ಬಜಪೆ: ಶ್ರೀ ಕ್ಷೇತ್ರ ಕಟೀಲು ಶ್ರೀ ದುರ್ಗಾ ಪರಮೇಶ್ವರೀ ದೇವಳದಿಂದ ಪ್ರವರ್ತಿತ ಆರು ದಶಾವತಾರ ಯಕ್ಷಗಾನ ಮಂಡಳಿಗಳ ವರ್ಷದ ತಿಂಗಾಟ ಪ್ರಾರಂಭಕ್ಕೆ ಪೂರ್ವಭಾವಿಯಾಗಿ ರಥಬೀದಿಯಲ್ಲಿ ಆರು ರಂಗಸ್ಥಳಗಳಲ್ಲಿ ಏಕಕಾಲದಲ್ಲಿ ಆರು ಮೇಳಗಳ ಯಕ್ಷಗಾನದ ವೈಭವ ಬುಧವಾರ ಸಂಪನ್ನಾಗೊಳ್ಳಲಿದೆ.
16vm rangasthala
ಸಂಜೆ 6.30ಕ್ಕೆ ದೇವಿಯ ಸನ್ನಿಯಲ್ಲಿ ಆರೂ ಮೇಳಗಳ ಕಲಾವಿದರು (ವೇಷಧಾರಿ)ಗಳಿಗೆ ಅಸ್ರಣ್ಣಾರು ಗೆಜ್ಜೆ ಪ್ರಧಾನ ಮಾಡುತ್ತಾರೆ ಬಳಿಕ ಭಾಗವತರುಗಳ ಸುತ್ತಿ ಪದ್ಯ ಹಿಮ್ಮೇಳಕ್ಕೆ ಗೆಜ್ಜೆ ಕಟ್ಟಿದ ವೇಷಧಾರಿಗಳು ಯಕ್ಷಗಾನ ಸೇವೆ ಪ್ರದರ್ಶಿಸಿ ಪ್ರದಕ್ಷಿಣೆಯಲ್ಲಿ ಬಂದು ಗಣಪತಿ ಸನ್ನಿಯಲ್ಲಿ ನಾಟ್ಯ ಸೇವೆ ಗೈದು ಬಳಿಕ ಸರಸ್ವತೀ ಸದನದಲ್ಲಿ ಏಕಕಾಲದಲ್ಲಿ ಎಲ್ಲಾ ಆರೂ ಮೇಳಗಳ ದೇವರ ಚೌಕಿ ಪೂಜೆ ನಡೆಯುತ್ತದೆ ಈ ಎಲ್ಲಾ ಸೊಬಗುಗಳನ್ನು ಕಾಣುವುದೇ ಮಹದಾನಂದ.

By suddi9

Leave a Reply

Your email address will not be published. Required fields are marked *