ಮೂಡುಬಿದರೆ: ಬೆಳುವಾಯಿ ಸವೇರಪುರ ಚರ್ಚ್ನ ಬಳಿಯ ನಿವಾಸಿ ವಲೇರಿಯನ್ ಡಿಸಿಲ್ವ (54 ವರ್ಷ) ಅಕ್ಟೋಬರ್ 8ರಂದು ಬೆಳಿಗ್ಗೆ ಮನೆಯಿಂದ ಹೊರ ಹೋದವರು ವಾಪಾಸು ಬರದೆ ನಾಪತ್ತೆಯಾಗಿದ್ದಾರೆ.

ಮನೆಯಲ್ಲಿ ಹೈನುಗಾರಿಕೆಯ ಕೆಲಸ ಮಾಡಿಕೊಂಡಿದ್ದ ಅವರು ಮೊಬೈಲನ್ನು ಮನೆಯಲ್ಲೆ ಬಿಟ್ಟು ಅದರ ಸಿಮ್ ತೆಗೆದುಕೊಂಡು ಹೋಗಿದ್ದರು. ಆ ನಂಬರ್ ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿದ್ದು, ಬಳಿಕ ಹುಡುಕಾಡಿದ್ದು ಅವರು ಪತ್ತೆಯಾಗದಿರುವುದರಿಂದ ಕಿರಣ್ ಫೆರ್ನಾಂಡಿಸ್ ಮೂಡುಬಿದರೆ ಪೋಲಿಸ್ರವರಿಗೆ ದೂರು ನೀಡಿದ್ದಾರೆ. ಇವರ ಬಗ್ಗೆ ಮಾಹಿತಿ ಇದ್ದಲ್ಲಿ ಮೂಡುಬಿದರೆ ಪೋಲೀಸ್ ಠಾಣೆಗೆ ಮಾಹಿತಿ ನೀಡಬೇಕೆಂದು ಪೋಲೀಸ್ ಪ್ರಕಟಣೆ ತಿಳಿಸಿದೆ.
