ಉಳ್ಳಾಲ:ಬೈಕಿನಲ್ಲಿ ಬರುತ್ತಿದ್ದ ಯುವಕನ ಮೇಲೆ ನಾಲ್ವರು ಅಪರಿಚಿತರ ತಂಡ ತಲವಾರು ದಾಳಿ ನಡೆಸಿದ ಘಟನೆ ಉಳ್ಳಾಲದ ಕೋಟೆಪುರ ಡೀರೋಡ್ ಎಂಬಲ್ಲಿ ನಿನ್ನೆ ತಡರಾತ್ರಿ ವೇಳೆ ಸಂಭವಿಸಿದೆ.
ಉಳ್ಳಾಲಬೈಲು ನಿವಾಸಿ ಇಕ್ಬಾಲ್ (30) ದಾಳಿಗೊಳಗಾದವರು. ತಲೆಗೆ ಗಾಯಗೊಂಡಿರುವ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಕ್ಬಾಲ್ ಅವರು ಕೋಟೆಪುರದಲ್ಲಿರುವ ಪತ್ನಿ ಮನೆಗೆ ತೆರಳಿ ವಾಪಸ್ಸಾಗುವ ಸಂದರ್ಭ ಡೀರೋಡ್ ಸಮೀಪ ಅಡ್ಡಗಟ್ಟಿದ ನಾಲ್ವರ ತಂಡ ತಲವಾರಿನಿಂದ ದಾಳಿ ನಡೆಸಿದೆ ಎನ್ನಲಾಗಿದೆ. ಈ ವೇಳೆ ತಲೆಗೆ ಗಂಭೀರವಾದ ಗಾಯವಾಗಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಿಂದಾಗಿ ಉಳ್ಳಾಲದಲ್ಲಿಯೂ ಬಿಗುವಿನ ವಾತಾವರಣ ಉಂಟಾಗಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.

By suddi9

Leave a Reply

Your email address will not be published. Required fields are marked *