ಬಂಟ್ವಾಳ : ಡಿ.12ರಿಂದ ಡಿ.19 ವರೆಗೆ ನಡೆಯಲಿರುವ ಅಖಂಡ ಭಜನಾ ಸಪ್ತಾಹ ಮತ್ತು ಧರ್ಮ ಜಾಗರಣಾ ಪ್ರತಿಷ್ಠಾನದ ವಾರ್ಷಿಕೋತ್ಸವದ ಆಮಂತ್ರಣ ಪತ್ರವನ್ನು ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಧಾರ್ಮಿಕ ಮುಂದಾಳು ಕೈಯೂರು ನಾರಾಯಣ ಭಟ್ ರವರು ಸಮಾಜದ ಒಳಿತಿಗಾಗಿ ಹಮ್ಮಿಕೊಳ್ಳಲಾದ ಈ ಶುಭ ಮಂಗಳ ಕಾರ್ಯಕ್ರಮಕ್ಕೆ ಎಲ್ಲರೂ ಸಂಪೂರ್ಣ ಭಾ ಗಿಗಳಾಗಿ ಪ್ರೋತ್ಸಾಹಿಸಬೇಕೆಂದರು. ಭಜನೆಯೊಂದಿಗೆ ವಿವಿಧ ಪೂಜೆಗಳು , ಹೋಮ , ಧಾರ್ಮಿಕ ಸಭೆ , ಅನ್ನಸಂತರ್ಪಣೆ ಮೊದಲಾದ ಕಾರ್ಯಕ್ರಮಗಳು ಇದ್ದು ಎಲ್ಲರಿಗೆ ಒಳ್ಳೆದಾಗಲಿ ಎಂದು ಹಾರೈಸಿದರು. ಪದಾಧಿಕಾರಿಗಳಾದ ಸತೀಶ್ ಕುಕ್ಕಾಜೆಬೈಲು , ಗಣೇಶ್ ಆಚಾರ್ಯ, ಶೇಖರ ಡಿ., ನ್ಯಾಯವಾದಿ ರ ವೀಂದ್ರ ಕುಕ್ಕಾಜೆ , ಚಂದ್ರಮೋಹನ್ ಕುಕ್ಕಾಜೆ , ಭಾಸ್ಕರ ಮದನಾಜೆ, ಸತೀಶ್ ಮದನಾಜೆ, ಸಂದೇಶ ಕುಕ್ಕಾಜೆ , ಶ್ರೀ ದೇವಿ ಕೈಯೂರು, ಜಗದೀಶ್ ಹೊಳ್ಳ, ಯೋಗೀಶ್ ನೋಳ, ಜಯಪ್ರಕಾಶ್ ಆಚಾರ್ಯ, ಅರ್ಚಕರಾದ ಶಿವಶಂಕರ್ ಭಟ್, ಸಂದೀಪ್ ಮದನಾಜೆ ಮತ್ತು ಅನೇಕ ಮಂದಿ ಯು ಕಾರ್ಯಕರ್ತರು ಮಹಿಳಾ ಕಾರ್ಯಕರ್ತರು ಉಪಸ್ಥಿತರಿದ್ದರು.
