ಪೂರ್ವಾಹ್ನ 9 ಗಂಟೆಯೊಳಗೆ ನಡೆಯಲಿದೆ. ಸಾಯಂಕಾಲ ಗಣಪತಿ ದೇವರಿಗೆ ಪೂಜೆ ಇರುವುದಿಲ್ಲ . ಶ್ರೀ ಸತ್ಯನಾರಾಯಣ ಪೂಜೆ ಹೊರತುಪಡಿಸಿ ಶ್ರೀ ಕ್ಷೇತ್ರದಲ್ಲಿ ಇತರ ಸೇವೆ ಹಾಗೂ ಪೂಜೆಗಳು ಬ್ರಹ್ಮಕಲಶದವರೆಗೆ ಇರುವುದಿಲ್ಲ.


