ಸುದ್ದಿ9ಬಂಟ್ವಾಳ: : ಭಾರತೀಯ ಜನತಾ ಪಾಟರ್ಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ನೇತೃತ್ವದಲ್ಲಿ ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ್ ನಾಯಕ್ ಸಾರಥ್ಯದ 13 ದಿನಗಳ ‘ಗ್ರಾಮದೆಡೆಗೆ ಬಿಜೆಪಿ ನಡಿಗೆ’ಯ ಆರನೇ ದಿನದ ಪಾದಾಯಾತ್ರೆಗೆ ಸೋಮವಾರ ಬೆಳಿಗ್ಗೆ ಹಳೇಗೇಟುವಿನಲ್ಲಿ ಚಾಲನೆ ನೀಡಲಾಯಿತು. ವಂದೆ ಮಾತರಂ ಹಾಡಿನ ಬಳಿಕ ಆರಂಭಗೊಂಡ ಪಾದಾಯಾತ್ರೆ ವಿದ್ಯಾ ಆನಂದ ಅವರ ಮನೆಯಿಂದ ಹೊರಟು ದೇವಸ್ಯಪಡೂರು, ದೇವಸ್ಯ ಮುಡೂರು, ಸರಪಾಡಿ, ಮಣಿನಾಲ್ಕೂರು, ಉಳಿ ಗ್ರಾಮಗಳಲ್ಲಿ ಸಂಚರಿಸಿತು. ಆರನೇ ದಿನದ ಪಾದಯಾತ್ರೆಯಲ್ಲಿ ಕಾರ್ಯಕ್ರಮದ ರುವಾರಿ ರಾಜೇಶ್ ನಾಕ್ ಉಳಿಪಾಡಿಗುತ್ತು, ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಜಿ.ಆನಂದ, ಪ್ರಮುಖರಾದ ಪುರುಷ ಸಾಲ್ಯಾನ್ ನೆತ್ತರಕೆರೆ, ಪ್ರಥ್ವಿರಾಜ್, ರಝಾಕ್, ಗಣೇಶ್ ರೈ, ಚೇತನ್, ವಿಲಾಸಿನಿ, ಶೀಲಾ, ರಾಮಚಂದ್ರ ಭಟ್ ಮತ್ತಿತರರು ಹಾಜರಿದ್ದರು.

20vp rajesh naik

 

 

By suddi9

Leave a Reply

Your email address will not be published. Required fields are marked *